ಜೀಬ್ರಾ ಪ್ರಿಂಟ್‌ ವಿಚಿತ್ರ ಡ್ರೆಸ್ ಧರಿಸಿ ಟ್ರೋಲ್‌ ಆದ ಕರೀನಾ ಕಪೂರ್!

Suvarna News   | Asianet News
Published : Mar 22, 2021, 04:59 PM IST

ಕರೀನಾ ಕಪೂರ್ ಇತ್ತೀಚೆಗೆ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಕರೀನಾ ಎರಡನೇ ಬಾರಿಗೆ ತಾಯಿಯಾದ ನಂತರವೂ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಡೆಲಿವರಿ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆದ ಕರೀನಾ ಮುಂಬೈನ ಬೀದಿಗಳಲ್ಲಿ  ಓಡಾಡುತ್ತಿದ್ದಾರೆ ಮತ್ತು ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದಾರೆ. ಕಳೆದ ರಾತ್ರಿ, ಅವರು ತಮ್ಮ ಫ್ರೆಂಡ್‌ ಅಮೃತಾ ಅರೋರಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ, ಅವರು ಜೀಬ್ರಾ ಪ್ರಿಂಟ್‌ನ ಡ್ರೆಸ್‌ ಧರಿಸಿದ್ದರು. ಆಕೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿವೆ. ಜನರು ಕರೀನಾರ ವಿಚಿತ್ರ ಡ್ರೆಸ್‌ ಬಗ್ಗೆ ಗೇಲಿ ಮಾಡುತ್ತಿದ್ದಾರೆ. 

PREV
18
ಜೀಬ್ರಾ ಪ್ರಿಂಟ್‌ ವಿಚಿತ್ರ ಡ್ರೆಸ್ ಧರಿಸಿ ಟ್ರೋಲ್‌ ಆದ ಕರೀನಾ ಕಪೂರ್!

ಕರೀನಾ ಅವರ ಈ ಫೋಟೋಗಳನ್ನು ನೋಡಿ, ಅಲ್ಲಿ ಯೂಸರ್ಸ್‌  ನಗುವ ಎಮೋಜಿ ಜೊತೆ ಬೆಬೊ ಅಲ್ಲ ಅದು ಜೆಬ್ರಾ ಕಪೂರ್ ಎಂದು ಕಾಮೆಂಟ್‌ ಮಾಡಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬರು  ಜೀಬ್ರಾವನ್ನು ಮುಂಬೈನಲ್ಲಿ ನೋಡಲಾಯಿತು ಎಂದು ಬರೆದಿದ್ದಾರೆ.

28

ಮತ್ತೊಬ್ಬರು ಈಗ ರಣವೀರ್ ಸಿಂಗ್ ಅವರೊಂದಿಗೆ ಕಠಿಣ ಹೋರಾಟ ನಡೆಸಲಿದ್ದಾರೆ ಎಂದೂ ಹಾಗೂ  ಬೇಗಂ ಜೀಬ್ರಾ ಪಟೌಡಿ ಎಂದೂ ಗೇಲಿ ಮಾಡಿದ್ದಾರೆ.

38

ಕರೀನಾ ಫಾಸ್ಟ್ ಫ್ಯಾಷನ್ ಲೇಬಲ್ ಎಚ್ & ಎಂ ಬ್ರಾಂಡ್‌ನ ಡ್ರೆಸ್‌ ಧರಿಸಿದ್ದರು. ಫ್ರೆಂಡ್‌ ಅಮೃತಾ ಅರೋರಾ ಜೊತೆ ಸುತ್ತಾಡಲು ಕರೀನಾ ಜೀಬ್ರಾ ಪ್ರಿಂಟ್‌ನ ಪ್ಯಾಂಟ್ ಮತ್ತು ಮ್ಯಾಚಿಂಗ್ ಶರ್ಟ್ ಆಯ್ಕೆ ಮಾಡಿಕೊಂಡಿದ್ದರು.  

