ಕಾಂತಾರ ಚಾಪ್ಟರ್ 1 ಒಟ್ಟು ಕಲೆಕ್ಷನ್ ಎಷ್ಟು? ಈ ರಾಜ್ಯಗಳಲ್ಲಿ ರಿಷಬ್ ಶೆಟ್ಟಿ ಸಿನಿಮಾಗೆ ತುಂಬಾ ನಷ್ಟವಂತೆ?

Published : Nov 09, 2025, 05:46 PM IST

ಭಾರೀ ನಿರೀಕ್ಷೆಯೊಂದಿಗೆ ವಿಶ್ವಾದ್ಯಂತ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿದ್ದ ಕಾಂತಾರ ಚಾಪ್ಟರ್ 1 ಸಿನಿಮಾ. 1000 ಕೋಟಿ ಕಲೆಕ್ಷನ್ ಮಾಡಲು ವಿಫಲವಾದ ರಿಷಬ್ ಶೆಟ್ಟಿ ಸಿನಿಮಾ ಒಟ್ಟಾರೆಯಾಗಿ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತಾ?

PREV
14
ಮೊದಲಿನಿಂದಲೂ ನಿರೀಕ್ಷೆ

ಈ ವರ್ಷ ಭಾರೀ ನಿರೀಕ್ಷೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದ ಸಿನಿಮಾ ಕಾಂತಾರ ಚಾಪ್ಟರ್ 1. ಬಿಡುಗಡೆಯಾದ ದಿನದಿಂದಲೇ ಅದ್ಭುತ ಪಾಸಿಟಿವ್ ಟಾಕ್ ಪಡೆಯಿತು. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ, 2022ರಲ್ಲಿ ಸಂಚಲನ ಸೃಷ್ಟಿಸಿದ್ದ ಕಾಂತಾರ ಸಿನಿಮಾದ ಪ್ರೀಕ್ವೆಲ್ ಆಗಿದೆ. ಹೀಗಾಗಿ ಈ ಚಿತ್ರದ ಮೇಲೆ ಮೊದಲಿನಿಂದಲೂ ನಿರೀಕ್ಷೆ ಹೆಚ್ಚಿತ್ತು. ಆದರೆ, ಪ್ರೀಮಿಯರ್ ಶೋಗಳಿಂದಲೇ ಅದ್ಭುತ ಪ್ರತಿಕ್ರಿಯೆ ಬಂದರೂ, ಅಂದುಕೊಂಡ ಗುರಿ ತಲುಪಲು ಸಿನಿಮಾ ವಿಫಲವಾಯಿತು.

24
ಕ್ಲೋಸಿಂಗ್ ಕಲೆಕ್ಷನ್ ಲೆಕ್ಕ

ಕಾಂತಾರ 1ಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕೆಲವು ಕಡೆ ಕಲೆಕ್ಷನ್ ಮಳೆಯೇ ಸುರಿಯಿತು. ಆದರೆ ಕೆಲವು ಕಡೆ ಬಾಕ್ಸ್ ಆಫೀಸ್ ಕಲೆಕ್ಷನ್ ನಿರಾಸೆ ಮೂಡಿಸಿತು. ಇನ್ನೂ ಕೆಲವು ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಓಡುತ್ತಿದ್ದರೂ, ಶೇ.90ರಷ್ಟು ಕಡೆ ಶೇರ್ ಕಲೆಕ್ಷನ್ ನಿಂತಿದ್ದರಿಂದ, ವಿತರಕರು ಕ್ಲೋಸಿಂಗ್ ಕಲೆಕ್ಷನ್ ಲೆಕ್ಕ ಹಾಕಿದ್ದಾರೆ. ಟ್ರೇಡ್ ವಿಶ್ಲೇಷಕರ ಪ್ರಕಾರ, ತೆಲುಗು ರಾಜ್ಯಗಳಲ್ಲಿ ಈ ಸಿನಿಮಾ ಎಷ್ಟು ಗಳಿಸಿದೆ ಅಂದ್ರೆ..?

