ಶೇವ್ ಮಾಡ್ಕೊಂಡು ಲುಕ್ ಬದಲಾಯಿಸಿದ ವಿಕ್ಕಿ, ಮೊದಲ ಕರ್ವಾ ಚೌತ್ ಸಂಭ್ರಮದಲ್ಲಿ ಕತ್ರೀನಾ

Published : Oct 14, 2022, 05:14 PM IST

ನಿನ್ನೆ ಅಂದರೆ ಅಕ್ಟೋಬರ್‌ 13ರಂದು ಕರ್ವಾ ಚೌತ್ (Karwa chauth 2022) ಹಬ್ಬವನ್ನು ದೇಶದಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಬಾಲಿವುಡ್ ಸೆಲೆಬ್ರಿಟಿಗಳು ಕರ್ವಾ ಚೌತ್ ಅನ್ನು ಸಡಗರದಿಂದ ಆಚರಿಸಿದರು. ಮದುವೆಯ ನಂತರ ಕತ್ರಿನಾ ಕೈಫ್ (Katrina Kaif )  ಅವರ ಮೊದಲ ಕರ್ವಾ ಚೌತ್ ಇದಾಗಿತ್ತು.  ಈ ಸಂದರ್ಭದ ಅನೇಕ ಫೋಟೋಗಳನ್ನು ನಟಿ ಸೋಶಿಯಲ್‌ ಮಿಡೀಯಾದಲ್ಲಿ ಹಂಚಿಕೊಂಡಿದ್ದಾರೆ. 

PREV
110
ಶೇವ್ ಮಾಡ್ಕೊಂಡು ಲುಕ್ ಬದಲಾಯಿಸಿದ ವಿಕ್ಕಿ, ಮೊದಲ ಕರ್ವಾ ಚೌತ್ ಸಂಭ್ರಮದಲ್ಲಿ ಕತ್ರೀನಾ

ಕರ್ವಾ ಚೌತ್‌ ಸೆಲೆಬ್ರೆಷನ್‌ಲ್ಲಿ ಕತ್ರಿನಾ ಕೈಫ್‌ ಕೆಂಪು ಸೀರೆಯುಟ್ಟು, ಸಿಂಧೂರ ಮತ್ತು ಕೊರಳಲ್ಲಿ ಮಂಗಳಸೂತ್ರವನ್ನು ಧರಿಸಿ ಸುಂದರವಾಗಿ ಕಾಣಿಸಿಕೊಂಡರು. ಪತಿ ವಿಕ್ಕಿ ಕೌಶಲ್ ಅವರೊಂದಿಗಿನ ತಮ್ಮ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

210

ಕತ್ರಿನಾ ಕೈಫ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಕ್ಕಿ ಕೌಶಲ್ ಜೊತೆ ಮದುವೆಯಾದರು. ಮದುವೆಯ ನಂತರ, ಅವರು ಮೊದಲ ಬಾರಿಗೆ ಸಿಂಧೂರ ಮತ್ತು ಮಂಗಳಸೂತ್ರವನ್ನು ಧರಿಸಿ ಕಾಣಿಸಿಕೊಂಡಿದ್ದಾರೆ ಮತ್ತು ಕೈಫ್ ತನ್ನ ಮೊದಲ ಕರ್ವಾ ಚೌತ್ ಅನ್ನು ಅತ್ತೆಯೊಂದಿಗೆ ಆಚರಿಸಿದರು.

310

ರಾತ್ರಿ ಚಂದ್ರನ ದರ್ಶನ ಪಡೆದು ಪೂಜೆ ಸಲ್ಲಿಸಿದ ಶಿಲ್ಪಾ ಶೆಟ್ಟಿ ಜರಡಿಯಲ್ಲಿ ಪತಿಯ ಮುಖ ನೋಡಿದ್ದಾರೆ. ಈ ಸಂದರ್ಭದಲ್ಲಿ ಶಿಲ್ಪಾ ಕೆಂಪು ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.

