Shashi Kapoor: ಮನೆ ನಡೆಸಲು ಹೆಂಡತಿ ಚಿನ್ನವನ್ನೇ ಮಾರಿದ್ರಂತೆ ಕರೀನಾ ಕಪೂರ್ ಚಿಕ್ಕಪ್ಪ

First Published Mar 20, 2023, 4:47 PM IST

ಇಂದು ಬಾಲಿವುಡ್‌ನ ಕಪೂರ್ ಕುಟುಂಬದ ಪ್ರತಿಭಾವಂತ ನಟ ದಿವಂಗತ ಶಶಿ ಕಪೂರ್‌ (Shashi Kapoor)  ಅವರ ಜನ್ಮದಿನ. ಕೋಲ್ಕತ್ತಾದಲ್ಲಿ 18 ಮಾರ್ಚ್ 1938 ರಂದು ಜನಿಸಿದ ನಟನ ನಿಜವಾದ ಹೆಸರು ಬಲ್ವೀರ್ ರಾಜ್ ಕಪೂರ್. ಅವರು ಸಹೋದರರಲ್ಲಿ ಕಿರಿಯನಾಗಿದ್ದರು, ಆದ್ದರಿಂದ ಅವರನ್ನು ಪ್ರೀತಿಯಿಂದ ಶಶಿ ಎಂದು ಕರೆಯಲಾಯಿತು. ಶಶಿ ಕಪೂರ್‌ ಜೀವನಕ್ಕೆ ಸಂಬಂಧಿಸಿದ ವಿಷಯಗಳು ಇಲ್ಲಿವೆ.

ಶಶಿ ಕಪೂರ್‌ ಅವರು ಸುಮಾರು 160 ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜ್ ಕಪೂರ್ ಅವರ ಕಿರಿಯ ಸಹೋದರ ಶಶಿ ಅವರ ಬಹುತೇಕ ಚಿತ್ರಗಳು ಸೂಪರ್ ಹಿಟ್ ಆಗಿವೆ.

ಶಶಿ ಕಪೂರ್ ಅವರಿಗೆ 2011 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಮತ್ತು 2015 ರಲ್ಲಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

Latest Videos


ಶಶಿ ಕಪೂರ್ ಸೂಪರ್ ಸ್ಟಾರ್. ಅವರು 60-70 ರ ದಶಕದಲ್ಲಿ ಅವರು ಹಿಟ್‌ ಸ್ಟಾರ್‌ ಎಂದು ಪರಿಗಣಿಸಲ್ಪಟ್ಟರು. ಆದರೂ, ಅವರಿಗೆ ಕೆಲಸವಿಲ್ಲದ ಸಮಯ ಬಂದಿತು. ಅವರು ನಿರ್ಮಿಸಿದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ತೋಪು ಹಿಡಿದವು. ಸಿನಿಮಾ ನಿರ್ಮಾಪಕರಾಗಿ ದೊಡ್ಡ ನಷ್ಟ ಅನುಭವಿಸಿದರು.

ಕಪೂರ್ ಕುಟುಂಬದ ಅತ್ಯಂತ ಪ್ರೀತಿಪಾತ್ರರಾದ ಶಶಿ ಕಪೂರ್ ಅವರು ರಾಯಲ್‌ ಜೀವನ ನಡೆಸುತ್ತಿದ್ದರು. ಅವರು ನಿರ್ಮಿಸಿದ ಚಿತ್ರಗಳು ವಿಫಲವಾಗಿ 
ಅವರ ಬ್ಯಾಂಕ್‌ ಖಾತೆಗಳು ಸಂಪೂರ್ಣ ಖಾಲಿಯಾಗಿದ್ದವು. 

 ಶಶಿ ಅವರ ಮನೆಯನ್ನು ನಡೆಸುವುದು ಕಷ್ಟಕರವಾಗಿತ್ತು. ಅಮಿತಾಭ್ ಬಚ್ಚನ್ ಜೊತೆ ಅಜೂಬಾ ಸೋತ ನಂತರ, ಅವರು ಸಾಲದಲ್ಲಿ ಮುಳುಗಿದ್ದರು.
 

ಶಶಿ ಕಪೂರ್ ಅವರ ಎಲ್ಲಾ ಖಾತೆಗಳು ಖಾಲಿಯಾದಾಗ, ಅವರು ತಮ್ಮ ಸ್ಪೋರ್ಟ್ಸ್ ಕಾರನ್ನು ಮಾರಿ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದರು ವಿದೇಶಿ ಮೂಲದ ಪತ್ನಿ ಜೆನ್ನಿಫರ್ ಕೆಂಡಾಲ್ ಕೂಡ ತನ್ನ ಆಭರಣಗಳನ್ನು ಶಶಿಗೆ ನೀಡಿದ್ದರು.

'ಅವರ ತಂದೆ ಮನೆಯ ಖರ್ಚಿಗಾಗಿ ತನ್ನ ಸ್ಪೋರ್ಟ್ಸ್ ಕಾರನ್ನು ಮಾರಿದ್ದರು. ತಾಯಿ ಜೆನ್ನಿಫರ್ ಕೂಡ ತನ್ನ ವಸ್ತುಗಳನ್ನು ಮಾರಲು ಪ್ರಾರಂಭಿಸಿದರು. ಆದಾಗ್ಯೂ, ಅವರು ತಕ್ಷಣವೇ ಈ ಪರಿಸ್ಥಿತಿಗಳಿಂದ ಹೊರಬಂದರು ಎಂದು ಈ ವಿಷಯವನ್ನು ಶಶಿ ಕಪೂರ್ ಪುತ್ರ ಕುನಾಲ್ ಕಪೂರ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಶಶಿ ಕಪೂರ್ ಅವರು ತಮ್ಮ ಪತ್ನಿ ಜೆನ್ನಿಫರ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಜೆನ್ನಿಫರ್ ಅವರಿಗೆ  ಕ್ಯಾನ್ಸರ್ ಇತ್ತು. ಸುದೀರ್ಘ ಚಿಕಿತ್ಸೆಯ ನಂತರ 1984 ರಲ್ಲಿ ನಿಧನರಾದರು. ಪತ್ನಿಯ ಸಾವಿನ ನಂತರ ಶಶಿ ಕಪೂರ್ ಸಂಪೂರ್ಣ ಡಲ್ ಆಗಿ ಬಿಟ್ಟರು.

ಮೇರೆ ಪಾಸ್ ಮಾ ಹೈಎಂಬ ಶಶಿ ಕಪೂರ್‌ ಅವರ ಸಿನಿಮಾದ ಡೈಲಾಗ್‌ ಇನ್ನೂ ಅಭಿಮಾನಿಗಳಲ್ಲಿ  ನೆನಪಿನಲ್ಲಿ ಉಳಿದೆ. ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲಿ  2017 ರಲ್ಲಿ ನಿಧನರಾದರು.

click me!