Saifeena Family: ಪೋಷಕರಿಲ್ಲದೇ ನ್ಯಾನಿ ಜೊತೆ ಸುತ್ತಾಡ್ತಿದ್ದಾರೆ ಮಕ್ಕಳು!

First Published | Nov 26, 2021, 4:49 PM IST

ಕರೀನಾ ಕಪೂರ್ (Kareena Kapoor) ಅವರ ಪುತ್ರರಾದ ತೈಮೂರ್ ಅಲಿ ಖಾನ್ (Taimur Ali Khan) ಮತ್ತು ಜೆಹ್ ಅಲಿ ಖಾನ್ (Jeh Ali Khan) ಇಬ್ಬರೂ ತಂದೆ-ತಾಯಿ ಇಲ್ಲದೆ ತಿರುಗಾಡುತ್ತಿರುವುದು ಕಂಡು ಬಂದಿದೆ. ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ತೈಮೂರ್ ನ್ಯಾನಿ ಅವರ ಕೈಯನ್ನು ಹಿಡಿದಿದ್ದಾರೆ ಮತ್ತು ಜೆಹ್ ನ್ಯಾನಿ ಮಡಿಲಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಮುಂಬೈನ ವಿವಿಧ ಸ್ಥಳಗಳಲ್ಲಿ ಇತರ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. ಫೋಟೋಗಳು ಇಲ್ಲಿವೆ ನೋಡಿ.

ಕರೀನಾ ಕಪೂರ್ ಪುತ್ರರಾದ ತೈಮೂರ್ ಅಲಿ ಖಾನ್ ಜೆಹ್ ಅಲಿ ಖಾನ್ ಅಪ್ಪ ಅಮ್ಮ ಜೊತಗೆ ಇಲ್ಲದೆ ಮನೆ ಹೊರೆಗೆ ಕಾಣಿಸಿಕೊಂಡಿದ್ದಾರೆ. ಕರೀನಾ ಸೈಫ್‌ ಮಕ್ಕಳಿಬ್ಬರೂ ನ್ಯಾನಿ ಜೊತೆ ತಿರುಗುತ್ತಿರುವ ಪೋಟೋಗಳು ವೈರಲ್‌ ಆಗಿವೆ. ಫೋಟೋದಲ್ಲಿ ತೈಮೂರ್ ಕಪ್ಪು ಟೀ ಶರ್ಟ್ ಧರಿಸಿರುವುದನ್ನು ಕಾಣಬಹುದು ಹಾಗೂ ಅವನ ಟೀ ಶರ್ಟ್ ಮೇಲೆ ಬಿಗ್ ಬ್ರದರ್ ಎಂದು ಬರೆಯಲಾಗಿತ್ತು. ಅದೇ ಸಮಯದಲ್ಲಿ, ಜೆಹ್ ತನ್ನ ಬಾಯಿಯಲ್ಲಿ ಆಟದ ಸಾಮಾನು ಹಾಕಿಕೊಳ್ಳುತ್ತಿರುವುದನ್ನು ಕಾಣಬಹುದು.

ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಖಾನ್ (Salman Khan) ಕಾಣಿಸಿಕೊಂಡರು. ಕಪ್ಪು ಜಾಕೆಟ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದ ಸಲ್ಮಾನ್ ಸ್ವಲ್ಪ ಕೋಪಗೊಂಡಂತೆ ಕಾಣುತ್ತಿದ್ದರು. ಅವರ ಸಿನಿಮಾ 'ಅಂತಿಮ್‌' ನವೆಂಬರ್ 26 ರಂದು ಬಿಡುಗಡೆಯಾಗಲಿದೆ.

Tap to resize

ಮುಂಬೈನ ಖಾರ್ ಪ್ರದೇಶದಲ್ಲಿ ಕಂಗನಾ ರಣಾವತ್ (Kangana Ranaut) ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಅವರು ಕನ್ನಡಕವನ್ನು ಧರಿಸಿದ್ದರು. ಸ್ವಾತಂತ್ರ್ಯ ಭಿಕ್ಷೆಯಲ್ಲಿ ಸಿಕ್ಕಿದ್ದು ಎಂಬ ತಮ್ಮ ಹೇಳಿಕೆಗಾಗಿ ಈ ದಿನಗಳಲ್ಲಿ, ಕಂಗನಾ   ಮುಖ್ಯಾಂಶಗಳಲ್ಲಿದ್ದಾರೆ.

