'ದಿ ಕರ್ದಾಶಿಯನ್ಸ್' ಶೋನ ಹೊಸ ಎಪಿಸೋಡಿನಲ್ಲಿ ಕಿಮ್ ಮತ್ತು ಕ್ಲೋಯಿ ಭಾರತಕ್ಕೆ ಬಂದಿದ್ದನ್ನು ಮತ್ತು ಅಂಬಾನಿ ಮದುವೆಯಲ್ಲಿ ಭಾಗವಹಿಸಿದ್ದನ್ನು ಮಾತನಾಡಿದ್ದಾರೆ. ಅಂಬಾನಿ ಯಾರೆಂದೇ ನಮಗೆ ಗೊತ್ತಿರಲಿಲ್ಲ. ಆದರೆ, ನಮಗೆ ಪರಿಚಯವಿರುವ ಕಾಮನ್ ಫ್ರೆಂಡ್ಸ್ ಇದ್ದಾರೆ. ಅದರಲ್ಲಿ ಒಬ್ಬರು ಜುವೆಲ್ಲರಿ ಡಿಸೈನರ್ ಲೋರೈನ್ ಶ್ವಾರ್ಟ್ಸ್. ಅವರೇ ಅಂಬಾನಿ ಮಗನ ಮದುವೆಗೆ ಆಭರಣಗಳನ್ನು ಡಿಸೈನ್ ಮಾಡಿದ್ದರು. ಅವರ ಮೂಲಕವೇ ಅಂಬಾನಿ ಕುಟುಂಬ ನಮ್ಮನ್ನು ಸಂಪರ್ಕಿಸಿದರು.