ಅದ್ದೂರಿಯಾಗಿ ರಾಮ್ ಚರಣ್ ಹುಟ್ಟುಹಬ್ಬ ಆಚರಿಸಿದ ಬಾಲಿವುಡ್ ನಟಿ ಕಿಯಾರಾ: ಫೋಟೋ ವೈರಲ್

First Published | Mar 26, 2023, 2:18 PM IST

ರಾಮ್ ಚರಣ್ ಹುಟ್ಟುಹಬ್ಬವನ್ನು ಮುಂಚಿತವಾಗಿ ಕಿಯಾರಾ ಅಡ್ವಾಣಿ ಮತ್ತು RC15 ಸಿನಿಮಾತಂಡ ಆಚರಣೆ ಮಾಡಿದೆ.  

ram charan

ಟಾಲಿವುಡ್ ಸ್ಟಾರ್ ಆರ್ ಆರ್ ಆರ್ ಹೀರೋ ರಾಮ್ ಚರಣ್ ಹುಟ್ಟುಹಬ್ಬ ಸಮೀಸುತ್ತಿದೆ. ಜನ್ಮದಿನಕ್ಕೂ ಮೊದಲೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಲಾಗಿದೆ. ಅಷ್ಟಕ್ಕೂ ರಾಮ್ ಚರಣ್ ಹುಟ್ಟುಹಬ್ಬ ಯಾವಾಗ ಅಂತಿರಾ? ಇದೇ ತಿಂಗಳು ಮಾರ್ಚ್ 26ರಂದು ರಾಮ್ ಚರಣ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 

38ನೇ ವರ್ಷಕ್ಕೆ ಕಾಲಿಟ್ಟಿರುವ ನಟಿ ರಾಮ್ ಚರಣ್ ಅವರ ಹುಟ್ಟುಹಬ್ಬವನ್ನು ಮುಂಚಿತವಾಗಿಯೇ ಆಚರಣೆ ಮಾಡಲಾಗಿದೆ. ಅದು ಬಾಲಿವುಡ್ ಸ್ಟಾರ್ ನಟಿ ಕಿಯಾರಾ ಅಡ್ವಾನಿ ಅವರು ಆಚರಣೆ ಮಾಡಿದ್ದಾರೆ. 

Tap to resize

ರಾಮ್ ಚರಣ್ ಸದ್ಯ RC15 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಸೆಟ್ ನಲ್ಲಿ ರಾಮ್ ಚರಣ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. 

ರಾಮ್ ಚರಣ್ ಎಂಟ್ರಿ ಕೊಡುತ್ತಿದ್ದಂತೆ ಹೂವಿನ ಸುರಿಮಳೆಗೈಯಲಾಯಿತು. ಸೆಟ್ ನಲ್ಲಿ ಇದ್ದವರು ಅದ್ದೂರಿಯಾಗಿ ಸ್ವಾಗತ ಮಾಡಿದರು. ಬಳಿಕ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. 

ಕಿಯಾರಾ ಅಡ್ವಾನಿ ಕೂಡ ರಾಮ್ ಚರಣ್ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ರಾಮ್ ಚರಣ್ ಜನ್ಮದಿನಾಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 
 

ರಾಮ್ ಚರಣ್ ಹುಟ್ಟುಹ್ಬಬದ ಪಾರ್ಟಿಯಲ್ಲಿ ನಟಿ ಕಿಯಾರಾ, ನಿರ್ದೇಶಕ ಶಂಕರ್, ನಟ ಮತ್ತು ನೃತ್ಯ ನಿರ್ದೇಶಕ ಪ್ರಭುದೇವ ಸೇರಿದಂತೆ ಇಡೀ ಸಿನಿಮಾತಂಡ ಹಾಜರಿದ್ದರು. 

RC15 (ತಾತ್ಕಾಲಿಕ ಹೆಸರು) ಸಿನಿಮಾ ಟೈಟಲ್ ಇನ್ನೂ ಪೈನಲ್ ಆಗಿಲ್ಲ. ಆದರೆ ಆಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಸಾಕಷ್ಟು ಚಿತ್ರೀಕರಣ ಮಾಡಿದೆ ಸಿನಿಮಾತಂಡ. ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. ಕಿಯಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 

RC15 ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಆರ್ ಆರ್ ಆರ್ ಬಳಿಕ ರಾಮ್ ಚರಣ್ ಮತ್ತೆ ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. 

ರಾಮ್ ಚರಣ್ ನಟನೆಯ ಆರ್ ಆರ್ ಆರ್ ಸಿನಿಮಾ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಪ್ರಶಸ್ತಿ ಸಮಾರಂಭಕ್ಕೆ ಆರ್ ಆರ್ ಆರ್ ತಂಡದ ಜೊತೆ ರಾಮ್ ಚರಣ್ ಕೂಡ ಯುಸ್ ಹಾರಿದ್ದರು. ಪ್ರಶಸ್ತಿ ಸಮಾರಂಭ ಮುಗಿಸಿ ಬಂದಿರುವುದು ಮತ್ತು ಹುಟ್ಟುಹಬ್ಬ ಸೇರಿಸಿ ಅದ್ದೂರಿಯಾಗಿ ಸೆಲೆಬ್ರೇಷನ್ ಮಾಡಿದ್ದಾರೆ. 

Latest Videos

click me!