ದೀಪಿಕಾ, ಆಮೀರ್ ಮತ್ತು ಅನುಷ್ಕಾರ ಮೇಲೂ ಕಂಗನಾಳ ವಾಗ್ದಾಳಿ

First Published Aug 21, 2020, 5:15 PM IST

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ಹಸ್ತಾಂತರಿಸಿದೆ. ಕಂಗನಾ ರಣಾವತ್‌ ಸುಂಶಾತ್‌ ಸಾವಿನ  ನಂತರ ಅನೇಕ ಬಾಲಿವುಡ್ ಸೆಲೆಬ್ರೆಟಿಗಳನ್ನು ಗುರಿಯಾಗಿಸಿ ವಾಗ್ದಾಳಿ  ನೆಡೆಸುತ್ತಿದ್ದಾರೆ. ಇತ್ತೀಚೆಗೆ  ಅವರು ದೀಪಿಕಾ ಪಡುಕೋಣೆಗೆ  ಡಿಪ್ರೆಶನ್‌ ದಂದೆ ನೆಡೆಸುವವಳು  ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ,  ರಿಯಾ ಚಕ್ರವರ್ತಿಯ ದುಬಾರಿ ವಕೀಲರ ಬಗ್ಗೆಯೂ ಮಾತಾನಾಡಿದ್ದಾರೆ.  ಅಲ್ಲದೆ ಅಮೀರ್ ಖಾನ್, ಅನುಷ್ಕಾ ಶರ್ಮಾ ಮತ್ತು ಆದಿತ್ಯ ಚೋಪ್ರಾ ಅವರಿಗೂ ಹಿಗ್ಗಾಮುಗ್ಗಾ ಮಾತಾನಾಡಿದ್ದಾರೆ.

ದೀಪಿಕಾ ಪಡುಕೋಣೆ 2015-16ರಲ್ಲಿ ಇದ್ದಕ್ಕಿದ್ದಂತೆ 2008 ರಲ್ಲಿ ನಾನು ಮೋಸ ಹೋಗಿದ್ದೇನೆ ಅದರಿಂದ ನಾನು ಇಂದು ಖಿನ್ನತೆಗೆ ಒಳಗಾಗಿದ್ದೇನೆ. ಎಂದು ಹೇಳಿತ್ತಾಳೆ. 8 ವರ್ಷಗಳ ನಂತರ? ಇವುಗಳ ಮಧ್ಯದಲ್ಲಿ ಅವಳ ಅಫೇರ್‌ ನಡೆಯುತ್ತಿತ್ತು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಳು. ಅಲಂಕಾರಮಾಡಿಕೊಂಡು ಹೊರಗೆ ಹೋತ್ತಾಳೆ. ಎಲ್ಲವೂ ನಡೆಯುತ್ತದೆ. ಮದುವೆಯೂ ಕೂಡ. ಆದರೆ ಖಿನ್ನತೆಯೂ ಇದೆ' ಎಂದು ಕಂಗನಾ ದೀಪಿಕಾಳ ಖಿನ್ನತೆಯ ಬಗ್ಗೆ ರಿಪಬ್ಲಿಕ್ ಟಿವಿಗೆ ಬುಧವಾರ ನೀಡಿದ ಸಂದರ್ಶನದಲ್ಲಿ ಮಾತಾನಾಡಿದ್ದಾರೆ.
undefined
'ಇದು ಯಾವ ರೀತಿಯ ಡಿಪ್ರೆಷನ್‌, ಅದು 8 ವರ್ಷಗಳ ನಂತರ ಸಂಭವಿಸುತ್ತದೆ. ನನಗೆ ತಿಳಿದ ಮಟ್ಟಿಗೆ, ಮಾನಸಿಕ ಅಸ್ವಸ್ಥತೆಯೊಂದಿಗೆ ಹೋರಾಡುತ್ತಿರುವ ಜನರ ಜೀವನದ ಬಹುಪಾಲು ಭಾಗವು ಕಾರ್ಯನಿರ್ವಹಿಸುವುದಿಲ್ಲ. ಅವರು ತಮ್ಮ ಕೆಲಸವನ್ನು ಪೂರ್ಣ ಸಾಮರ್ಥ್ಯದಿಂದ ಮಾಡಲು ಸಾಧ್ಯವಾಗುತ್ತದೆ ಅಥವಾ ಇಲ್ಲವೇ ಎಂಬ ಅನುಮಾನವಿದೆ? ಮತ್ತು ಅವಳ ಖಿನ್ನತೆಯು 8 ವರ್ಷಗಳ ಹಿಂದಿನ ಬ್ರೇಕಪ್‌ನಿಂದ ಆಗಿದೆ' ಎಂದು ಕಂಗನಾ ಪ್ರಶ್ನಿಸಿದ್ದಾರೆ.
undefined
ಅದೇ ಇಂಟರ್‌ವ್ಯೂವ್‌ನಲ್ಲಿ ಅಮೀರ್ ಖಾನ್ ಮತ್ತು ಇತರ ಸೆಲೆಬ್ರೆಟಿಗಳು ಸುಶಾಂತ್‌ ಸಾವಿಗೆ ಧ್ವನಿ ಎತ್ತದ ಕಾರಣ ಕಂಗನಾ ಗುರಿಯಾಗಿಸಿಕೊಂಡಿದ್ದಾರೆ.
undefined
'ಈ ದಂಧೆಯು ಇಡೀ ರಾಕೇಟ್ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಅಂದರೆ ಒಬ್ಬ ವ್ಯಕ್ತಿಯು ಮಾತನಾಡದಿದ್ದರೆ, ಆ ರಾಕೇಟ್ ನ ಯಾರು ಮಾತಾನಾಡುವುದಿಲ್ಲ. ಸುಶಾಂತ್ ಪರ ಸಿಬಿಐ ತನಿಖೆಗೆ ಯಾರೂ ಒತ್ತಾಯಿಸಲಿಲ್ಲ' ಎಂದಿದ್ದಾರೆ ಮಣಿಕರ್ಣೀಕ ನಟಿ.
undefined
'ಅಮೀರ್ ಖಾನ್ ಸುಶಾಂತ್‌ ಜೊತೆ 'ಪಿಕೆ' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ, ಆದರೆ ಅಮೀರ್ ಏನನ್ನೂ ಹೇಳದಿದ್ದರೆ ಅನುಷ್ಕಾ (ಶರ್ಮಾ) ಏನನ್ನೂ ಹೇಳುವುದಿಲ್ಲ. ಆಗ ರಾಜು ಹಿರಾನಿ ಏನನ್ನೂ ಹೇಳುವುದಿಲ್ಲ ಮತ್ತು ನಂತರ ಆದಿತ್ಯ ಚೋಪ್ರಾ ಮತ್ತು ಅವರ ಪತ್ನಿ ರಾಣಿ ಮುಖರ್ಜಿ ಕೂಡ ಏನನ್ನೂ ಹೇಳುವುದಿಲ್ಲ...
undefined
...ಇದು ಸಂಪೂರ್ಣ ದಂಧೆಯಾಗಿದೆ, ಇದು ಗ್ಯಾಂಗ್‌ನಂತೆ ಕಾರ್ಯನಿರ್ವಹಿಸುತ್ತದೆ. ಈಗಲೂ ಸಹ ಕೆಲವೇ ಜನ ಮಾತಾನಾಡುತ್ತಿದ್ದಾರೆ ಉಳಿದವರೆಲ್ಲರೂ ಸುಮ್ಮನೆ ಕುಳಿತಿದ್ದಾರೆ' ಎಂದ ಕಂಗನಾ ರಣಾವತ್‌.
