ಮಧ್ಯರಾತ್ರಿಯಲ್ಲಿ ಐಶ್ವರ್ಯಾರ ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಹಾರಲು ಸಿದ್ಧರಾಗಿದ್ದರು ಸಲ್ಮಾನ್!

ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್  ಸಂಬಂಧವು ಬಾಲಿವುಡ್‌ನಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ಮತ್ತು ವಿವಾದಾತ್ಮಕ ಆಫೇರ್‌ ಆಗಿದೆ.ಬ್ರೇಕಪ್‌  ನಂತರ, ಐಶ್ವರ್ಯಾ ರೈ ಹಲವಾರು ಸಂದರ್ಶನಗಳಲ್ಲಿ ಸಲ್ಮಾನ್ ಅವರನ್ನು ಆಗಾಗ್ಗೆ ಹಿಂಸಿಸುತ್ತಿದ್ದರು ಎಂದು ಬಹಿರಂಗಪಡಿಸಿದ್ದರು. ಅಷ್ಟೇ ಅಲ್ಲ, ಫೋನ್‌ನಲ್ಲಿ ಅವರ ವರ್ತನೆಯೂ ಬಹಳ ವಿಚಿತ್ರವಾಗಿತ್ತು. ನಾನು ಬೇರೆ ಅವರ ಜೊತೆ ಸಂಬಂಧ ಹೊಂದಿದ್ದೇನೆ ಎಂಬ ಅನುಮಾನದ  ಮೇಲೆ ಅವನು ನನ್ನ ಮೇಲೆ ಅನೇಕ ಬಾರಿ ಕೈ ಎತ್ತಿದನು. ಐಶ್ ಅವರ ಆರೋಪಗಳನ್ನು ನಿರಾಕರಿಸಿದ ಸಲ್ಮಾನ್ ಅವರು- 'ನಾನು  ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ' ಎಂದಿದ್ದರು. ಆದರೆ, ಸಲ್ಮಾನ್  ಒಮ್ಮೆ ಮಧ್ಯರಾತ್ರಿಯಲ್ಲಿ ಐಶ್ವರ್ಯಾ  ಮನೆಯ ಹೊರಗೆ ದೊಡ್ಡ ರಾದ್ಧಂತ ಮಾಡಿದ್ದರಂತೆ.  

ಐಶ್ವರ್ಯಾಳನ್ನು ಪ್ರೀತಿಸುತ್ತಿದ್ದ ಸಲ್ಮಾನ್ ಮದುವೆಯಾಗಲು ಬಯಸುತ್ತಿದ್ದರು ಮತ್ತು ಐಶ್ವರ್ಯಾಳನ್ನೂ ಕೇಳಿದರು. ಆದರೆ ಐಶ್ವರ್ಯಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದ ನಟಿ ಅವಸರದಲ್ಲಿ ಸೆಟಲ್‌ ಆಗಲು ಇಷ್ಟಪಡದ ಸಮಯದಲ್ಲಿ ನೆಡೆದ ಘಟನೆ ಇದು ಎಂದು ವರದಿಗಳು ಹೇಳುತ್ತವೆ.
ಐಶ್ವರ್ಯಾ ನೋ ಎಂದಾಗ ಸಲ್ಮಾನ್ ಅಷ್ಟೇನೂ ಸಂತೋಷವಾಗಿರಲಿಲ್ಲ. ನವೆಂಬರ್ 2001 ರಲ್ಲಿ ಒಂದು ರಾತ್ರಿ, ಸಲ್ಮಾನ್ ಐಶ್ವರ್ಯಾ ರೈ ಅವರ ಅಪಾರ್ಟ್ಮೆಂಟ್‌ಗೆ ತಲುಪಿ ಮಧ್ಯರಾತ್ರಿಯಲ್ಲಿ ಮನೆಯ ಬಾಗಿಲನನ್ನು ಬಡಿಯಲು ಪ್ರಾರಂಭಿಸಿದರು. ಐಶ್ವರ್ಯಾ ಅವರ ಅಪಾರ್ಟ್ಮೆಂಟ್ 17 ನೇ ಮಹಡಿಯಲ್ಲಿತ್ತು.

