ದೀಪಿಕಾ ಪಡುಕೋಣೆ: ಬಾಲಿವುಡ್‌ನ ಅದ್ಭುತ ಸುಂದರಿ, ಪ್ರತಿಭೆಗಳಲ್ಲಿ ಒಬ್ಬರು ನಟಿ ದೀಪಿಕಾ ಪಡುಕೋಣೆ. ತನ್ನನ್ನು ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಕಂಡಿದ್ದ ನಟಿ ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಲು ಬದ್ಧಳಾಗಿದ್ದರಿಂದ ಸಿನಿಮಾ ಕುರಿತು ಯೋಚಿಸಿರಲಿಲ್ಲ. ಆದರೂ 16 ನೇ ವಯಸ್ಸಿನಲ್ಲಿ ಆಕೆಯ ಗಮನ ಬದಲಾಯಿತು. ವರದಿಗಳ ಪ್ರಕಾರ ಆಕೆ ತನ್ನ ತಾಯಿಗೆ ಸಿನೆಮಾಕ್ಕೆ ಪ್ರವೇಶಿಸುವ ಬಗ್ಗೆ ಹೇಳಿದ್ದರು. ಆಕೆಯ ತಂದೆ ಬಯಸಿದ್ದರಿಂದ ಅವಳು ಬ್ಯಾಡ್ಮಿಂಟನ್ ಆಡುತ್ತಿರುವುದಾಗಿ ಒಪ್ಪಿಕೊಂಡಿದ್ದರು. ಬ್ಯಾಡ್ಮಿಂಟನ್ ತನ್ನ ಎರಡನೇ ಪ್ರೀತಿ ಎಂದೂ ಹೇಳುತ್ತಾರೆ ನಟಿ
ನೇಹಾ ಧುಪಿಯಾ: ವರದಿಗಳ ಪ್ರಕಾರ ನೇಹಾ ಧೂಪಿಯಾ ಅವರ ಪೋಷಕರು ಆಕೆ ಬಾಲಿವುಡ್ ಸೇರುವ ಬದಲು ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಸಂದರ್ಶನವೊಂದರಲ್ಲಿ ನಟಿ ತನ್ನ ವೃತ್ತಿಜೀವನದಲ್ಲಿ ಮೈಲಿಗಲ್ಲುಗಳನ್ನು ಸೃಷ್ಟಿಸಿದಾಗ ಮತ್ತು ಆಕೆಯ ಬೆಳವಣಿಗೆಯಿಂದ ತೃಪ್ತಿ ಹೊಂದಿದ್ದಾಗ ಆಕೆಯ ತಂದೆ ಅವಳ ಊರಿಗೆ ಮರಳಲು ಟಿಕೆಟ್ ಕಾಯ್ದಿರಿಸಿದ್ದರು. ನೀನು ಮೂರು ತಿಂಗಳಲ್ಲಿ ಹಿಂತಿರುಗುತ್ತೀ ಎಂದು ನಾನು ಭಾವಿಸುತ್ತೇನೆ. ನೀನು ಐಎಎಸ್ ಅಧಿಕಾರಿಯಾಗಬೇಕು ಎಂದಿದ್ದರು.
ಅಮೀರ್ ಖಾನ್: ಬಾಲಿವುಡ್‌ನ ಟಾಪ್ ನಟ ಅಮೀರ್ ಖಾನ್ ತನ್ನ ತಂದೆ ಮತ್ತು ಚಿಕ್ಕಪ್ಪನ ಉದ್ಯಮದೊಂದಿಗೆ ಸಂಬಂಧ ಹೊಂದಿದ್ದರೂ, ಚಲನಚಿತ್ರ ಲೋಕಕ್ಕೆ ಬರಲು ತನ್ನ ಹೆತ್ತವರ ಮನವೊಲಿಸಬೇಕಾಯಿತು. ವರದಿಯ ಪ್ರಕಾರ, ಅವನ ಹೆತ್ತವರು ಅವನು ಇಂಜಿನಿಯರಿಂಗ್ ಆಗಬೇಕಂದು ಬಯಸಿದ್ದರು. ಅವರು ಚಿತ್ರರಂಗಕ್ಕೆ ಸೇರುವುದನ್ನು ಪೋಷಕರು ವಿರೋಧಿಸಿದರು ಎಂದು ಅವರು ಬಹಿರಂಗಪಡಿಸಿದ್ದಾರೆ. ಸಿನಿಮಾ ಲೋಕದಲ್ಲಿ ಭದ್ರತೆ ಇಲ್ಲ ಅನಿಶ್ಚಿತತೆ ಇರುವುದರಿಂದ ಇದೆ ಎಂದು ಅವರು ಭಾವಿಸಿದರು ಎಂದಿದ್ದಾರೆ.
