ಬಾಲಿವುಡ್ ನಟಿ ಕರೀನಾ ಕಪೂರ್ ಎರಡನೇ ಬಾರಿಗೆ ತಾಯಿಯಾಗಲಿರುವ ಸುದ್ದಿ ಎಲ್ಲರಿಗೂ ತಿಳಿದಿದೆ. ಕರೀನಾ ತಮ್ಮ ಪ್ರೆಗ್ನೆಂಸಿಯ ಆರನೇ ತಿಂಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ತಮ್ಮ ಬಿಲ್ಡಿಂಗ್‌ನ ಕೆಳಗೆ ಕಾಣಿಸಿಕೊಂಡಿದ್ದರು. ಬೇಬಿ ಬಂಪ್‌ನ ಫೋಟೋಗಳಲ್ಲಿ ಕರೀನಾಳ ತೂಕ ಹೆಚ್ಚಾಗಿರುವುದು ಕಾಣುತ್ತದೆ. ಕ್ಯಾಮರಾಮನ್‌ನತ್ತ ಕೈ ಬೀಸಿ ಕಾರಿನಿಂದ ಇಳಿದ ಕೂಡಲೇ ಕಟ್ಟಡದ ಒಳಗೆ ಹೋದರು. ಅವರೊಂದಿಗೆ ಪತಿ ಸೈಫ್ ಅಲಿ ಖಾನ್ ಕೂಡ ಇದ್ದರು.