410

ಈ ಬಾರಿ ಕರ್ವಾ ಚೌತ್‌ನ ಅದ್ಧೂರಿ ಆಚರಣೆಯನ್ನು ಅನಿಲ್ ಕಪೂರ್ ಮನೆಯಲ್ಲಿ ಮಾಡಲಾಗಿತ್ತು. ಈ ಸಂಭ್ರಮದಲ್ಲಿ ಶಿಲ್ಪಾ ಶೆಟ್ಟಿ, ರವೀನಾ ಟಂಡನ್, ನೀಲಂ, ಭಾವನಾ ಪಾಂಡೆ, ರೀಮಾ ಜೈನ್, ಸುನಿತಾ ಕಪೂರ್ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

510

ಶಿಲ್ಪಾ ಶೆಟ್ಟಿ ಅನಿಲ್ ಕಪೂರ್ ಪತ್ನಿ ಸುನಿತಾ ಕಪೂರ್ ಜೊತೆ ಪೋಸ್ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಟ್ರೆಡಿಷನಲ್ ಲುಕ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದರು.

610

ಸುನೀತಾ ಕಪೂರ್ ಜೊತೆಗೆ ಮಹೀಪ್ ಕಪೂರ್ ಭಾವನಾ ಪಾಂಡೆ ಮತ್ತು ನೀಲಂ ಜೊತೆ ಪೋಸ್ ನೀಡಿದ್ದಾರೆ. ಎಲ್ಲರೂ ಭಾರೀ ಆಭರಣಗಳು ಮತ್ತು ಸಾಂಪ್ರದಾಯಿಕ ಲುಕ್‌ನಲ್ಲಿ ಕಂಡು ಬಂದರು.
 


 

710

ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕರ್ವಾ ಚೌತ್‌ಗೆ ಪೂಜೆ ಸಲ್ಲಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎಲ್ಲರೂ ಒಟ್ಟಿಗೆ ಕುಳಿತು ಪೂಜೆ ಮಾಡುವುದನ್ನು ಕಾಣಬಹುದು.


 

810

ರವೀನಾ ಟಂಡನ್ ಕೂಡ ತಮ್ಮ ಮನೆಯಲ್ಲಿ ಕರ್ವಾ ಚೌತ್‌ನ ಆಚರಣೆಯನ್ನು ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಹಿರಿಯ ನಟಿ ಬಿಂದಿಯಾ ಗೋಸ್ವಾಮಿ ತಮ್ಮ ಪುತ್ರಿಯರೊಂದಿಗೆ ಕಾಣಿಸಿಕೊಂಡರು.
 

910

ಚಂದ್ರ ಕಾಣಿಸಿಕೊಂಡ ನಂತರ ವರುಣ್ ಧವನ್ ಪತ್ನಿ ನತಾಶಾ ದಲಾಲ್‌ಗೆ ತಮ್ಮ ಕೈಯಿಂದಲೇ ಊಟ ಹಾಕಿದ್ದಾರೆ. ಈ ಸಂದರ್ಭದಲ್ಲಿ ಗಂಡ-ಹೆಂಡತಿ ತುಂಬಾ ಖುಷಿಯಿಂದ ಕಾಣುತ್ತಿದ್ದರು.

1010

ನೇಹಾ ಕಕ್ಕರ್ ಅವರು ಪತಿ ರೋಹನ್ ಪ್ರೀತ್ ಸಿಂಗ್ ಅವರೊಂದಿಗೆ ಕರ್ವಾ ಚೌತ್ ಆಚರಿಸಿದರು. ಅವರು ತಮ್ಮ ಪತಿಯೊಂದಿಗೆ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ದಂಪತಿ ತುಂಬಾ ರೊಮ್ಯಾಂಟಿಕ್ ಆಗಿ ಕಾಣುತ್ತಾರೆ.

Read more Photos on
click me!

Recommended Stories