ಜಾವೇದ್ ಅಕ್ತರ್ ಮೇಲೆ ಕಂಗನಾ ರಣಾವತ್ ಪ್ರತಿದೂರು ದಾಖಲಿಸಿದ್ದಾರೆ. ಇಬ್ಬರ ನಡುವೆ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ನಿರ್ಮಾಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಯಾರು ನಿಮ್ಮನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲವೋ ಅವರು ನಿಮ್ಮನ್ನು ಕೊನೆಗೊಣಿಸಲು ಸಾಧ್ಯವಿಲ್ಲ. ಶಿವಸೇನೆಯ ಒತ್ತಾಯಕ್ಕೆ ಮಣಿದು ಜಾವೇದ್ ಅಕ್ತರ್ ಸಲ್ಲಿಕೆ ಮಾಡಿದ ಪ್ರಕರಣದ ವಿಚಾರಣೆಗೆ ಹೋಗಿ ಬಂದೆ ಎಂದು ಕಂಗನಾ ತಿಳಿಸಿದ್ದಾರೆ.
ಕಂಗನಾ ಮತ್ತು ಜಾವೇದ್ ಕೋರ್ಟ್ ನಲ್ಲಿ ಮುಖಾಮುಖಿಯಾಗಿದ್ದರು. ಕಂಗನಾ ಸಿಆರ್‌ಪಿಎಫ್ ಭದ್ರತೆಯಲ್ಲಿ ಆಗಮಿಸಿದ್ದರು. ಕಳೆದ ಬಾರಿ ನ್ಯಾಯಾಲಯಕ್ಕೆ ಗೈರಾಗಿದ್ದ ಕಂಗನಾ ಇಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ಈ ಪ್ರಕರಣದ ವಿಚಾರಣೆಗೆಂದು ಚಿತ್ರಸಾಹಿತಿ ಜಾವೇದ್ ಅಖ್ತರ್ ಅವರು ಸಮಯಕ್ಕಿಂತ ಮುಂಚೆಯೇ ಕೋರ್ಟ್ ನಲ್ಲಿ ಹಾಜರಿ ಇದ್ದರು.
ಕಂಗನಾ ಸಹ ಕೌಂಟರ್ ದೂರು ನೀಡಿದ್ದಾರೆ. ಜಾವೇದ್ ರಿಂದ ಮಾನಹಾನಿಯಾಗಿದೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇಲ್ಲ ಎಂದು ಹೇಳಿಕೊಂಡು ತಿರುಗಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.
ಕಂಗನಾ ರಣಾವತ್ ಅವರು ಜಾವೇದ್ ಅಖ್ತರ್ ಅವರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ. ಪದೇ ಪದೇ ಜಾವೇದ್ ಅಖ್ತರ್ ಅವರು ಹೂಡಿರುವ ಮಾನಹಾನಿ ಪ್ರಕರಣದಲ್ಲಿ ಪ್ರತಿ ವಿಚಾರಣೆಗೂ ಹಾಜರಾಗುವಂತೆ ಹೇಳುತ್ತಿರುವುದನ್ನು ಪ್ರಶ್ನಿಸಿರುವ ಕಂಗನಾ ಪರ ವಕೀಲರು ಈ ಮೊಕದ್ದಮೆ ವರ್ಗಾವಣೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಈ ಪ್ರಕರಣದಲ್ಲಿ ಶಿವಸೇನೆ ಪಾತ್ರ ಇದೆಯೋ ಇಲ್ಲವೋ ಗೊತ್ತಿಲ್ಲ. ಇಬ್ಬರು ಬಾಲಿವುಡ್ ಸೆಲೆಬ್ರಿಟಿಗಳು ಪರಸ್ಪರ ಮಾನಹಾನಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಂಗನಾ ಅವರ ತಲೈವಿ ಚಿತ್ರವನ್ನು ನೋಡಿದ ರಜನೀಕಾಂತ್ ಮೆಚ್ಚುಗೆ ಸೂಚಿಸಿದ್ದರು.