48

ಸ್ಯಾಟಿನ್‌ನಿಂದ ತಯಾರಿಸಲಾಗಿದ್ದ ಈ ಡ್ರೆಸ್‌ ಜೊತೆ ಬ್ಲಾಕ್ ಸ್ಟ್ರಾಪ್ ಹೀಲ್ಸ್ ಮತ್ತು ಗೋಲ್ಡನ್ ವಾಚ್ ಹಾಗೂ ಸಿಲ್ವರ್‌ ಕಲರ್‌ ಪರ್ಸ್ ಮ್ಯಾಚ್‌ ಮಾಡಿಕೊಂಡಿದ್ದರು. ಜೀಬ್ರಾ ಪ್ರಿಂಟ್‌ನ ಈ ಬಟ್ಟೆಗಳ ಎಷ್ಟು ಬೆಲೆ ಇದೆ ಎಂದರೆ ಕಾಲೇಜಿಗೆ ಹೋಗುವ ಹುಡುಗಿಯರು ಸಹ ತಮ್ಮ ಪಾಕೆಟ್ ಹಣದಲ್ಲಿ ಆರಾಮವಾಗಿ ಖರೀದಿಸಬಹುದು, ಎಂದು ನೆಟ್ಟಿಗರು ನಟಿಯನ್ನು ಟ್ರೋಲ್‌ ಮಾಡಿದ್ದಾರೆ. 

58

ಕರೀನಾ ಧರಿಸಿರುವ ಪ್ಯಾಂಟ್‌ಗಳ ಬೆಲೆ 2,299 ರೂ. ಅದೇ ಸಮಯದಲ್ಲಿ, ಶರ್ಟ್ ಬೆಲೆ 1,499 ರೂ.  ಡ್ರೆಸ್‌ನ ಒಟ್ಟು ಬೆಲೆ ಕೇವಲ 3,798 ರೂ ಎಂದು ವರದಿಗಳು ಹೇಳಿವೆ. ಇಷ್ಟು ಅಗ್ಗದ ಬೆಲೆಯ ವಿಚಿತ್ರದ ಬಟ್ಟೆ ಧರಿಸಿದ್ದಾರೆ ಕರೀನಾ ಎಂದು ಸೋಶಿಯಲ್‌ ಮೀಡಿಯಾ ಯೂಸರ್ಸ್‌ ಅವರನ್ನು ತೀವ್ರವಾಗಿ ಗೇಲಿ ಮಾಡುತ್ತಿದ್ದಾರೆ.

68

 ಕರೀನಾ ಮತ್ತು ಅಮೃತಾ ಅವರ ಕ್ಲೋಸ್‌ ಫ್ರೆಂಡ್‌ ಕರಣ್ ಜೋಹರ್ ಅವರ ಮನೆಯನ್ನು ತಡರಾತ್ರಿಗೆ ತಲುಪಿದ್ದರು. ಈ ಸಮಯದಲ್ಲಿ ಇಬ್ಬರೂ ಫೊಟೋಗ್ರಾಫರ್ಸ್‌ಗೆ ಪೋಸ್‌ ನೀಡ್ಡಿದರು. 

78

ಎರಡನೇ ಬಾರಿ ಪ್ರೆಗ್ನೆಂಸಿಯ ಸಮಯದಲ್ಲಿ ಸಾಕಷ್ಟು ತೂಕವನ್ನು ಹೆಚ್ಚಿಕೊಂಡಿರುವ ಬೆಬೊ ಈ ಬಾರಿ ತೂಕವನ್ನು ಕಳೆದುಕೊಳ್ಳುವ ಆತುರದಲ್ಲಿಲ್ಲ. ಆದರೆ ತೈಮೂರ್ ಜನಿಸಿದಾಗ ಕೆಲವು ದಿನಗಳಲ್ಲೇ ಅವರು ಸಾಕಷ್ಟು ತೂಕವನ್ನು ಕಳೆದುಕೊಂಡಿದ್ದರು. 

88

ಫೆಬ್ರವರಿ 21ರಂದು ಕರೀನಾ ತಮ್ಮ ಎರಡನೇ ಮಗನಿಗೆ ಜನ್ಮ ನೀಡಿದರು. ಕರೀನಾ ಇನ್ನೂ ತನ್ನ ಕಿರಿಯ ಮಗನ ಮುಖವನ್ನು ಫ್ಯಾನ್ಸ್‌ಗೆ ತೋರಿಸಿಲ್ಲ ಹಾಗೂ ಮಗನ ಹೆಸರನ್ನೂ ಬಹಿರಂಗಪಡಿಸಿಲ್ಲ.
 
click me!

Recommended Stories