ಸನ್ನಿ ಡಿಯೋಲ್ (Sunny Deol) ತಮ್ಮ ಮಗ ಕರಣ್ ಡಿಯೋಲ್  (Karan Deol) ಸಿನಿಮಾದ ಪ್ರಚಾರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಕಪ್ಪು ಜಾಕೆಟ್ ಮತ್ತು ಟೀ ಶರ್ಟ್ ಧರಿಸಿದ್ದರು.

ನಿರ್ದೇಶಕ ಆನಂದ್ ಎಲ್ ರೈ (Anand L Rai) ಅವರೊಂದಿಗೆ ಸಾರಾ ಅಲಿ ಖಾನ್ (Sara Ali Khan) ಕಾಣಿಸಿಕೊಂಡಿದ್ದಾರೆ. ಅವರ ಅತ್ರಾಂಗಿ ರೇ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಇಬ್ಬರೂ ಕ್ಯಾಮರಾಮನ್ ಗೆ ಪೋಸ್ ಕೊಟ್ಟರು.

ತಮ್ಮ ಚಿತ್ರ ಅತ್ರಾಂಗಿ ರೇ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರಾ ಅಲಿ ಖಾನ್ ಅವರು ಬಿಳಿ ಸಲ್ವಾರ್ ಸೂಟ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಅದಕ್ಕೆ ಮ್ಯಾಚ್‌ ಆಗುವ ಕಿವಿಯ ಓಲೆಗಳನ್ನು ಸಾರಾ ಧರಿಸಿದ್ದರು.

ಮೃಣಾಲ್ ಠಾಕೂರ್ (Mrunal Thakur)ವಿಮಾನ ನಿಲ್ದಾಣದಲ್ಲಿ ಕ್ಯಾಶ್ಯುವಲ್‌ ಲುಕ್‌ನಲ್ಲಿ ಕಾಣಿಸಿಕೊಂಡರು. ಇತ್ತೀಚೆಗಷ್ಟೇ ಅವರ ಜರ್ಸಿ ಚಿತ್ರದ ಟ್ರೇಲರ್ ಬಹಿರಂಗವಾಗಿದೆ. ಗೌತಮ್ ತಿನ್ನನೂರಿ ಡೈರೆಕ್ಟ್‌ ಮಾಡಿರುವ ಈ ಸಿನಿಮಾದಲ್ಲಿ ಮೃಣಾಲ್‌ ಶಾಹಿದ್‌ ಕಪೂರ್‌ ಎದುರು ನಟಿಸಲಿದ್ದಾರೆ. 

ವಿಮಾನ ನಿಲ್ದಾಣದಲ್ಲಿ ಸಾಯಿ ಮಂಜ್ರೇಕರ್ (Sai Manjrekar) ಕಾಣಿಸಿಕೊಂಡರು. ಈ  ಸಮಯದಲ್ಲಿ ಸಾಯಿ ಮಂಜ್ರೇಕರ್ ಅವರು ಪ್ರಿಟೆಂಡ್‌ ಡ್ರೆಸ್‌ ಧರಿಸಿದ್ದರು. ಅದೇ ಸಮಯದಲ್ಲಿ, ಇಶಾ ಗುಪ್ತಾ (Esha Gupta) ಜಿಮ್‌ನ ಹೊರಗೆ ಕಾಣಿಸಿಕೊಂಡರು.

ಅಹಾನ್ ಶೆಟ್ಟಿ (Ahan Shetty) ಮತ್ತು ತಾರಾ ಸುತಾರಿಯಾ (Tara sutaria) ಈ ದಿನಗಳಲ್ಲಿ ತಮ್ಮ ಮುಂಬರುವ ಚಿತ್ರ ತಡಪ್ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇಬ್ಬರೂ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

Latest Videos

click me!