ಮಾಲ್ತಿ ಮೇರಿಗೆ 2 ವರ್ಷ; ಮುದ್ದು ಮಗಳ ಬರ್ತ್‌ಡೇ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

First Published | Jan 18, 2024, 11:46 AM IST

ಪ್ರಿಯಾಂಕಾ ಚೋಪ್ರಾ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ‌ನ ಎರಡನೇ ಹುಟ್ಟುಹಬ್ಬದ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಬಾಲಿವುಡ್‌ನಿಂದ ಹಾಲಿವುಡ್‌ನಲ್ಲಿ ತನ್ನ ಛಾಪು ಮೂಡಿಸಿದ ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಅವರ ಎರಡನೇ ಹುಟ್ಟುಹಬ್ಬವನ್ನು ತನ್ನ ಪತಿ ನಿಕ್ ಜೋನಾಸ್ ಅವರೊಂದಿಗೆ ಆಚರಿಸಿದ್ದಾರೆ.

ಮಗಳ ಎರಡನೇ ಹುಟ್ಟುಹಬ್ಬದ ಫೋಟೋಗಳನ್ನು ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ, 'ಅವಳೊಂದು ಪವಾಡ, ಅವಳಿಗೀಗ 2 ವರ್ಷ' ಎಂದು ಬರೆದಿದ್ದಾರೆ.

Tap to resize

ಮಗಳ ಹುಟ್ಟುಹಬ್ಬದ ಅಂಗವಾಗಿ ಪ್ರಿಯಾಂಕಾ ಚೋಪ್ರಾ, ನಿಕ್ ಜೊನಾಸ್ ಮತ್ತು ಪ್ರಿಯಾಂಕಾ ತಾಯಿ ಮಧು ಚೋಪ್ರಾ ಮಾಲ್ತಿಯೊಂದಿಗೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 
 

ಈ ಸಂದರ್ಭದಲ್ಲಿ ಮಾಲ್ತಿ ಸರಳವಾದ ಪೈಜಾಮಾ ಧರಿಸಿದ್ದು, ಹಣೆಗೆ ಬಿಂದಿ ಇಟ್ಟುಕೊಂಡಿದ್ದಾಳೆ. ಮಾಲ್ತಿಯ ಕತ್ತಿಗೆ ಆಕೆಗಿಂತಾ ದೊಡ್ಡದಾದ ಹೂವಿನ ಹಾರ ಹಾಕಿರುವುದು ಬಹಳ ಮುದ್ದಾಗಿ ಕಾಣಿಸುತ್ತಿದೆ.

ಪೂಜೆಯ ಬಳಿಕ ಮಾಲ್ತಿಯ ಹುಟ್ಟುಹಬ್ಬಕ್ಕಾಗಿ ಎಲ್ಮೋ-ಥೀಮ್ ಬರ್ತ್‌ಡೇ ಪಾರ್ಟಿ ಆಚರಿಸಲಾಗಿದೆ. ಇದರಲ್ಲಿ ನಿಕ್ ಸಹೋದರ ಸೇರಿದಂತೆ ಗೆಳೆಯರು ಭಾಗವಹಿಸಿದ್ದಾರೆ.
 

ಈ ಪಾರ್ಟಿಗಾಗಿ ಪುಟಾಣಿ ಮಾಲ್ತಿಗೆ ಪಿಂಕ್ ಬಣ್ಣದ ಉಡುಗೆ ಮತ್ತು ಹಾರ್ಟ್ ಶೇಪಿನ ಕನ್ನಡಕಗಳನ್ನು ಹಾಕಲಾಗಿದೆ. ತಲೆಯ ಮೇಲೆ ಕಿರೀಟವೂ ಇದೆ.
 

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಜನವರಿ 15, 2022 ರಂದು ಬಾಡಿಗೆ ತಾಯ್ತನದ ಮೂಲಕ ಪೋಷಕರಾದರು. 

ಪ್ರಿಯಾಂಕಾ ತಾಯಿ ಹೆಸರು ಮಧು ಮಾಲ್ತಿ ಛೋಪ್ರಾವಾಗಿದ್ದು  ಹಾಗೂ ನಿಕ್ ಜೊನಾಸ್ ತಾಯಿ ಡೆನಿಸ್ ಮೇರಿ ಜೊನಾಸ್ ಆಗಿದ್ದಾರೆ. ಇವರಿಬ್ಬರ ಹೆಸರಿನ ಮಧ್ಯದ ಹೆಸರನ್ನು ಬಳಸಿ ಮಗಳಿಗೆ ಮಾಲ್ತಿ ಮೇರಿ ಎಂದು ನಾಮಕರಣ ಮಾಡಲಾಗಿದೆ. 

ಮಾಲ್ತಿ ಬರ್ತ್‌ಡೇಯನ್ನು ಹಿಂದೂ ಆಚರಣೆಯಂತೆ ಪೂಜೆ ಮಾಡಿಸಿ, ನಂತರ ಪಾರ್ಟಿ ಮಾಡಿದ್ದರಿಂದ - ಪ್ರಿಯಾಂಕಾ ಮಗಳಿಗೆ ನೀಡುತ್ತಿರುವ ಸಂಸ್ಕಾರಕ್ಕೆ ಶ್ಲಾಘನೆ ಕೇಳಿಬರುತ್ತಿದೆ.

Latest Videos

click me!