ಶಾರುಖ್‌ ಸಲ್ಮಾನರ ವ್ಯಾನಟಿ ವ್ಯಾನ್‌ಗಿಂತ ಲಕ್ಷುರಿಯಸ್‌ ಕಪಿಲ್‌ ಶರ್ಮಾರ ವ್ಯಾನ್‌!

First Published | Jul 1, 2021, 5:56 PM IST

ಶೀಘ್ರದಲ್ಲೇ 'ದಿ ಕಪಿಲ್ ಶರ್ಮಾ ಶೋ' ಮೂಲಕ ಟಿವಿಯಲ್ಲಿ ಪುನರಾಗಮನ ಮಾಡಲಿದ್ದಾರೆ. ಈ ಬಾರಿ ಕಪಿಲ್ ಅವರ ಶೋನಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಇದರೊಂದಿಗೆ ಕಪಿಲ್ ಕೂಡ ತಮ್ಮ ಫೀಸ್‌ ಹೆಚ್ಚಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕಪಿಲ್ ಈಗ ಒಂದು ವಾರಕ್ಕೆ 1 ಕೋಟಿ ರೂ ಚಾರ್ಜ್‌ ಮಾಡುತ್ತಾರೆ. ವಾರದಲ್ಲಿ ಎರಡು ಕಂತುಗಳನ್ನು ಚಿತ್ರೀಕರಿಸಲಾಗಿರುವುದರಿಂದ, ಪ್ರತಿ ಎಪಿಸೋಡ್‌ಗೆ ಅವರ ರೇಟ್‌ 50 ಲಕ್ಷ ರೂ. ಈ ಹಿಂದೆ ಕಪಿಲ್ ಪ್ರತಿ ಕಂತಿಗೆ 30 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಕಪಿಲ್ ಶರ್ಮಾ ಅವರ ಲಕ್ಷುರಿಯಸ್‌ ಲೈಫ್‌ಸ್ಟೈಲ್‌  ಸಖತ್‌ ಸದ್ದು ಮಾಡುತ್ತಿದೆ. ಅನೇಕ  ವಾಹನಗಳಲ್ಲದೆ, ಕಪಿಲ್ ಮುಂಬೈನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಜೊತೆಗೆ  ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್‌ ಮಾಲೀಕ ಇವರು. 
 

ಕೆಲವು ವರ್ಷಗಳ ಹಿಂದೆ, ಕಪಿಲ್ ಅವರ ವ್ಯಾನಿಟಿ ವ್ಯಾನ್ ಕಾರಣದಿಂದ ಸುದ್ದಿಯಲ್ಲಿದ್ದರು. ಡಿಸೈನರ್ ದಿಲೀಪ್ ಚಾಬ್ರಿಯಾ ತನಗೆ ಮೋಸ ಮಾಡಿದ್ದಾರೆ ಎಂದು ಕಪಿಲ್ ಆರೋಪಿಸಿದ್ದರು.
ಕಪಿಲ್ ಅವರ ವ್ಯಾನಿಟಿ ವ್ಯಾನ್ ಬಾಲಿವುಡ್‌ನ ಅತ್ಯಂತ ದುಬಾರಿ ವ್ಯಾನಿಟಿ ವ್ಯಾನ್‌ಗಳಲ್ಲಿ ಒಂದಾಗಿದೆ. ಎಲ್ಲಾ ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದುಕಪಿಲ್ ತನ್ನ ಅನುಕೂಲಕ್ಕೆ ತಕ್ಕಂತೆ ಕಸ್ಟಮೈಜ್‌ ಮಾಡಿಸಿದ್ದಾರೆ.
Tap to resize

ದಿಲೀಪ್ ಚಾಬ್ರಿಯಾ ಡಿಸೈನ್‌ ಮಾಡಿರುವ ಈ ವ್ಯಾನಿಟಿ ವ್ಯಾನ್‌ ಐಷಾರಾಮಿ ವಿಷಯದಲ್ಲಿ ಶಾರುಖ್ ಅವರ ವ್ಯಾನಿಟಿ ವ್ಯಾನ್‌ಗಿಂತ ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ.
ವ್ಯಾನಿಟಿ ವ್ಯಾನ್ ಯಾವುದೇ 5 ಸ್ಟಾರ್‌ ಹೋಟೆಲ್‌ಗಿಂತ ಕಡಿಮೆಯಿಲ್ಲ ಎಂದು ಹೇಳಲಾಗುತ್ತದೆ . ಲಕ್ಷುರಿಯಸ್‌ ಇಂಟಿರಿಯರ್‌ ಹೊಂದಿರುವ ಈ ವ್ಯಾನ್‌ನ ಫೋಟೋಗಳನ್ನು ಕಪಿಲ್ ಕೆಲವು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಶಾರುಖ್ ಸುಮಾರು 4 ಕೋಟಿ ರೂ ಬೆಲೆಯ ವ್ಯಾನಿಟಿ ವ್ಯಾನ್‌ ಓನರ್‌ ಆದರೆ ಸಲ್ಮಾನ್ ಖಾನ್ ಅವರ ವ್ಯಾನಿಟಿ ವ್ಯಾನ್‌ನ ಬೆಲೆ ಸುಮಾರು 1.5 ಕೋಟಿ ರೂ., ಅದೇ ಸಮಯದಲ್ಲಿ ಕಪಿಲ್ ಅವರ ವ್ಯಾನಿಟಿ ವ್ಯಾನ್‌ನ ಬೆಲೆ 5 ಕೋಟಿ ರೂ ಎಂದು ಹೇಳಲಾಗಿದೆ.
ಅನೇಕ ಲಕ್ಷುರಿಯಸ್‌ ಕಾರುಗಳನ್ನು ಸಹ ಹೊಂದಿರುವ ಕಪಿಲ್‌ ಸುಮಾರು 1.19 ಕೋಟಿ ರೂ. ಬೆಲೆಯ ಮರ್ಸಿಡಿಸ್ ಕಾರು ಹಾಗೂ 90 ಲಕ್ಷದಿಂದ 1.3 ಕೋಟಿ ರೂಪಾಯಿ ಮೌಲ್ಯದ ವೋಲ್ವೋ ಎಕ್ಸ್‌ಸಿ ಕಾರಿನ ಓನರ್‌ ಕೂಡ ಹೌದು. ಇದಲ್ಲದೆ, ರೇಂಜ್ ರೋವರ್ ಕಾರನ್ನು ಸಹ ಹೊಂದಿದ್ದಾರೆ.
ಮುಂಬೈನಲ್ಲಿ 15 ಕೋಟಿ ರೂ. ಬೆಲೆಯ ಐಷಾರಾಮಿ ಮನೆ ಜೊತೆಗೆ ಸುಮಾರು 25 ಕೋಟಿ ರೂಪಾಯಿಗಳ ಬಂಗಲೆಯನ್ನು ಪಂಜಾಬ್‌ನಲ್ಲಿ ಓನ್‌ ಮಾಡುತ್ತಾರೆ ಈ ಫೇಮಸ್‌ ಕಾಮಿಡಿಯನ್‌.
ದಿ ಕಪಿಲ್ ಶರ್ಮಾ ಶೋ ಮಾತ್ರವಲ್ಲದೆ, ಕಪಿಲ್ ಸ್ಟೇಜ್ ಶೋಗಳಿಂದ ಕೂಡ ಸಾಕಷ್ಟು ಸಂಪಾದಿಸುತ್ತಾರೆ.ಕಪಿಲ್ ಶರ್ಮಾ ಲೈವ್ ಸ್ಟೇಜ್ ಶೋಗಳನ್ನು ಸಹ ಮಾಡುತ್ತಾರೆ.ವರದಿಗಳ ಪ್ರಕಾರ, ಕಪಿಲ್ ಲೈವ್ ಸೋಲೋ ಸ್ಟೇಜ್‌ ಶೋಗೆ 75 ಲಕ್ಷ ರೂ ಚಾರ್ಜ್‌ ಮಾಡುತ್ತಾರೆ.
ವೃತ್ತಿಜೀವನವನ್ನು ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಮೂಲಕ ಪ್ರಾರಂಭಿಸಿದಕಪಿಲ್ಇದುವರೆಗೂಎರಡು ಬಾಲಿವುಡ್ ಸಿನಿಮಾಗಳಾದ 'ಕಿಸ್ ಕಿಸ್ ಕೋ ಪ್ಯಾರ್ ಕರೂನ್' ಮತ್ತು 'ಫಿರಂಗಿ'ಗಳಲ್ಲಿ ಕೆಲಸ ಮಾಡಿದ್ದಾರೆ.

Latest Videos

click me!