ಕಿಯಾರಾರ ಲಕ್ಷುರಿಯಸ್‌ ಲೈಫ್‌ ಸ್ಟೈಲ್‌ ಹಾಗೂ ದುಬಾರಿ ವಸ್ತುಗಳು !

ತಮ್ಮ ಅಭಿನಯದ ಮೂಲಕ ನಿಧಾನವಾಗಿ ಕಿಯಾರಾ ಅಡ್ವಾಣಿ ಬಾಲಿವುಡ್‌ನಲ್ಲಿ ನೆಲೆಯೂರುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಸಿನಿಮಾರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಸಖತ್‌ ಲಕ್ಷುರಿಯಸ್‌ ಲೈಫ್‌ಸ್ಟಯಳ್‌ ಹೊಂದಿರುವ ಕಿಯಾರಾ ಹೊಂದಿರುವ ಅತಿ ದುಬಾರಿ ವಸ್ತುಗಳ ಒಂದು ಸಣ್ಣ ಝಲಕ್‌ ಇಲ್ಲಿದೆ. 

ಸಿನಿಮಾ ಇಂಡಸ್ಟ್ರಿಯಿಯಲ್ಲಿ ಯಶಸ್ಸು ಗಳಿಸುವ ಜೊತೆಗೆ, ಕಿಯಾರಾ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಟಿಯ ನೆಟ್‌ವರ್ತ್‌ ಹೆಚ್ಚಳದೊಂದಿಗೆ ಆಸ್ತಿ, ಐಷಾರಾಮಿ ಮನೆ, ಹೈ ಎಂಡ್  ಕಾರುಗಳ  ಜೊತೆ ದುಬಾರಿ ಬ್ರಾಂಡ್‌ಗಳ ಬ್ಯಾಗ್‌, ಶೂಗಳ ಸಂಗ್ರಹವನ್ನು ಹೊಂದಿದ್ದಾರೆ.

ಕಿಯಾರಾ ಅಡ್ವಾಣಿ ಬಾಲಿವುಡ್‌ನ ಅತ್ಯಂತ ಪ್ರೀತಿಯ ನಟಿಯರಲ್ಲಿ ಒಬ್ಬರು. ಅವರು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಹಲವು ದುಬಾರಿ ವಸ್ತುಗಳನ್ನು ಖರೀದಿಸಿದ್ದಾರೆ. ಅವುಗಳು ಇಲ್ಲಿವೆ ನೋಡಿ. 


ಕ್ರಿಶ್ಚಿಯನ್ ಲೌಬೌಟಿನ್ ಬೂಟುಗಳು:
ಕಿಯಾರಾ ಅಡ್ವಾಣಿ ತಮ್ಮ ಯ್ಯೂನಿಕ್‌ ಫ್ಯಾಷನ್ ಪ್ರಜ್ಞೆಯಿಂದ ಸದಾ ಗಮನ ಸೆಳೆಯುತ್ತಾರೆ. ನಟಿ  ಹೊಂದಿರುವ ಕ್ರಿಶ್ಚಿಯನ್ ಲೌಬೌಟಿನ್ ಬ್ರಾಂಡ್‌ನ  ಹೈ ಸ್ವೀಡ್ ಬೂಟುಗಳ ಬೆಲೆ ಕೇಳಿದ್ದಾರೆ ಸಾಮಾನ್ಯ ಜನರಿಗೆ ಶಾಕ್‌ ಆಗುವುದು ಗ್ಯಾರಂಟಿ. ಕಿಯಾರಾ ಈ ಫೋಟೋದಲ್ಲಿ ಧರಿಸಿರುವ ಬೂಟ್ಸ್‌ ಬೆಲೆ 1.3 ಲಕ್ಷ ರೂ.

ಶನೆಲ್ ಬ್ಯಾಗ್:
ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದರೂ ಸಹ ಕಿಯಾರಾ ಕಬೀರ್ ಸಿಂಗ್ ಮತ್ತು ಲಸ್ಟ್ ಸ್ಟೋರಿ ಸಿನಿಮಾಗಳಿಂದ ಹೆಚ್ಚು ಜನಪ್ರಿಯತೆ ಗಳಿಸಿದರು. ಕಿಯಾರಾ ದುಬಾರಿ ಶನೆಲ್ ಬ್ಯಾಗ್ ಹೊಂದಿದ್ದಾರೆ. ಬಿಳಿ ಬಣ್ಣದ ಬ್ಯಾಗ್‌ನ ಬೆಲೆ 3,53,707 ರೂಪಾಯಿಗಳು.

kiara

ಮರ್ಸಿಡಿಸ್ ಬೆಂಜ್ E220D:
ಟ್ರ್ಯಾವೆಂಲಿಗ್‌ ಅಂದರೆ  ಕಿಯಾರಾಗೆ ತುಂಬಾ ಇಷ್ಟ. ಇದರ ಜೊತೆ ದುಬಾರಿ ಕಾರುಗಳ ಬಗ್ಗೆ ಸಹ ಒಲವನ್ನು ಹೊಂದಿದ್ದಾರೆ ಇವರು. ಕಿಯಾರಾ ಕಾಸ್ಟ್‌ಲಿ ಕಾರುಗಳಲ್ಲಿ ಒಂದಾದ ಮರ್ಸಿಡಿಸ್ ಬೆಂಜ್ E220D ಓನರ್‌ ಕೂಡ ಹೌದು. ಅದರ ಬೆಲೆ ಸುಮಾರು 60 ಲಕ್ಷಗಳು.

ಅಪಾರ್ಟ್ಮೆಂಟ್:
ಸಿನಿಮಾಗಳ ಹೊರತಾಗಿ ನಟಿ ಪ್ರಚಾರಗಳು ಮತ್ತು ಜಾಹೀರಾತುಗಳಿಂದ ಸಾಕಷ್ಟು ಗಳಿಸುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ನಟಿ  ಒಂದು ಜಾಹೀರಾತಿಗಾಗಿ 20 ಲಕ್ಷ ರೂಪಾಯಿಗಳ ಫೀಸ್‌ ಗಳಿಸುತ್ತಾರೆ. ಈ ಮೂಲಗಳ ಅವರ ವಾರ್ಷಿಕ 2-3 ಕೋಟಿ ರೂ. ಕಿಯಾರಾ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಕಿಯಾರಾರ ಮನೆ ಬೆಲೆ  14 ರಿಂದ 15 ಕೋಟಿ ರೂ ಎಂದು ಅಂದಾಜಿಸಲಾಗಿದೆ.

ಬರ್ಬೆರ್ರಿ ಜಾಕೆಟ್:
ಸೋಶಿಯಲ್‌ ಮೀಡಿಯಾದಲ್ಲಿ ಸಕ್ಕತ್‌ ಆಕ್ಟೀವ್‌ ಆಗಿರುವ ಕಿಯಾರಾ ಸಿಕ್ಕಾಪಟ್ಟೆ ಫಾಲೋವರ್ಸ್‌ ಹೊಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ  ಬ್ರಾಂಡ್ ಪ್ರಚಾರಕ್ಕಾಗಿ ಲಕ್ಷ ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಈ ಫೋಟೋದಲ್ಲಿ ಕಿಯಾರಾ ಅಡ್ವಾಣಿ  ಕ್ಲಾಸಿಕ್ ಬರ್ಬೆರ್ರಿ ಜಾಕೆಟ್ ಧರಿಸಿದ್ದರು ಇದರ ಬೆಲೆ ಸುಮಾರು 1 ಲಕ್ಷ ರೂ.  

Latest Videos

click me!