ಇರ್ಫಾನ್ ಖಾನ್: ಹಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಗಮನಾರ್ಹ ನಟನಾ ವೃತ್ತಿಜೀವನ ಹೊಂದಿದ್ದ ದಿವಂಗತ ನಟ ಇರ್ಫಾನ್ ಖಾನ್ ಕೂಡ ನಟನಾಗುವ ಬಯಕೆಯನ್ನು ಮೊದಲು ವ್ಯಕ್ತಪಡಿಸಿದಾಗ ಅವರ ಮನೆಯಿಂದ ಬೆಂಬಲವಿರಲಿಲ್ಲ. ಸಂದರ್ಶನವೊಂದರಲ್ಲಿ ಅವರು ತಮ್ಮ ಮನೆಯವರು ಬಾಲಿವುಡ್‌ಗೆ ಪ್ರವೇಶಿಸುವುದನ್ನು ಎಂದಿಗೂ ಬಯಸಲಿಲ್ಲ. ಬದಲಿಗೆ ಕುಟುಂಬ ವ್ಯವಹಾರಕ್ಕೆ ಸೇರುವಂತೆ ಕೇಳಿಕೊಂಡರು. ಅವರು ತಮ್ಮ ತಂದೆತಾಯಿಗೆ ಉದ್ಯಮವನ್ನು ಸೇರುವ ಬಗ್ಗೆ ಸುಳ್ಳು ಹೇಳಬೇಕಾಯಿತು. ಅವರು ಉದ್ಯಮ ಹಾಗೂ ಸಿನಿಮಾವನ್ನು ಕೀಳಾಗಿ ಕಾಣುತ್ತಿದ್ದರು ಎಂದು ಅವರು ಬಹಿರಂಗಪಡಿಸಿದ್ದಾರೆ.
ಕಂಗನಾ ರಣಾವತ್: ಕಂಗನಾ ರಣಾವತ್ ಇಂಡಸ್ಟ್ರಿಯಲ್ಲಿ ಅತ್ಯಂತ ಪ್ರತಿಭಾನ್ವಿತ ತಾರೆಗಳಲ್ಲಿ ಒಬ್ಬರು. ಆಕೆ ತನ್ನ ತಂದೆ ತಾನು ವಿಶ್ವದ ಅತ್ಯುತ್ತಮ ವೈದ್ಯೆಯಾಗಬೇಕೆಂದು ಬಯಸಿದ್ದರು ಎಂದು ಒಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ನಟಿ 15 ವರ್ಷದವಳಿದ್ದಾಗ, ಅವರು ತಂದೆಯೊಂದಿಗೆ ಜಗಳವಾಡಿದರು. ನಟಿಯ ಕನಸುಗಳನ್ನು ಬೆನ್ನಟ್ಟಿ ತನ್ನ ಮನೆಯನ್ನು ತೊರೆದರು
ಮಲ್ಲಿಕಾ ಶೆರಾವತ್: ಮಲ್ಲಿಕಾ ಶೆರಾವತ್ ಅವರು ಚಿತ್ರರಂಗಕ್ಕೆ ಪ್ರವೇಶಿಸಿದಾಗ ಅವರ ಕುಟುಂಬದೊಂದಿಗಿನ ಸಂಬಂಧ ಹದಗೆಟ್ಟಿತು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ ನಟಿ. ಆಕೆಯು ಮನೆ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತರುತ್ತಾಳೆಂದು ಆಕೆಯ ತಂದೆ ಹೇಳಿದ ನಂತರ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡರು.
ಪಂಕಜ್ ತ್ರಿಪಾಠಿ: ಅವರ ಹೆಸರು ವಿಧಾನ ನಟನೆಗೆ ಸಮಾನಾರ್ಥಕವಾಗಿದೆ. ಒಟಿಟಿ ಸ್ಟಾರ್ ಎಂದು ಕರೆಯಲ್ಪಡುತ್ತಾರೆ ಇವರು. ಆದರೂ ಅವರು 22 ಅಥವಾ 23 ವರ್ಷದವರಾಗಿದ್ದಾಗ ನಟನೆಯಲ್ಲಿ ಆಸಕ್ತಿ ಹೊಂದಿದ್ದರು ಎಂದು ಅವರು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ನಟ ತನ್ನ ತಂದೆ ತಾನು ವೈದ್ಯನಾಗಬೇಕೆಂದು ಬಯಸಿದ್ದನ್ನು ಹಂಚಿಕೊಂಡಿದ್ದಾರೆ. ನಾನು ಹುಟ್ಟಿದ ಸ್ಥಳ - ಉತ್ತರ ಬಿಹಾರದ ಗೋಪಾಲಗಂಜ್‌ನ ಹಳ್ಳಿ - ಜನರಿಗೆ ಕೇವಲ ಎರಡು ವೃತ್ತಿಗಳು ಗೊತ್ತು: ಎಂಜಿನಿಯರ್ ಅಥವಾ ವೈದ್ಯರು ಎಂದಿದ್ದಾರೆ ನಟ