ಕಭಿ ಖುಷಿ ಕಭಿ ಗಮ್ ಚಿತ್ರದ ಸೆಟ್‌ಗಳಲ್ಲಿ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಜಯ ಬಚ್ಚನ್ ಮತ್ತು ಕಾಜೋಲ್ ಅವರು ಹೃತಿಕ್ ರೋಷನ್ ಅವರಿಂದ ದೂರ ಇರುತ್ತಿದ್ದರು. ಅದು ಅವರಿಗೆ ಬೇಸರ ತರುತ್ತಿತ್ತು, ಎಂದು ನಿರ್ದೇಶಕ ಕರಣ್ ಜೋಹರ್ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ. ಸೆಟ್‌ನಲ್ಲಿನ ಈ ದ್ವೇಷಕ್ಕೆ ಕಾರಣ ಕಹೋ ನಾ ಪ್ಯಾರ್ ಹೈ ಚಿತ್ರದ ಯಶಸ್ಸು ಎಂದು ಹೇಳಿದ್ದಾರೆ.
'ಕಹೋ ನಾ ಪ್ಯಾರ್ ಹೈ' ಯಶಸ್ಸಿನ ನಂತರ, ಹೃತಿಕ್ ಉದ್ಯಮದಲ್ಲಿ ಬಹಳ ಜನಪ್ರಿಯರಾದರು ಮತ್ತು ಅವರನ್ನು ಶಾರುಖ್‌ಗೆ ಹೋಲಿಸಲಾಯಿತು.'ಹೃತಿಕ್ ತುಂಬಾ ಜೂನಿಯರ್ ಮತ್ತು ಶಾರುಖ್ ಆಗಲೇ ದೊಡ್ಡ ಸ್ಟಾರ್, ಆದರೆ ಆ ಸಮಯದಲ್ಲಿ ಶಾರುಖ್ ಅವರ ಒಂದು ಅಥವಾ ಎರಡು ಸಿನಿಮಾಗಳು ಫ್ಲಾಪ್ ಆಗಿದ್ದವು,' ಎಂದು ಕರಣ್ ನೆನಪಿಸಿಕೊಂಡಿದ್ದಾರೆ.
'ಆ ಸಮಯದಲ್ಲಿ ಮಾಧ್ಯಮಗಳು ಹೃತಿಕ್‌ರನ್ನು ಹೊಗಳಲು ಪ್ರಾರಂಭಿಸಿದವು, ಈ ಕಾರಣದಿಂದಾಗಿ ಹೊರಬಂದ ನೆಗೆಟಿವಿಟಿ ಸರಿಯಲ್ಲ. ಆದಾಗ್ಯೂ, ಹೃತಿಕ್ ಹೆಚ್ಚಿನ ಜನರೊಂದಿಗೆ ಬೆರೆಯಲು ಇಷ್ಟ ಪಡುವುದಿಲ್ಲ,' ಎಂದು ಕರಣ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
'ಚಿತ್ರೀಕರಣದ ಸಮಯದಲ್ಲಿ ಹೃತಿಕ್‌ಗೆ ಯಾರಾದರೂ ಬೇಕು ಎಂದು ನಾನು ಭಾವಿಸುತ್ತಿದ್ದೆ. ಆದರೆ ಅಮಿತಾಬ್ ಮತ್ತು ಜಯಾ ಬಚ್ಚನ್ ಅವರೊಂದಿಗೆ ಮಾತನಾಡುತ್ತರಿಲಿಲ್ಲ. ಶಾರುಖ್ ಕೂಡ ಅವನಿಂದ ದೂರ ಉಳಿದಿದ್ದರು. ಕಾಜೋಲ್ ಆಗಲೇ ಎಸ್‌ಆರ್‌ಕೆ ಪಾರ್ಟನರ್ ಆಗಿದ್ದರು,' ಎಂದು ಕರಣ್ ಮತ್ತಷ್ಟು ಬರೆದಿದ್ದಾರೆ.
ಹೃತಿಕ್ ಕಳೆದುಹೋದ ಒಂಟಿ ಮಗುವಿನಂತೆ ಎಂದು ನನಗೆ ಅನಿಸುತ್ತಿತ್ತು. ಸೆಟ್‌ನಲ್ಲಿ ಸಾಧ್ಯವಾದಷ್ಟು ಒಳ್ಳೆಯ ಭಾವನೆ ಇರುವಂತೆ ಪ್ರಯತ್ನಿಸಿದೆ. ಈ ರೀತಿಯಾಗಿ ನಮ್ಮಲ್ಲಿ ಉತ್ತಮ ಸ್ನೇಹವಿತ್ತು ಎಂದು ಹೇಳಿದ್ದಾರೆ ಜೋಹರ್.
ಅಂದಹಾಗೆ, ಈ ಚಿತ್ರದಲ್ಲಿ ಅಮಿತಾ ಸಚ್ಚದೇವ್ ಅಮಿತಾಬ್ ಬಚ್ಚನ್ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಈ ಪಾತ್ರಕ್ಕೆ ವಹೀದಾ ರೆಹಮಾನ್ ಮೊದಲ ಆಯ್ಕೆ ಆಗಿತ್ತಂತೆ. ಅವರು ಸಿನಿಮಾದ ಕೆಲವು ಸೀನ್‌ಗಳಲ್ಲಿ ಕೂಡ ನಟಿಸಿದ್ದರು.
ಆದರೆ ಈ ಸಮಯದಲ್ಲಿ ಅವರ ಪತಿ ಕಮಲ್ಜೀತ್ ನಿಧನರಾದ ಕಾರಣದಿಂದ ವಹಿದಾ ಚಿತ್ರವನ್ನು ತೊರೆದರು.
ಅಭಿಷೇಕ್ ಬಚ್ಚನ್ ಈ ಚಿತ್ರದ ಅತಿಥಿ ಪಾತ್ರಕ್ಕಾಗಿ ಶೂಟ್ ಮಾಡಿದ್ದರು. ಆದರೆ, ನಂತರ ಅವರು ನಿರ್ದೇಶಕ ಕರಣ್ ಜೋಹರ್‌ಗೆದೃಶ್ಯವನ್ನು ತೆಗೆದು ಹಾಕುವಂತೆ ಕೇಳಿಕೊಂಡರು.
ಸ್ಪೇಷಲ್‌ಸ್ಕ್ರೀನಿಂಗ್ ಸಮಯದಲ್ಲಿ 'ಕಭಿ ಖುಷಿ ಕಭಿ ಗಮ್' ನೋಡಿದಾಗ ತನಗೆ ಇಷ್ಟವಾಗಲಿಲ್ಲ ಎಂದು ಕರಣ್ ಜೋಹರ್' ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಅಮೀರ್ ಖಾನ್ ಹೇಳಿದ್ದಾರೆ.
ಇಡೀ ಕಾಸ್ಟಿಂಗ್ ಟೀಮ್ ಅಲ್ಲಿದ್ದರೂ ಚಿತ್ರ ಮುಗಿದ ಕೂಡಲೇ ಅವರು ಯಾರನ್ನೂ ಅಭಿನಂದಿಸದೇ ಹೊರಟು ಹೋದರು. ಆ ಸಮಯದಲ್ಲಿ ಅವರು ಕರಣ್ ಮತ್ತು ಶಾರುಖ್ ಅವರನ್ನೂ ಕಡೆಗಣಿಸಿದ್ದರು.ಆದರೆ, ನಂತರ ಶೋ ವೇಳೆ ಅವರು ಕರಣ್ ಅವರಲ್ಲಿ ಕ್ಷಮೆಯಾಚಿಸಿದರು.