ಮಣಿಕರ್ಣಿಕಾ ಸಿನಿಮಾ ಚರ್ಚೆಗೆಂದು ಹೋದರೆ ನೀವು ತುಂಬಾ ಹಾಟ್ ಎಂದರು..!

First Published | Sep 23, 2021, 5:44 PM IST
  • ಸಿನಿಮಾದಲ್ಲಿ ಪಾತ್ರ ಮಾಡೋ ಬಗ್ಗೆ ಚರ್ಚಿಸೋಕೆ ಹೋದ್ರೆ ನಡೆದಿದ್ದೇ ಬೇರೆ
  • ಸಿನಿಮಾ ಟಾಪಿಕ್ ಬದಲು ನೀವು ತುಂಬಾ ಹಾಟ್ ಎಂಬ ಮಾತು

ನಟಿ ನಿಯಾ ಶರ್ಮಾ ಬಾಲಿವುಡ್ ಆಫೀಸ್‌ಗೆ ಭೇಟಿ ಕೊಟ್ಟ ಸಂದರ್ಭವನ್ನು ನೆನಪಿಸಿಕೊಂಡು ಅದು ಅಷ್ಟೊಂದು ಚಂದದ ಅನುಭವವಾಗಿರಲಿಲ್ಲ ಎಂದು ಹೇಳಿದ್ದಾರೆ.

ತಾನು ಬಾಲಿವುಡ್ ಆಫೀಸ್‌ಗೆ ಹೋಗಿಲ್ಲ, ಒಂದು ಬಾರಿ ಹೋಗಿದ್ದೆ. ಅದು ಆಹ್ಲಾದಕರ ಅನುಭವವಾಗಿರಲಿಲ್ಲ ಎಂದು ಹೇಳಿದ್ದಾರೆ. ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿಯಲ್ಲಿ ನಟಿಸಲು ಮಾತುಕತೆಗಾಗಿ ಸಭೆ ನಡೆಸಿದ್ದನ್ನು ನಟಿ ನೆನಪಿಸಿಕೊಂಡಿದ್ದಾರೆ..

Tap to resize

ಅದು ನನ್ನ ವ್ಯರ್ಥ ಸಮಯ ಎಂದೂ ಹೇಳಿದ್ದಾರೆ. ನಿಯಾ ಅವರು ಚಲನಚಿತ್ರ ನಿರ್ದೇಶಕರು ಅಥವಾ ನಿರ್ಮಾಪಕರ ಕಚೇರಿಗೆ ಹೋಗಲು ಬಯಸುವುದಿಲ್ಲ ಎಂದಿದ್ದಾರೆ.

ಅವರು ಕಿರುತೆರೆ ಉದ್ಯಮದಿಂದ ಬಂದಿದ್ದರಿಂದ ಸಿನಿಮಾಗಿಂತ ಕಡಿಮೆ ಎಂದು ಟ್ರೀಟ್ ಮಾಡಿಸಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ನೀವು ನಿಮ್ಮನ್ನು ಹಾಟ್ ಎಂದ ದೊಡ್ಡ ಬಾಲಿವುಡ್ ನಿರ್ದೇಶಕ ಅಥವಾ ನಿರ್ಮಾಪಕರನ್ನು ಭೇಟಿ ಮಾಡಿದ್ದೀರಾ ಎಂದು ಕೇಳಿದ್ದಕ್ಕೆ ನಟಿ ಪ್ರತಿಕ್ರಿಯಿಸಿದ್ದಾರೆ.

ರೇಡಿಯೋ ಹೋಸ್ಟ್ ಸಿದ್ಧಾರ್ಥ್ ಕಣ್ಣನ್ ಜೊತೆ ಮಾತನಾಡಿದ ನಿಯಾ, ಇಲ್ಲ ಆದರೆ ಮಣಿಕರ್ಣಿಕಾದಲ್ಲಿ ಸ್ವಲ್ಪ ವಿಚಾರಕ್ಕೆ ಸಂಬಂಧಿಸಿ ಮೀಟಿಂಗ್ ಇತ್ತು. ಅದೊಂದು ಮೂರ್ಖ ಸಂಭಾಷಣೆಯಾಗಿತ್ತು ಎಂದಿದ್ದಾರೆ.

ನಾನು ಮತ್ತೆ ಹೋಗಲಿಲ್ಲ. ಇದು ಯಾವುದೇ ಪ್ರಯೋಜನವಿಲ್ಲದ ಯೋಗ್ಯವಲ್ಲದ ಸಂಭಾಷಣೆಯಾಗಿತ್ತು. ಇದು ಸಮಯ ಹಾಳು ಕೆಲಸ ಅರಿವಾಯ್ತು ಎಂದಿದ್ದಾರೆ.

ಅವರು ನನ್ನನ್ನು ತುಂಬಾ ಹಾಟ್ ಆಗಿ ಕಾಣುತ್ತೀರಿ ಎಂದಾಗ ನಾನಂತೂ ಸೀರಿಯಸ್ಲಿ ಎಂಬಂತೆ ನೋಡಿದೆ. ಸಿನಿಮಾ ಕುರಿತ ಸಂಭಾಷನನೆಯಲ್ಲಿ ಇದೆಂಥಾ ಮಾತು ಎಂದಿದ್ದಾರೆ ನಟಿ. ಮಣಿಕರ್ಣಿಕಾ: ರಾಣಿ ಲಕ್ಷ್ಮಿಬಾಯಿ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಿದ್ದಾರೆ

Latest Videos

click me!