ಹುಡುಗರ ರೀತಿ ಹೇರ್‌ಕಟ್ ಮಾಡಿಸಿಕೊಂಡ್ರಾ ಕೀರ್ತಿ ಸುರೇಶ್; ಅತ್ತೆ-ಮಾವ ಗಂಡುಬೀರಿ ಅಂದಿಲ್ವಾ?
ವೈರಲ್ ಆಯ್ತು ನಟಿ ಕೀರ್ತಿ ಸುರೇಶ್ ಹೊಸ ಲುಕ್. ಮದುವೆ ಆದ್ಮೇಲೆ ಏನಿದು ತಮಾಷೆ ಎಂದ ನೆಟ್ಟಿಗರು.
ವೈರಲ್ ಆಯ್ತು ನಟಿ ಕೀರ್ತಿ ಸುರೇಶ್ ಹೊಸ ಲುಕ್. ಮದುವೆ ಆದ್ಮೇಲೆ ಏನಿದು ತಮಾಷೆ ಎಂದ ನೆಟ್ಟಿಗರು.
ಸೌತ್ ಇಂಡಿಯಾ ಸಿನಿಮಾಗಳಲ್ಲಿ ಸಖತ್ ಹೆಸರು ಮಾಡಿರುವ ಕೀರ್ತಿ ಸುರೇಶ್ ಇದ್ದಕ್ಕಿದ್ದಂತೆ ಹೇರ್‌ಕಟ್ ಮಾಡಿಸಿಕೊಂಡಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಬೇಸಿಗೆ ಶುರುವಾಯ್ತು ಅಂದ್ರೆ ಸಾಕು ಕೂದಲು ತುಂಡ ಮಾಡಿಸಿಕೊಳ್ಳುವುದು ತುಂಬಾ ಕಾಮನ್ ಆದರೆ ಕೀರ್ತಿ ಸುರೇಶ್ ಲುಕ್ ನೋಡಿ ಫ್ಯಾನ್ಸ್ ಇರಲಿ ಮನೆಯವರು ಕೂಡ ಶಾಕ್ ಆಗಿದ್ದಾರೆ.
ನಿಜಕ್ಕೂ ಕೀರ್ತಿ ಸುರೇಶ್ ಈ ರೀತಿ ಹೇರ್ ಕಟ್ ಮಾಡಿಸಿಕೊಂಡ್ರಾ? ಕೀರ್ತಿ ಈ ಲುಕ್‌ಗೆ ಗಂಡ ಸುಮ್ಮನೆ ಇದ್ರಾ? ಅತ್ತೆ ಮಾವ ಏನೂ ಹೇಳಿಲ್ವಾ ಅನ್ನೋದು ನೆಟ್ಟಿಗರಿಗೆ ಕಾಡುತ್ತಿರುವ ಪ್ರಶ್ನೆ.
ಆದರೆ ಅಸಲಿ ಸತ್ಯ ಬೇರೆನೇ ಇದೆ. ಹೌದು! ಕೀರ್ತಿ ಸುರೇಶ್ ಈ ರೀತಿ ಹೇರ್ ಕಟ್ ಮಾಡಿಸಿಕೊಂಡಿಲ್ಲ ಆದರೆ ಸೋಷಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು AI ತಂತ್ರಜ್ಞನ ಬಳಸಿ ಈ ಅವಾಂತರ ಮಾಡಿಟ್ಡಿದ್ದಾರೆ.
ಪಾಪ ಅಮಾಯಕರು ಇದನ್ನು ನಂಬಿ ಏನಮ್ಮ ಮದುವೆ ಆದ್ಮೇಲೆ ಡೀಸೆಂಟ್ ಆಗಿರುವುದು ಬಿಟ್ಟು ಈ ರೀತಿ ಮಾಡಿಸಿಕೊಂಡರೆ ಅತ್ತೆ ಮಾವ ನಿನ್ನನ್ನು ಗಂಡುಬೀರಿ ಅಂತಾರೆ ಎಂದು ಟ್ರೋಲ್ ಮಾಡಿದ್ದಾರೆ.
ಬಹುಕಾಲದ ಗೆಳೆಯನೊಟ್ಟಿಗೆ ಕೀರ್ತಿ ಸುರೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಣ್ಣ ಜಾಲಿ ಟ್ರಿಪ್ ನಂತರ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟರು. ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತಿದ್ದರೂ ಕೂಡ ಹೆಮ್ಮೆಯಿಂದ ತಾಳೆ ಧರಿಸಿದ್ದರು.