ಸಹೋದರನ ಮದ್ವೇಲಿ ಕಂಗನಾ ಫುಲ್ ಮಿಂಚಿಂಗ್..! ಇಲ್ನೋಡಿ ಫೊಟೋಸ್

First Published | Oct 23, 2020, 9:59 AM IST

ಸಹೋದರನ ಮದುವೆ | ಬಾಲಿವುಡ್ ಕ್ವೀನ್ ಸೆಲೆಬ್ರೇಷನ್ ಮೋಡ್ | ಸ್ಟೈಲಿಷ್ ಡ್ರೆಸ್‌ನಲ್ಲಿ ಕಂಗನಾ ರಣಾವತ್

ಟ್ಯಾಲೆಂಟೆಡ್ ನಟಿ ಕಂಗನಾ ರಣಾವತ್ ಸದ್ಯ ಸಹೋದರನ ಮದುವೆಯಲ್ಲಿ ಬ್ಯುಸಿ ಇದ್ದಾರೆ. ಮೆಹಂದಿ, ವಿವಾಹ ಸೇರಿ ಕಾರ್ಯಕ್ರಮಗಳ ಫೋಟೋ ಶೇರ್ ಮಾಡ್ಕೊಂಡಿದ್ದಾರೆ ನಟಿ.
ಸಹೋದರನ ಮದುವೆಗೆ ಫುಲ್ ರೆಡಿಯಾಗಿರೋ ನಟಿ ಚಂದದ ಲೆಹಂಗಾಗಳಲ್ಲಿ ಮಿಂಚಿದ್ದಾರೆ. ಮದುವೆಯಲ್ಲಿ ಕಂಗನಾ ಡ್ರೆಸಿಂಗ್ ಹೀಗಿತ್ತು ನೋಡಿ
Tap to resize

ಲೆಹಂಗಾ ಲುಕ್: ಲಜ್ಜೋ ಸಿ ಅವರ ಸುಂದರ ತಿಳಿ ಬಣ್ಣದ ಲೆಹಂಗಾ ಧರಿಸಿದ್ದರು ಕಂಗನಾ. ಫುಲ್ ಸ್ಲೀವ್ ಚೋಲಿ, ಫ್ಲೋರ್ಡ್ ಪ್ರಿಂಟ್, ಗೋಲ್ಡನ್ ಬಾರ್ಡರ್‌ನ ಸ್ಕರ್ಟ್ ಮತ್ತು ಮ್ಯಾಚಿಂಗ್ ದುಪ್ಪಟ್ಟಾ. ಇದಕ್ಕೆ ಪರ್ಲ್ ಚೋಕರ್ ಮತ್ತು ಮ್ಯಾಚಿಂಗ್ ಇಯರಿಂಗ್ಸ್ ಹಾಕಿದ್ರು
ಸಲ್ವಾರ್ ಕುರ್ತಾ ಲುಕ್: ಮೆಹಂದಿ ಕಾರ್ಯಕ್ರಮದಲ್ಲಿ ಚಂದದ ಕುರ್ತಾ ಹಾಕಿದ್ರು ಕಂಗನಾ. ರಿಂಪಲ್ ಹಾಗೂ ಹರ್ಪ್ರೀತ್ ಅವರ ಸಲ್ವಾರ್ ಕುರ್ತಾ ಮೆರೂನ್ ಬಣ್ಣದಲ್ಲಿತ್ತು. ಒಂದು ಕೆಂಬಣ್ಣದ ಗುಲಾಬಿ ಮುಡಿಗಿಟ್ಟು 90ರ ಹಿರೋಯಿನ್ ತರ ಕಾಣ್ತಿದ್ರು ನಟಿ. ಇದಕ್ಕೆ ಅಮ್ಮನ ಜಮ್ಕಾ ಕೂಡಾ ಹಾಕಿದ್ರು.
ಸಾರಿ ಲುಕ್: ಬಧಾಯ್ ಫಂಕ್ಷನ್‌ಗೆ ಮಿಂಟ್ ಗ್ರೀನ್ ಸಿಲ್ಕ್ ಸೀರೆ ಉಟ್ಟಿದ್ದರು. ಇದಕ್ಕೆ ಸ್ಲೀವ್‌ಲೆಸ್ ಮ್ಯಾಚಿಂಗ್ ಬ್ಲೌಸ್ ಹಾಕುತ್ತಿದ್ದರು. ಚೋಕರ್ ನೆಕ್ಲೆಸ್ ಮತ್ತು ದೊಡ್ಡ ಇಯರಿಂಗ್ ಕೂಡಾ ಧರಿಸಿದ್ರು.
ನವರಾತ್ರಿ ಮೊದಲ ದಿನ ಪೊಟೇಟೋ ಟ್ಯೂನಿಕ್ ಸೆಟ್‌ನಲ್ಲಿ ಮಿಂಚಿದ್ರು. ರೆಡ್ ಮತ್ತು ಪಿಂಕ್ ಕಾಂಬಿನೇಷನ್‌ನ ಡ್ರೆಸ್‌ ಡಿಸೈನ್ ಮಾಡಿದ್ದು ಗೋಪಿ ವಾಯ್ದ್. ಸುಂದರವಾ ನೆಕ್‌ಲೈನ್ಸ್, ಥ್ರೆಡ್ ವರ್ಕ್ ಕೂಡಾ ಇತ್ತು.

Latest Videos

click me!