undefined
'ಇಡೀ ದೇಶ ನೋಡುತ್ತಿದೆ. ಅವರ ಹೃದಯದಲ್ಲಿ ಕಳ್ಳನಿಲ್ಲದಿದ್ದರೆ, ನಿಮ್ಮೊಂದಿಗೆ ಕೆಲಸ ಮಾಡಿದ ವ್ಯಕ್ತಿ ಸತ್ತಾಗ ನೊಣ-ಸೊಳ್ಳೆ ಸತ್ತುಹೋದಂತೆ ಏಕೆ ವರ್ತಿಸುತ್ತಿದ್ದೀರಿ. ನಿಮ್ಮ ಬಾಯಿಯಲ್ಲಿ ಅವರ ಬಗ್ಗೆ ಎರಡು ಪದಗಳಿಲ್ಲ. ಅವರ ತಂದೆ ಅಳುತ್ತಿದ್ದಾರೆ, ಆದರೆ ನೀವು ಅವರಿಗೆ ಸಂತಾಪ ಸೂಚಿಸುವ ಮಾತನ್ನು ಹೇಳಲು ಸಾಧ್ಯವಿಲ್ಲ. ನೀವು ಯಾವುದಕ್ಕೆ ಹೆದರುತ್ತೀರಿ? ಇದನ್ನು ಇಡೀ ಪ್ರಪಂಚದ ಮುಂದೆ ಬಹಿರಂಗಪಡಿಸಲಾಗಿದೆ' ಎಂದು ಕಂಗನಾ ಹೇಳಿದರು .
undefined
'ರಿಯಾ ಯಾಕೆ ಮತ್ತು ಹೇಗೆ ಇಷ್ಡು ದೊಡ್ಡ ವಕೀಲರನ್ನು ಪಡೆದರು ಎಂದು ಕಂಗನಾ ಪ್ರಶ್ನಿಸಿದರು'. ರಿಯಾ ಚಕ್ರವರ್ತಿ ಯಾವಲಾಯರ್‌ ಹೈಯರ್‌ ಮಾಡಿಕೊಂಡಿದಾರೋ ಅವರ ಲಿಂಕ್‌ಗಳು, ಸಂಪರ್ಕಗಳನ್ನು ಹುಡುಕಲು ಮತ್ತು ಅವರನ್ನು ತಲುಪಲು ನನಗೆ ಹಲವಾರು ದಿನಗಳು ಬೇಕಾಗುತ್ತವೆ. ಆದರೆ ರಿಯಾ ಅವರನ್ನು ಒಂದು ದಿನದಲ್ಲಿ ಒಂದು ಬಾರಿಗೆ ಹೇಗೆ ತಲುಪಿದರು?" ಅವರು ಅಂತಹ ದುಬಾರಿ ವಕೀಲರಾಗಿದ್ದಾರೆ' ಎಂದು ಪ್ರಶ್ನಿಸಿದ್ದಾರೆ
undefined
'ನೀವು ಏನೂ ಮಾಡದಿದ್ದರೆ ನೀವು ಯಾಕೆ ಇಷ್ಟು ದೊಡ್ಡ ಕ್ರಿಮಿನಲ್ ವಕೀಲರನ್ನು ನೇಮಿಸಿಕೊಳ್ಳಬೇಕು' ಎಂದು ಕಂಗನಾ ಪ್ರಶ್ನಿಸಿದರು. 'ಅನೇಕ ಜನರು ಅವರನ್ನು ಬೆಂಬಲಿಸುತ್ತಿದ್ದಾರೆ. ಜಾವೇದ್ ಅಖ್ತರ್ ಕುಟುಂಬದಿಂದ ಮಹಿಳಾ ಆಯೋಗಕ್ಕೆ ಮನವಿ ಹೋಗಿದೆ. ಅವರು ಯಾವ ರೀತಿಯ ಜನರನ್ನು ರಕ್ಷಿಸುತ್ತಾರೆ ಎಂಬುದನ್ನು ನೀವು ನೋಡಬಹುದು' ಎಂದಿದ್ದಾರೆ ನಟಿ.
undefined
click me!