ಕರೀನಾ ಕಪೂರ್ ಅವರ ಮಗ ಜೆಹ್ ಬರ್ತ್‌ಡೇ ಪಾರ್ಟಿ; ಮಗಳ ಜೊತೆ ರಣಬೀರ್‌ ಕಪೂರ್‌ ಫೋಟೋ ವೈರಲ್‌

Published : Feb 23, 2024, 05:57 PM IST

ಕರೀನಾ ಕಪೂರ್ (Kareena Kapoor) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಎರಡನೇ ಮಗ ಜೆಹ್ ಅಲಿ ಖಾನ್‌ (Jeh Ali Khan) ಹುಟ್ಟಿದ ಹಬ್ಬವನ್ನು ಬುಧವಾರ ಆಚರಿಸಲಾಯಿತು. ಕರೀನಾರ ಮಗನ ಬರ್ತ್‌ಡೇ ಪಾರ್ಟಿಯಲ್ಲಿ ರಣಬೀರ್ ಕಪೂರ್ ತಮ್ಮ ಮಗಳು ರಾಹಾ ಜೊತೆ ಕಾಣಿಸಿಕೊಂಡರು. ಮುಂಬೈನಲ್ಲಿ  ನಡೆದ ಜೆಹ್  ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳು ವೈರಲ್‌ ಆಗಿವೆ.   

PREV
18
ಕರೀನಾ ಕಪೂರ್ ಅವರ ಮಗ ಜೆಹ್  ಬರ್ತ್‌ಡೇ ಪಾರ್ಟಿ; ಮಗಳ ಜೊತೆ ರಣಬೀರ್‌ ಕಪೂರ್‌ ಫೋಟೋ ವೈರಲ್‌
Jeh, Kareena

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಕಿರಿಯ ಮಗ ಜೆಹ್‌ ಆಲಿ ಖಾನ್ ಬರ್ತ್‌ಡೇಯನ್ನು ಬುಧವಾರ ಮುಂಬೈನಲ್ಲಿ ಆಚರಿಸಲಾಯಿತು.

28

ಜೆಹ್‌ನ  ಸ್ಪೈಡರ್ ಮ್ಯಾನ್ ಥಿಮ್‌ ಹುಟ್ಟುಹಬ್ಬದ ಪಾರ್ಟಿಯಲ್ಲಿ ಅನೇಕ ಖ್ಯಾತನಾಮರು ಮತ್ತು ಸ್ಟಾರ್ ಮಕ್ಕಳು ಹಾಜರಿದ್ದರು. 

38

ಲಿಟಲ್ ಜೆಹ್  ತಮ್ಮ  ಮೂರನೇ ಹುಟ್ಟುಹಬ್ಬದ ಪಾರ್ಟಿಗೆ ಸ್ಟೈಲ್‌ ಆಗಿ ಎಂಟ್ರಿ ಕೊಟ್ಟರು. ನೀಲಿ ಜೀನ್ಸ್ ಮತ್ತು ಬಿಳಿ ಶರ್ಟ್ ಮತ್ತು ತೋಳಿಲ್ಲದ ವೆಸ್ಟ್ ಧರಿಸಿ  ಜೆಹ್‌ ಸಖತ್‌ ಕ್ಯೂಟ್‌ ಆಗಿ ಕಾಣಿಕೊಂಡನು. ಜೆಹ್  ದಾದಿಯರು ಸಹ ಜೊತೆಗಿದ್ದರು.

48
Jeh, Kareena

ಪಾರ್ಟಿ ಸ್ಥಳವನ್ನು ಬಣ್ಣಬಣ್ಣದ ಬಲೂನ್‌ಗಳು ಮತ್ತು ಬ್ಯಾನರ್‌ಗಳಿಂದ ಅಲಂಕರಿಸಲಾಗಿತ್ತು. ಕರೀನಾ ಹಳದಿ ಬಣ್ಣದ ಟಾಪ್ ಜೊತೆಗೆ ನೀಲಿ ಜೀನ್ಸ್ ಅನ್ನು ಧರಿಸಿದ್ದರು, ಆದರೆ ಸೈಫ್ ಕುರ್ತಾ ಪೈಜಾಮ  ಧರಿಸಿದ್ದರು.

58

ಜೆಹ್ ಅವರ ಹಿರಿಯ ಸಹೋದರ ತೈಮೂರ್ ಅಲಿ ಖಾನ್ ಶಾಲೆಯ ನಂತರ ತನ್ನ ಸ್ನೇಹಿತರೊಂದಿಗೆ ಪಾರ್ಟಿಗೆ  ಆಗಮಿಸುತ್ತಿರುವುದನ್ನು ಕಾಣಬಹುದು. ತೈಮೂರ್, ತನ್ನ ಶಾಲಾ ಸಮವಸ್ತ್ರದಲ್ಲಿರುವ ಫೋಟೋವನ್ನು ಪಾಪರಾಜಿಗಳು ಸೆರೆ ಹಿಡಿದ್ದಾರೆ.

68

ಜೆಹ್‌ ಆಲಿ ಖಾನ್‌ನ ಪಾರ್ಟಿಯ ಮುಖ್ಯ ಆಕರ್ಷಣೆ ರಣಬೀರ್‌  ಕಪೂರ್‌ ಅವರ ಮಗಳು ರಾಹಾ ಕಪೂರ್‌. ರಣಬೀರ್‌ ಮಗಳು ರಾಹಾ  ಜೊತೆ ಪಾರ್ಟಿಗೆ ಆಗಮಿಸಿದ್ದರು. ಈ ಸಮಯದಲ್ಲಿ ಆಲಿಯಾ ಗೈರು ಹಾಜರಾಗಿದ್ದರು.

78

ಅತ್ತೆ ಸಬಾ ಅಲಿ ಖಾನ್ ಪಟೌಡಿ ಅವರು ಜೆಹ್ ಅಲಿ ಖಾನ್  ಮೂರನೇ ಹುಟ್ಟುಹಬ್ಬದ ಆಚರಣೆಯ ಕೆಲವು ಒಳಗಿನ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋವೊಂದರಲ್ಲಿ ಅತ್ತಿಗೆ ಕರೀನಾ ಕಪೂರ್ ಜೊತೆ ಸಬಾ ಪೋಸ್ ನೀಡುತ್ತಿರುವುದನ್ನು ಕಾಣಬಹುದು. 

88

ರಣಬೀರ್ ಕಪೂರ್ ಅವರು ತಮ್ಮ ಸೋದರ ಸೊಸೆ ಸಮರಾ ಸಾಹ್ನಿ ಜೊತೆ ಪೋಸ್‌ ನೀಡಿದರು. ರಣಬೀರ್‌ ಸಹೋದರಿ  ರಿದ್ಧಿಮಾ ಕಪೂರ್ ಸಾಹ್ನಿ ಅವರು ತಮ್ಮ ಮಗಳು  ಸಮರಾ ಸಾಹ್ನಿ ಜೊತೆಗೆ ಪಾರ್ಟಿಗೆ ಆಗಮಿಸಿದ್ದರು.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories