Drugs case: ಆರ್ಯನ್ ಅರೆಸ್ಟ್ ಬಗ್ಗೆ ಶಾರೂಖ್ ಕ್ಷಮೆ ಕೇಳ್ಬೇಕಿತ್ತು ಎಂದ ಕಂಗನಾ

Published : Oct 11, 2021, 01:25 PM ISTUpdated : Oct 11, 2021, 01:29 PM IST

ಡ್ರಗ್ಸ್ ಕೇಸ್‌ನಲ್ಲಿ ಮಗ ಅರೆಸ್ಟ್ ಆದ್ರೂ ಶಾರೂಖ್ ಸೈಲೆಂಟ್ ಕ್ಷಮೆ ಕೇಳ್ಬೇಕಿತ್ತು ಎಂದ ಕಂಗನಾ ರಣಾವತ್ ಜಾಕಿ ಚಾನ್‌ಗೆ ಹೋಲಿಸಿ ಪ್ರತಿಕ್ರಿಯಿಸಿದ ನಟಿ

PREV
110
Drugs case: ಆರ್ಯನ್ ಅರೆಸ್ಟ್ ಬಗ್ಗೆ ಶಾರೂಖ್ ಕ್ಷಮೆ ಕೇಳ್ಬೇಕಿತ್ತು ಎಂದ ಕಂಗನಾ

ನಟಿ ಕಂಗನಾ ರಣಾವತ್(Kangana Ranaut) ಆರ್ಯನ್ ಖಾನ್ ಬಂಧನದ ಬಗ್ಗೆ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ಮಗ ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಖ್ ಕ್ಷಮೆ ಕೇಳದ್ದಕ್ಕೆ ಪರೋಕ್ಷವಾಗಿ ಕಿಡಿಕಾರಿದ್ದಾರೆ.

210

ಡ್ರಗ್ ಪ್ರಕರಣದಲ್ಲಿ ತನ್ನ ಮಗನ ಬಂಧನದ ನಂತರ ಜಾಕಿ ಚಾನ್ ಹೇಗೆ ಕ್ಷಮೆಯಾಚಿಸಿದ್ದರು. ಆತನನ್ನು ರಕ್ಷಿಸಲು ನಿರಾಕರಿಸಿದ ಬಗ್ಗೆ ಅವಳು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸಣ್ಣ ವಿಚಾರವನ್ನು ಪೋಸ್ಟ್ ಮಾಡಿದ್ದಾರೆ.

310

ನಟಿ ಜಾಕಿ ಚಾನ್ ಮತ್ತು ಅವನ ಮಗನ ಫೋಟೋ ಹಂಚಿಕೊಂಡಿದ್ದರು. ಅವನ ಮಗನನ್ನು ಪೊಲೀಸರು ಕರೆದೊಯ್ಯುವ ಫೊಟೋ ಶೇರ್ ಮಾಡಿದ್ದರು. 2014 ರಲ್ಲಿ ಡ್ರಗ್ ಪ್ರಕರಣದಲ್ಲಿ ತನ್ನ ಮಗನನ್ನು ಬಂಧಿಸಿದಾಗ ಜಾಕಿ ಚಾನ್ ಅಧಿಕೃತವಾಗಿ ಕ್ಷಮೆಯಾಚಿಸಿದರು! ಅವರು ಹೇಳಿದ್ದಾರೆ.

410

ಮಗನ ಕೃತ್ಯದಿಂದ ನನಗೆ ನಾಚಿಕೆಯಾಗುತ್ತಿದೆ, ಇದು ನನ್ನ ವೈಫಲ್ಯ. ಆತನನ್ನು ರಕ್ಷಿಸಲು ನಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಜಾಕಿಚಾನ್ ಹೇಳಿದ್ದರು. ಇದರ ನಂತರ ಟಾಪ್ ನಟನ ಮಗನಿಗೆ 6 ತಿಂಗಳು ಜೈಲು ಶಿಕ್ಷೆ ನೀಡಲಾಯಿತು. ಅದಕ್ಕಾಗಿ ನಟ ಕ್ಷಮೆಯಾಚಿಸಿದ್ದರು.

510

ಇದನ್ನು ಶೇರ್ ಮಾಡಿದ ನಟಿ ಜಸ್ಟ್ ಸೇಯಿಂಗ್ ಎಂಬ ಹ್ಯಾಷ್‌ಟ್ಯಾಗ್ ಸೇರಿಸಿದ್ದಾರೆ. ಇದೀಗ ಈ ಪೋಸ್ಟ್ ವೈರಕ್ ಆಗಿದ್ದು ಕಂಗನಾ ಹೇಳಿದ್ದು ಶಾರೂಖ್ ಬಗ್ಗೆ ಎನ್ನುವುದರಲ್ಲಿ ಡೌಟೇ ಇಲ್ಲ.

ಸಮಂತಾ-ನಾಗ್ ವಿಚ್ಚೇದನೆ: ಡಿವೋರ್ಸ್ ಎಕ್ಸ್‌ಪರ್ಟ್ ಅಮೀರ್‌ಗೆ ಹಿಗ್ಗಾಮುಗ್ಗ ಬೈದ ಕಂಗನಾ

610

ನಡೆಯುತ್ತಿರುವ ಪ್ರಕರಣದ ಬಗ್ಗೆ ಕಂಗನಾ ರಣಾವತ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ, ಹೃತಿಕ್ ರೋಷನ್ ಆರ್ಯನ್ ಗೆ ತನ್ನ ಸಪೋರ್ಟ್ ವ್ಯಕ್ತಪಡಿಸಿ ಒಂದು ಟಿಪ್ಪಣಿಯನ್ನು ಪೋಸ್ಟ್ ಮಾಡಿದ ನಂತರ ನಟಿ ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದರು.

710

ಈಗ ಎಲ್ಲಾ ಮಾಫಿಯಾ ಆರ್ಯನ್ ಖಾನ್ ರಕ್ಷಣೆಗೆ ಬರುತ್ತಿದ್ದಾರೆ. ನಾವು ತಪ್ಪುಗಳನ್ನು ಮಾಡುತ್ತೇವೆ. ಆದರೆ ನಾವು ಅವರನ್ನು ವೈಭವೀಕರಿಸಬಾರದು ಎಂದಿದ್ದಾರೆ ಕಂಗನಾ.

810

ತಪ್ಪನ್ನು ವೈಭವೀಕರಿಸುವುದು ಅವನಿಗೆ ಆತ ಮಾಡಿದ್ದು ಸರಿ ಎಂಬ ದೃಷ್ಟಿಕೋನವನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ಅವನ ಕ್ರಿಯೆಗಳ ಪರಿಣಾಮಗಳನ್ನು ಅರಿತುಕೊಳ್ಳುವಂತೆ ಮಾಡಿ ಎಂದಿದ್ದಾರೆ.

910

ಆಶಾದಾಯಕವಾಗಿ ಅದು ಅವರನ್ನು ವಿಕಸನಗೊಳಿಸಬಹುದು. ಅವನನ್ನು ಇನ್ನೂ ಉತ್ತಮ ಮತ್ತು ದೊಡ್ಡವನನ್ನಾಗಿ ಮಾಡಬಹುದು. ಯಾರಾದರೂ ದುರ್ಬಲರಾದಾಗ ಅವರ ಬಗ್ಗೆ ಗಾಸಿಪ್ ಮಾಡದಿರುವುದು ಒಳ್ಳೆಯದು. ಆದರೆ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಭಾವಿಸುವುದು ಅಪರಾಧ ಎಂದಿದ್ದಾರೆ.

1010

ಆರ್ಯನ್ ಖಾನ್ ಅವರನ್ನು ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿದ್ದು, ಮುಂಬೈ ನ್ಯಾಯಾಲಯವು ಶುಕ್ರವಾರ ಶಾರೂಖ್ ಮಗನ ಜಾಮೀನು ಮನವಿಯನ್ನು ತಿರಸ್ಕರಿಸಿದೆ. ಅಕ್ಟೋಬರ್ 3 ರಂದು ಕ್ರೂಸ್ ಹಡಗಿನಲ್ಲಿ ನಡೆಸಿದ ದಾಳಿಯ ಸಂದರ್ಭದಲ್ಲಿ ಆತನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿ ಬಂಧಿಸಿತ್ತು.

click me!

Recommended Stories