34
25 ಕೋಟಿಗೂ ಹೆಚ್ಚು ನಷ್ಟ

ತೆಲುಗು ರಾಜ್ಯಗಳ ಒಟ್ಟು ಶೇರ್ ಕಲೆಕ್ಷನ್ 66.84 ಕೋಟಿ ಆಗಿದೆ. ಆದರೆ ಈ ಸಿನಿಮಾದ ಎರಡೂ ತೆಲುಗು ರಾಜ್ಯಗಳ ಪ್ರೀ-ರಿಲೀಸ್ ಥಿಯೇಟ್ರಿಕಲ್ ಬ್ಯುಸಿನೆಸ್ ಸುಮಾರು 91 ಕೋಟಿಯಷ್ಟು ಆಗಿದ್ದರಿಂದ, ವಿತರಕರಿಗೆ ಸುಮಾರು 25 ಕೋಟಿಗೂ ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ. ಏರಿಯಾವಾರು ಕಾಂತಾರ 1 ಕಲೆಕ್ಷನ್ ಹೀಗಿದೆ..

ನೈಜಾಂ: 31.65 ಕೋಟಿ
ಸೀಡೆಡ್: 9.78 ಕೋಟಿ
ಉತ್ತರಾಂಧ್ರ: 9.08 ಕೋಟಿ
ಪೂರ್ವ ಗೋದಾವರಿ: 3.90 ಕೋಟಿ
ಪಶ್ಚಿಮ ಗೋದಾವರಿ: 2.73 ಕೋಟಿ
ಗುಂಟೂರು: 3.55 ಕೋಟಿ
ಕೃಷ್ಣಾ: 4.00 ಕೋಟಿ
ನೆಲ್ಲೂರು: 2.15 ಕೋಟಿ

ಟಾಲಿವುಡ್‌ನಲ್ಲಿ ಪಾಸಿಟಿವ್ ಟಾಕ್ ಬಂದರೂ, ಭಾರೀ ನಷ್ಟ ಅನುಭವಿಸಿದ ಅಪರೂಪದ ಸಿನಿಮಾ ಕಾಂತಾರ ಚಾಪ್ಟರ್ 1.

44
ತೆಲುಗು ಮಾರುಕಟ್ಟೆಯಲ್ಲಿ ಹೊಡೆತ

ತೆಲುಗು ರಾಜ್ಯಗಳಲ್ಲಿ ನಿರಾಸೆ ಮೂಡಿಸಿದರೂ, ಇತರ ಭಾಷೆಗಳಲ್ಲಿ ಈ ಸಿನಿಮಾ ನಾಗಾಲೋಟ ಮುಂದುವರಿಸಿದೆ. ಕರ್ನಾಟಕದಲ್ಲಿ 245 ಕೋಟಿ ಗ್ರಾಸ್, ತಮಿಳುನಾಡಿನಲ್ಲಿ 71.75 ಕೋಟಿ ಗ್ರಾಸ್, ಕೇರಳದಲ್ಲಿ 55.68 ಕೋಟಿ ಗ್ರಾಸ್, ಹಿಂದಿ ಸೇರಿ ಇತರೆಡೆ 251 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಮೂಲಗಳು ಹೇಳಿವೆ. ಹಾಗೆಯೇ ಓವರ್‌ಸೀಸ್ ಮಾರುಕಟ್ಟೆಯಲ್ಲೂ ಈ ಸಿನಿಮಾ ಸುಮಾರು 110 ಕೋಟಿ ಗ್ರಾಸ್ ಗಳಿಸಿದೆ. ಒಟ್ಟಾರೆಯಾಗಿ ವಿಶ್ವಾದ್ಯಂತ ಎಲ್ಲಾ ಭಾಷೆಗಳಿಂದ 840 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಕಲೆಕ್ಷನ್ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ 'ಕಾಂತಾರ 1' ಗೆದ್ದರೂ, ತೆಲುಗು ಮಾರುಕಟ್ಟೆಯಲ್ಲಿ ವಿತರಕರಿಗೆ ದೊಡ್ಡ ಹೊಡೆತ ನೀಡಿದೆ.

Read more Photos on
click me!

Recommended Stories