ಸೋಲಿನಿಂದ ಟ್ರೋಲ್ ಆದ ಸ್ಮೃತಿ ಇರಾನಿಗೆ ಕೆಜಿಎಫ್ ನಟಿ ಸಾಂತ್ವನ, ನಿಮ್ಮೊಂದಿಗಿದ್ದೇನೆ ಎಂದ ಮೌನಿ ರಾಯ್!

First Published | Jun 6, 2024, 4:07 PM IST

ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅಮೆಥಿ ಕ್ಷೇತ್ರದಲ್ಲಿ ಮುಗ್ಗರಿಸಿ ತೀವ್ರ ಟ್ರೋಲಿಗೆ ಗುರಿಯಾಗಿದ್ದಾರೆ. ಸ್ಮೃತಿ ಇರಾನಿ ಕುರಿತ ಮೀಮ್ಸ್‌ಗಳು ಹರಿದಾಡುತ್ತಿದೆ. ಸೋಲಿನಿಂದ ನಿರಾಸೆಗೊಂಡಿರುವ ಸ್ಮೃತಿ ಇರಾನಿಗೆ ಇದೀಗ ಕೆಜಿಎಫ್ ನಟಿ ಮೌನಿ ರಾಯ್ ಸಾಥ್ ನೀಡಿದ್ದಾರೆ. ಮಹತ್ವದ ಸಂದೇಶ ನೀಡುವ ಮೂಲಕ ಸ್ಮೃತಿ ಇರಾನಿಗೆ ಜೊತೆಗೆ ನಿಂತಿದ್ದಾರೆ.
 

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕಿ, ಅಮೇಥಿಯ ಸಂಸದೆ ಸ್ಮೃತಿ ಇರಾನಿ ಮುಗ್ಗರಿಸಿದ್ದರು. ಕಾಂಗ್ರೆಸ್ ವಿರುದ್ದ ಸೋಲು ಅನುಭವಿಸಿದ ಸ್ಮೃತಿ ಇರಾನಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟ್ರೋಲ್ ಆಗಿದ್ದಾರೆ.

ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದ ಸ್ಮೃತಿ ಇರಾನಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರ್ ಲಾಲ್ ವಿರುದ್ದ ಸೋಲು ಕಂಡಿದ್ದಾರೆ. ಈ ಸೋಲಿಗೆ ಇರಾನಿ ಟಾರ್ಗೆಟ್ ಮಾಡಿ ಮೀಮ್ಸ್ ಮಾಡಿ ಹರಿಬಿಡಲಾಗಿದೆ. ಇದರ ನಡುವೆ ಸ್ಮೃತಿ ಇರಾನಿ ಪರ ಹಲವರು ಬೆಂಬಲಕ್ಕೆ ನಿಂತಿದ್ದಾರೆ.

Tap to resize

ನಟಿಯಾಗಿ ಮಿಂಚಿ ರಾಜಕೀಯಕ್ಕೆ ಬಂದ ಸ್ಮೃತಿ ಇರಾನಿಗೆ ಬಹುತೇಕ ಬಾಲಿವುಡ್ ನಟ ನಟಿಯರೂ ಬೆಂಬಲ ನೀಡಿದ್ದಾರೆ. ಈ ಪೈಕಿ ಕೆಜಿಎಫ್ ನಟಿ ಮೌನಿ ರಾಯ್, ಸ್ಮೃತಿ ಇರಾನಿಗೆ ಮಹತ್ವದ ಸಂದೇಶ ಕಳುಹಿಸಿದ್ದಾರೆ
 

ಯಾವತ್ತೂ ನಿಮ್ಮೊಂದಿಗಿದ್ದೇನೆ ಎಂದು ಮೌನಿ ರಾಯ್ ಸಂದೇಶ ಕಳುಹಿಸಿದ್ದಾರೆ. ಈ ಮೂಲಕ ಸೋಲಿನಿಂದ ಹತಾಶೆಗೊಂಡಿರುವ ಸ್ಮೃತಿ ಇರಾನಿಗೆ ಮೌನಿ ರಾಯ್ ಬೆಂಬಲಕ್ಕೆ ನಿಂತಿದ್ದಾರೆ.
 

ಮೌನಿ ರಾಯ್ ಜೊತೆಗೆ ನೀನಾ ಗುಪ್ತಾ, ಸೋನು ಸೋದ್ ಸೇರಿದಂತೆ ಹಲವರು ಸ್ಮೃತಿ ಇರಾನಿ ಜೊತೆ ನಿಂತಿದ್ದಾರೆ. ಈ ಮೂಲಕ ಮಾಜಿ ಸಂಸದೆಗೆ ಮತ್ತಷ್ಟು ಶಕ್ತಿ ನೀಡಿದ್ದಾರೆ. ಇಷ್ಟೇ ಅಲ್ಲ ಮತ್ತೆ ಆತ್ಮವಿಶ್ವಾಸದಿಂದ ಕಮ್ ಬ್ಯಾಕ್ ಮಾಡಲು ಪ್ರೇರೇಪಿಸಿದ್ದಾರೆ.

ಕ್ಯೂಂಕಿ ಸಾಸ್ ಭಿ ಕಭಿ ಬಹು ಸೀರಿಯಲ್‌ನಲ್ಲಿ ಸ್ಮೃತಿ ಇರಾನಿ ಹಾಗೂ  ಮೌನಿ ರಾಯ್ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸ್ಮೃತಿ ಇರಾನಿ ಜೊತೆ ಮೌನಿ ಆತ್ಮೀಯರಾಗಿದ್ದಾರೆ.
 

smriti irani

ಸೋಲು ಹಾಗೂ ಗೆಲುವಿನಲ್ಲಿ ಬೆಂಬಲ ನೀಡಿ ಜೊತೆಗಿದ್ದವರಿಗೆ ಸ್ಮೃತಿ ಇರಾನಿ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಟ್ರೋಲ್ ಮಾಡಿದವರಿಗೂ ಖಡಕ್ ತಿರುಗೇಟು ನೀಡಿದ್ದಾರೆ. 
 

Smriti Irani

2014ರಲ್ಲಿ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸೋತಿದ್ದ ಸ್ಮೃತಿ ಇರಾನಿ, 2019ರಲ್ಲಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಮತ್ತೆ ಸೋಲು ಕಂಡಿದ್ದಾರೆ. 
 

Latest Videos

click me!