ತನ್ನನ್ನು ದ್ವೇಷಿಸುತ್ತಿದ್ದರೂ ಕರೀಷ್ಮಾಗೆ ಹೆಲ್ಪ್‌ ಮಾಡಿದ ನಟ ಅಕ್ಷಯ್‌ ಕುಮಾರ್‌

Suvarna News   | Asianet News
Published : Jul 15, 2020, 06:04 PM IST

ಬಾಲಿವುಡ್‌ನ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅನ್‌ಸ್ಕ್ರೀನ್‌ ಜೋಡಿಗಳಲ್ಲಿ ಅಕ್ಷಯ್‌ ಕುಮಾರ್‌ ಹಾಗೂ ಕರೀಷ್ಮಾಕಪೂರ್ ಒಬ್ಬರು‌. ಹಾಗೆ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅಕ್ಷಯ್ ಹಾಗೂ ಕರಿಷ್ಮಾ ಕುರಿತಾದ ಒಂದು ಘಟನೆ ವೈರಲ್ ಆಗುತ್ತಿದೆ. ಅವರಿಬ್ಬರೂ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರೂ, ಒಂದು ಸಮಯದಲ್ಲಿ ಕರಿಷ್ಮಾ, ನಟ ಅಕ್ಷಯ್‌ನನ್ನು ದ್ವೇಷಿಸಲು ಪ್ರಾರಂಭಿಸಿದರು. ಕಾರಣವೇನು?

PREV
111
ತನ್ನನ್ನು ದ್ವೇಷಿಸುತ್ತಿದ್ದರೂ ಕರೀಷ್ಮಾಗೆ ಹೆಲ್ಪ್‌ ಮಾಡಿದ ನಟ ಅಕ್ಷಯ್‌ ಕುಮಾರ್‌

ಜಾನ್‌ವಾರ್‌, ಮೇರೆ ಜೀವನ್ ಸಾಥಿ, ಯಾ ಮೈನೆ ಭಿ ಪ್ಯಾರ್ ಕಿಯಾ ಹೈ ಅಕ್ಷಯ್ ಮತ್ತು ಕರಿಷ್ಮಾ ಸ್ಕ್ರೀನ್‌ ಶೇರ್‌ ಮಾಡಿಕೊಂಡ ಸಿನಿಮಾಗಳು.

211

ಕರಿಷ್ಮಾ ಜೊತೆ  ಅಕ್ಷಯ್ ಕುಮಾರ್‌ರ ಫಸ್ಟ್‌ ಸಿನಿಮಾ ದಿದಾರ್.

311

ಕರಿಷ್ಮಾ ಪ್ರತಿಷ್ಠಿತ ಕಪೂರ್‌ ಕುಟುಂಬದ ಕುಡಿ, ಅಕ್ಷಯ್‌ಗೆ ಉದ್ಯಮದಲ್ಲಿ ಗಾಡ್ ಫಾದರ್ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಇಬ್ಬರ ಹಿನ್ನೆಲೆಯಲ್ಲಿ ದೊಡ್ಡ ವ್ಯತ್ಯಾಸವಿತ್ತು.

411

ದಿದಾರ್ ಚಿತ್ರದ ಸೆಟ್‌ನಲ್ಲಿ ಕರಿಷ್ಮಾಗೆ ಕಡಿಮೆ ಗಮನ ನೀಡಲಾಯಿತು. ಅದೇ ಸಮಯದಲ್ಲಿ ನಿರ್ದೇಶಕ ಪ್ರಮೋದ್ ಚಕ್ರವರ್ತಿ ಅಕ್ಷಯ್‌ಗೆ ಉತ್ತಮ ಸ್ನೇಹಿತರಾದರು. 

511

ಅಂತಹ ಪರಿಸ್ಥಿತಿಯಲ್ಲಿ, ಕರಿಷ್ಮಾ ಒಂದು ದಿನ ಕೋಪಗೊಂಡು ಅಕ್ಷಯ್‌ಗೆ ಡೈರೆಕ್ಟರ್‌ ಚಮಚ ಎಂದಿದ್ದರು ಹಾಗೂ ತುಂಬಾ ದ್ವೇಷಿಸಲು ಪ್ರಾರಂಭಿಸಿದಳು.

611

ಅಷ್ಟೇ ಅಲ್ಲ, ಕರಿಷ್ಮಾಗೆ ಅಕ್ಷಯ್‌ನನ್ನು ನೋಡವುದು ಸಹ  ಇಷ್ಟವಾಗುತ್ತಿರಲಿಲ್ಲ. ಇದಕ್ಕೆ ವಿರುದ್ಧವಾಗಿ, ಅಕ್ಷಯ್ ಹೃದಯದಲ್ಲಿ ಕರಿಷ್ಮಾ ಬಗ್ಗೆ  ಯಾವುದೇ ಕಹಿ ಭಾವನೆ ಇರಲಿಲ್ಲ. ಆ ಸಮಯದಲ್ಲಿ ಕರಿಷ್ಮಾರ ಬಳಿ ಯಾವುದೇ ದೊಡ್ಡ ಚಿತ್ರವಿರದ ಕಾರಣ, ಇಷ್ಟವಿಲ್ಲದಿದ್ದರೂ ಅಕ್ಷಯ್ ಜೊತೆ ಅನೇಕ ಚಿತ್ರಗಳಿಗೆ ಸಹಿ ಹಾಕಬೇಕಾಯಿತು.