ಸಲ್ಮಾನ್ ಅಭಿಪ್ರಾಯವನ್ನು ಪಡೆಯಲು ಬಯಸಿದ್ದರು, ಆದರೆ ಐಶ್ವರ್ಯಾ ಅವರ ಬೇಡಿಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದಾಗ, ಸಲ್ಮಾನ್ 17ನೇ ಮಹಡಿಯಿಂದ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಿದರು. ಮುಂಜಾನೆ 3 ಗಂಟೆಯವರೆಗೆ ಸಲ್ಮಾನ್ ಐಶ್ವರ್ಯ ಮನೆಯ ಬಾಗಿಲು ಬಡಿಯುತ್ತಲೇ ಇದ್ದರು ಮತ್ತು ಕೈಗಳಿಂದ ರಕ್ತ ಬರಲು ತೊಡಗಿದ ಪರಿಸ್ಥಿತಿಯಲ್ಲಿ ಐಶ್ವರ್ಯಾಗೆ ಬಾಗಿಲು ತೆರೆಯುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಾಸ್ತವವಾಗಿ, ಇವೆಲ್ಲವನ್ನೂ ಮಾಡಿದ ಕಾರಣ ಆಶ್‌ನಿಂದ ಮದುವೆಗೆ ಭರವಸೆ ಪಡೆಯಬೇಕೆಂದು ಅವರು ಬಯಸಿದ್ದರು. ನಂತರ ಸಲ್ಮಾನ್ ಸಂದರ್ಶನವೊಂದರಲ್ಲಿ ತಾನು ಐಶ್ವರ್ಯಾಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಮತ್ತು ಈ ಭಯದಿಂದಾಗಿ ತುಂಬಾ ವೈಲೆಂಟ್‌ ಆಗುತ್ತಿದೆ ಎಂದು ಹೇಳಿದರು.
ಹಲವು ತಿಂಗಳುಗಳ ಕಾಲ ಸಲ್ಮಾನ್ ಮತ್ತು ಐಶ್ವರ್ಯಾ ಆ ರಾತ್ರಿ ಗಲಾಟೆಯ ಬಗ್ಗೆ ಮೌನವಾಗಿದ್ದರು. ಸುಮಾರು 4 ತಿಂಗಳ ನಂತರ, ಆ ರಾತ್ರಿ ಐಶ್ವರ್ಯಾ ಮನೆಯ ಹೊರಗೆ ರಾದ್ಧಂತ ಮಾಡಿದ್ದೆ ಎಂದು ಸ್ವತಂ ಸಲ್ಮಾನ್‌ ಒಪ್ಪಿಕೊಂಡರು, ಆದರೆ ಮಾಧ್ಯಮಗಳು ಅದಕ್ಕೆ ಮಸಾಲೆ ಸೇರಿ ಪಬ್ಲಿಶ್‌ ಮಾಡಿದವು.
'ಐಶ್ವರ್ಯಾ ಅವರೊಂದಿಗೆ ನನಗೆ ಸಂಬಂಧವಿದೆ. ನೀವು ಸಂಬಂಧದಲ್ಲಿ ಜಗಳವಾಡದಿದ್ದರೆ, ನೀವು ಪರಸ್ಪರ ಪ್ರೀತಿಸುವುದಿಲ್ಲ ಎಂದರ್ಥ. ಅಪರಿಚಿತ ವ್ಯಕ್ತಿಯೊಂದಿಗೆ ನಾನು ಯಾಕೆ ಜಗಳವಾಡುತ್ತೇನೆ. ನಾವು ಪರಸ್ಪರ ಪ್ರೀತಿಸುವುದರಿಂದ ಮಾತ್ರ ಇಂತಹ ವಿಷಯಗಳು ನಮ್ಮ ನಡುವೆ ನಡೆಯುತ್ತವೆ. ಈಗ ಪೊಲೀಸರು ನನ್ನನ್ನು ಹೇಗಾದರೂ ಆ ಕಟ್ಟಡಕ್ಕೆ ಹೋಗದಂತೆ ನಿಷೇಧಿಸಿದ್ದಾರೆ' ಎಂದು ಫೆಬ್ರವರಿ 2002 ರಲ್ಲಿ ಸಲ್ಮಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದರ ಜೊತೆಗೆ ಐಶ್ವರ್ಯಾರ ತಂದೆ ಕೂಡ ಮಗಳ ಜೊತೆ ಈ ವರ್ತನೆಗಾಗಿ ಸಲ್ಮಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ ಸಲ್ಮಾನ್ ಅವರು ತಮ್ಮ ತಪ್ಪನ್ನು ಅರಿತುಕೊಂಡಿದ್ದೇನೆ ಮತ್ತು ಐಶ್ವರ್ಯಾ ತಂದೆಗೆ ಯಾವುದೇ ದೂರು ಇಲ್ಲ ಎಂದು ಹೇಳಿದರು.
'ಸಲ್ಮಾನ್ ಅವರ ಮದ್ಯಪಾನದ ದುರಭ್ಯಾಸ ಮತ್ತು ಅನಂತರದ ಮಿಸ್‌ಬಿಹೇವ್‌ನಿಂದ ನಾನು ಬೇಸರಗೊಂಡಿದ್ದೇನೆ, ಅವನು ನನ್ನೊಂದಿಗೆ ಮೌಖಿಕ, ದೈಹಿಕ ಮತ್ತು ಎಮೋಷನಲ್‌ ಅಬ್ಯೂಸ್‌ ಮಾಡುತ್ತಿದ್ದನು' ಎಂದು ಸಂದರ್ಶನವೊಂದರಲ್ಲಿ, ಐಶ್ವರ್ಯಾ ಹೇಳಿಕೆ ನೀಡಿದ್ದರು.
'ನನ್ನ ಗೌರವ ಮತ್ತು ಘನತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಅನೇಕ ಬಾರಿ ಹೇಳುತ್ತಿದ್ದರು. ಯಾವುದೇ ಸ್ವಾಭಿಮಾನಿ ಮಹಿಳೆ ಅಂತಹ ವಿಷಯವನ್ನು ಸಹಿಸುವುದಿಲ್ಲ. ಸಲ್ಮಾನ್ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ನಾನು ನಿರ್ಧರಿಸಿದ ಕಾರಣ ಇದು' ಎಂದು ಐಶ್ವರ್ಯಾ ಅವರು ಸಲ್ಮಾನ್‌ ಜೊತೆಗಿನ ರಿಲೆಷನ್‌ಶಿಪ್‌ ಬ್ರೇಕಪ್‌ ನಂತರ ಹೇಳಿದ್ದರು.
ಹಲ್ ದಿಲ್ ದೇ ಚುಕೆ ಸನಮ್ (1999) ಚಿತ್ರದಲ್ಲಿ ಸಲ್ಮಾನ್-ಐಶ್ವರ್ಯಾ ಮೊದಲು ಒಟ್ಟಿಗೆ ಕೆಲಸ ಮಾಡಿದರು ಮತ್ತು ಅವರ ಸಂಬಂಧವು ಅದೇ ಚಿತ್ರದ ಸೆಟ್‌ನಲ್ಲಿ ಪ್ರಾರಂಭವಾಯಿತು.
ಇವರಿಬ್ಬರು ಸುಮಾರು 1-2 ವರ್ಷಗಳ ಕಾಲ ರಿಲೆಷನ್‌ಶಿಪ್‌ನಲ್ಲಿದ್ದರು. ಆದರೆ ನಂತರ ಸಲ್ಮಾನ್‌ ಖಾನ್‌ನ ಅಬ್ಸೇಸಿವ್‌ ವರ್ತನೆಯು ಬ್ರೇಕಪ್‌ಗೆ ಕಾರಣವಾಯಿತು.

Latest Videos

click me!