ಮಗುವಾದ ತಿಂಗಳಲ್ಲಿಯೇ ಮತ್ತೆ ಶೂಟಿಂಗ್ ಆರಂಭಿಸಿದ ಕರೀನಾ ಕಪೂರ್!
First Published | Mar 22, 2021, 5:38 PM ISTಎರಡನೇ ಮಗನಿಗೆ ಜನ್ಮ ನೀಡಿದ ಒಂದು ತಿಂಗಳ ನಂತರ ಕರೀನಾ ಕಪೂರ್ ಶೂಟಿಂಗ್‌ಗೆ ಮರಳಿದ್ದಾರೆ. ಸೋಮವಾರ, ಬೆಬೊ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡರು. ಸೆಟ್ ತಲುಪಿದ ಕರೀನಾ ಅವರ ಅನೇಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿನ ಪೋಸ್ಟ್ ಡೆಲಿವರಿ ಟ್ರಾನ್ಸ್‌ಫಾರ್ಮೇಷನ್ ಎಲ್ಲರನ್ನು ಅಚ್ಚರಿಗೊಳಿಸಿದೆ. ಅವರ ಈ ಲುಕ್‌ನಿಂದ ಎರಡನೇ ಮಗನಿಗೆ ಜನ್ಮ ನೀಡಿದ ನಂತರ ಕರೀನಾ ವೇಯಿಟ್ ಲಾಸ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂಬುವುದು ಸ್ಪಷ್ಟವಾಗುತ್ತದೆ.