ಕಂಗನಾ ಸಹೋದರ ಇತ್ತಿಚೆಗಷ್ಟೆ ಮದುವೆಯಾಗಿದ್ದು ಅತ್ತಿಗೆ ರಿತುರನ್ನು ಕಂಗನಾ ಬರಮಾಡಿಕೊಂಡಿದ್ದಾರೆ. ಪೋಟೋ ಹಂಚಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬರೆದಿರುವ ಕಂಗನಾ ದೀಪಾವಳಿ ಸಂದರ್ಭ ಮನೆಗೆ ಮಹಾಲಕ್ಷ್ಮೀ ಆಗಮನವಾಗಿದೆ ಎಂದು ಹೇಳಿದ್ದಾರೆ. ಮೊದಲ ಬಾರಿಗೆ ಮಹಾಲಕ್ಷ್ಮೀಯನ್ನು ಮನೆಗೆ ತುಂಬಿಸಿಕೊಳ್ಳುತ್ತಿದ್ದೇವೆ ಎಂದು ಕಂಗನಾ ದೀಪಾವಳಿ ಶುಭಾಶಯ ಕೋರುತ್ತಲೇ ಹೇಳಿದ್ದಾರೆ. ಚೂಡಿದಾರದಲ್ಲಿ ಕಂಗನಾ ಕಂಗೊಳಿಸಿದರೆ ರಿತು ಸಲ್ವಾರ್ ಕುರ್ತಾದಲ್ಲಿ ಇದ್ದಾರೆ. ನಮ್ಮ ಕುಟುಂಬದ ಮೇಲೆ ನಿಮ್ಮೆಲ್ಲರ ಹಾರೈಕೆ ಇರಲಿ. ಎಲ್ಲರಿಗೂ ದೀಪಾವಳಿ ಶುಭಾಶಯ ಎಂದು ಕಂಗನಾ ತಿಳಿಸಿದ್ದಾರೆ. Actress Kangana Ranaut is happy to welcome home her new sister-in-law, whom she refers to as devi, on the auspicious occasion of Deepavali. ಅತ್ತಿಗೆಯನ್ನು ಮನೆ ತುಂಬಿಸಿಕೊಂಡ ಕಂಗನಾ ರಣಾವತ್