711

ನಂತರ ಅಕ್ಷಯ್ ಜೊತೆ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಕರಿಷ್ಮಾ ನಿರ್ಧರಿಸಿದರು. ಆಗ ಸಹಿ ಮಾಡಿದ್ದು ಯಶ್ ರಾಜ್‌ರ ದಿಲ್‌ ತೋ ಪಾಗಲ್‌ ಹೆ. ಆ ಸಿನಿಮಾ ಲ್ಲಿ ಅಕ್ಷಯ್ ಕೂಡ ಒಂದು ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಚಿತ್ರದಲ್ಲಿ ಅಕ್ಷಯ್ ಎದುರು ನಟಿಸಬೇಕಾಗಿಲ್ಲವಾದ್ದರಿಂದ ಕರೀಷ್ಮಾ ಚಿತ್ರವನ್ನು ಬಿಡಲಿಲ್ಲ. ಚಿತ್ರ ಸೂಪರ್‌ ಹಿಟ್‌ ಆಯಿತು.

811

ಕರಿಷ್ಮಾರಿಗೆ ಸಂಘರ್ಷ್‌ ಸಿನಿಮಾದ ಆಫರ್‌ ಸಿಕ್ಕಿತು. ಚಿತ್ರದ ಸ್ಕ್ರಿಪ್ಟ್ ಇಷ್ಟಪಟ್ಟರು. ಆದರೆ ಅಕ್ಷಯ್ ಈ ಚಿತ್ರದಲ್ಲಿದ್ದಾರೆ ಎಂದು ತಿಳಿದಾಗ ಸಿನಿಮಾ ಮಾಡಲು ನಿರಾಕರಿಸಿದರು ನಟಿ. ಇದೇ ರೀತಿ  ಘಟನೆ ಹೇರಾ ಫೆರಿ ಸಿನಿಮಾದ ಸಮಯದಲ್ಲೂ ಸಂಭವಿಸಿತು.

911

ಸ್ವಲ್ಪ ಸಮಯದ ನಂತರ, ಅಕ್ಷಯ್-ಕರಿಷ್ಮಾರ  ಅನೇಕ ವರ್ಷಗಳ ಹಿಂದೆ ಶೂಟಿಂಗ್‌ ಆಗಿದ್ದ ಸಿನಿಮಾ ಜಾನ್‌ವಾರ್‌ ಬಿಡುಗಡೆಯಾಯಿತು ಹಾಗೂ ಬಾಕ್ಸಾಫೀಸ್‌ನಲ್ಲಿ ಹಿಟ್‌ ಕೂಡ ಆಯಿತು.ಅದೇ ಸಮಯದಲ್ಲಿ, ಅಕ್ಷಯ್ ನಟಿಸಿದ ಹೇರಾ ಫೆರಿ ಚಿತ್ರವೂ ಬ್ಲಾಕ್ ಬಸ್ಟರ್ ಹಿಟ್ ಆಗಿ  ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದರು ನಟ. ಆದರೆ ಕರಿಷ್ಮಾರ ಕೆರಿಯರ್‌ ಕೆಳಮುಖವಾಗಿತ್ತು. 

1011

ನಂತರ ಕರಿಷ್ಮಾ ಉತ್ತಮ ಚಿತ್ರದ ಜೊತೆಗೆ ಸ್ಟಾರ್‌ ನಟನ ಜೊತೆ ಕೆಲಸ ಮಾಡಲು ಬಯಸಿದರು.ಆ ಸಮಯದಲ್ಲಿ ನಟಿಗೆ ಏಕ್ ರಿಷ್ತಾ  ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಚಿತ್ರದಲ್ಲಿ ಅಕ್ಷಯ್ ಲೀಡ್‌ ರೋಲ್‌ನಲ್ಲಿದ್ದಾರೆ ಎಂದ ತಿಳಿದ ನಂತರವೂ ಕರಿಷ್ಮಾ ಸಿನಿಮಾವನ್ನು ಒಪ್ಪಿಕೊಂಡರು.

1111

ಕರಿಷ್ಮಾ ಜೊತೆ ಕೆಲಸ ಮಾಡುವುದರಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದು ಅಕ್ಷಯಯ್‌ರನ್ನು ಕೇಳಿದಾಗ,'ಇಂಡಸ್ಟ್ರಿಯಲ್ಲಿ ಅನೇಕರು ಆರಂಭದಲ್ಲಿ ನನ್ನೊಂದಿಗೆ ಚೆನ್ನಾಗಿ ವ್ಯವಹರಿಸಿಲ್ಲ, ಆದರೆ ನಾನು ಹಾಗೆ ಮಾಡುವುದಿಲ್ಲ' ಎಂದಿದ್ದರು ನಟ ಅಕ್ಷಯ್‌ ಕುಮಾರ್‌.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories