'ಧಾಕಡ್' ಹೀನಾಯ ಸೋಲಿನ ಬಳಿಕ ವೈಟ್ ಅಂಡ್ ವೈಟ್ ಲುಕ್‌ನಲ್ಲಿ ಕಾಣಿಸಿಕೊಂಡ ಕಂಗನಾ

First Published | Jun 21, 2022, 12:24 PM IST

ಧಾಕಡ್ ಸಿನಿಮಾ ಹೀನಾಯ ಸೋಲಿನ ಬಳಿಕ ಕಂಗನಾ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದಾರೆ. ಏರ್ಪೋರ್ಟ್‌ನಲ್ಲಿ ಕ್ಯಾಮರಾ ಕಣ್ಣೀಗೆ ಸೆರೆಯಾಗಿರುವ ಕಂಗನಾ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಧಾಕಡ್ ಹೀಯಾನ ಸೋಲಿನ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣ ಎಲ್ಲಾ ಕಡೆ ಬ್ಯುಸಿಯಾಗಿರುವ ಕಂಗನಾ ಇದೀಗ ತೇಜಸ್ ಸಿನಿಮಾಗಾಗಿ ಸಜ್ಜಾಗುತ್ತಿದ್ದಾರೆ. 

ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಕಂಗನಾ ಸಿನಿಮಾ ಜೊತೆಯೇ ತೆರೆಗೆ ಬಂದ ಕಾರ್ತಿಕ್ ಆರ್ಯನ್ ನಟನೆಯ ಭುಲ್ ಭುಲೈಯಾ-2 ಸಿನಿಮಾ ಗೆದ್ದು ಬೀಗಿದೆ. 

Tap to resize

ವಿಭಿನ್ನ ಲುಕ್ ಮತ್ತು ಟ್ರೈಲರ್ ಮೂಲಕ ಗಮನ ಸೆಳೆದಿದ್ದ ಧಾಕಡ್ ಸಿನಿಮಾ ಅಭಿಮಾನಿಗಳ ಗಮನ ಸೆಳೆಯಲು ಸೋತಿದೆ. ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೇ ಒಟಿಟಿಯಲ್ಲೂ ಧಾಕಡ್ ಸಿನಿಮಾ ಖರೀದಿಗೆ ಯಾರು ಮುಂದೆ ಬಂದಿಲ್ಲ.

ಸಿನಿಮಾ ಹೀನಾಯ ಸೋಲಿನ ಬಳಿಕ ಕಂಗನಾ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದಾರೆ. ಏರ್ಪೋರ್ಟ್‌ನಲ್ಲಿ ಕ್ಯಾಮರಾ ಕಣ್ಣೀಗೆ ಸೆರೆಯಾಗಿರುವ ಕಂಗನಾ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

ಕಂಗನಾ ಸಂಪೂರ್ಣವಾಗಿ ವೈಟ್ ಅಂಡ್ ವೈಟ್ ಡ್ರೆಸ್ ಧರಿಸಿ ಮಿಂಚಿದ್ದಾರೆ. ಕಂಗನಾ ಸಿಂಪಲ್ ಲುಕ್ ಅದ್ಭುತವಾಗಿ ಕಾಣಿಸುತ್ತಿದೆ.  ಕೈಯಲ್ಲಿ ದುಬಾರಿ ಬ್ಯಾಗ್  ಹಿಡಿದು ಕ್ಯಾಮರಾಗೆ ಕೈ ಬೀಸುತ್ತಾ ಏರ್ಪೋರ್ಟ್ ಒಳಗೆ ಹೋಗುತ್ತಿರುವ ಕಂಗನಾ ಫೋಟೋಗಳು ಎಲ್ಲಾ ಕಡೆ ವೈರಲ್ ಆಗಿದೆ. 
 

ಕಂಗನಾ ಸದ್ಯ ತೇಜಸ್ ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ. ಇನ್ನು ಟಿಕು ವೆಡ್ಸ್ ಶೇರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಜೊತೆಗೆ ಕಂಗನಾ ಲಾಕ್ ಅಪ್ ಶೋ ನಡೆಸಿಕೊಟ್ಟಿದ್ದರು. ಆ ಶೋಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.        
 

Latest Videos

click me!