ಕಮಲ್ ಹಾಸನ್ ಅವರ ಆಸ್ತಿ, ಐಷಾರಾಮಿ ಜೀವನಶೈಲಿ ಮತ್ತು ನಿವ್ವಳ ಮೌಲ್ಯ ಎಷ್ಟಿದೆ

Published : Nov 07, 2022, 05:42 PM IST

ಸೂಪರ್‌ಸ್ಟಾರ್ ಕಮಲ್ ಹಾಸನ್ (Kamal Hassan) ಅವರು ಇಂದು ನವೆಂಬರ್ 7 ರಂದು ತಮ್ಮ 68 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.  ಕಮಲ್‌ ಹಾಸನ್‌ ಅವರು  ಭಾರತೀಯ ಚಲನಚಿತ್ರೋದ್ಯಮದ ಅತ್ಯಂತ ಯಶಸ್ವಿ ತಾರೆಗಳಲ್ಲಿ ಒಬ್ಬರು, ಮತ್ತು ಅವರ ನಿವ್ವಳ ಮೌಲ್ಯವು ಅದನ್ನು ಸಾಬೀತುಪಡಿಸುತ್ತಿದೆ. ಕಮಲ್ ಹಾಸನ್ ಹುಟ್ಟುಹಬ್ಬದ ಸಮಯದಲ್ಲಿ ಅವರ ಲಂಡನ್‌ನಲ್ಲಿರುವ ಆಸ್ತಿಗಳು, ಐಷಾರಾಮಿ ಜೀವನಶೈಲಿ ಮತ್ತು ನೆಟ್‌ವರ್ತ್‌ ವಿವರಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. 

PREV
18
ಕಮಲ್ ಹಾಸನ್ ಅವರ ಆಸ್ತಿ, ಐಷಾರಾಮಿ ಜೀವನಶೈಲಿ ಮತ್ತು ನಿವ್ವಳ ಮೌಲ್ಯ ಎಷ್ಟಿದೆ

ಕಮಲ್ ಹಾಸನ್ ಅವರ ಅತ್ಯುನ್ನತ ನಿವ್ವಳ ಮೌಲ್ಯವು ಪ್ರತಿ ವರ್ಷವೂ ಏರಿಕೆಯನ್ನು ದಾಖಲಿಸುತ್ತಿದೆ, ವಿಶೇಷವಾಗಿ ಅವರ 2022 ರ ಯಶಸ್ವಿ ಚಿತ್ರ 'ವಿಕ್ರಮ್' ಬಿಡುಗಡೆಯಾದಾಗಿನಿಂದ ಇನ್ನೂ ಹೆಚ್ಚಾಗಿದೆ.

28

ನಾಲ್ಕು ವರ್ಷಗಳ ವಿರಾಮದ ನಂತರ ಅವರು 'ವಿಕ್ರಮ್' ಮೂಲಕ ಮತ್ತೆ ತೆರೆಗೆ ಬಂದರು. ಅದಕ್ಕೂ ಮೊದಲು, ಅವರು ಕೊನೆಯ ಬಾರಿಗೆ ಅವರ 2018 ರ ಚಿತ್ರ 'ವಿಶ್ವರೂಪ 2' ನಲ್ಲಿ ಕಾಣಿಸಿಕೊಂಡರು. 

38

ಚಲನಚಿತ್ರಗಳು ಅವರ ನೆಟ್‌ವರ್ಥ್‌ನ ದೊಡ್ಡ ಭಾಗವಾಗಿದೆ. ಆದರೆ ಅವರು ರಾಜಕೀಯ  ಕ್ಷೇತ್ರವನ್ನು ಪ್ರವೇಶಿಸಿದಾಗ ಅದು ಹೆಚ್ಚಾಯಿತು.  ಕಮಲ್ ಹಾಸನ್ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ. 
 

48

ಯುನೈಟೆಡ್ ಕಿಂಗ್‌ಡಂನ ಲಂಡನ್‌ನಲ್ಲಿರುವ ಆಸ್ತಿಯನ್ನು ಇತ್ತೀಚೆಗೆ ನವೀಕರಿಸಿಲಾಗಿದೆ. ಅಲ್ಲಿ ನಟ  17 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ಸೇರಿದಂತೆ 131 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆಂದು ವರದಿಯಾಗಿದೆ.

58
Kamal hassan

ಕಮಲ್ ಹಾಸನ್ ಅವರು ಚೆನ್ನೈನಲ್ಲಿ ಪಾಶ್ ರೆಸಿಡೆನ್ಶಿಯಲ್ ಸೊಸೈಟಿಗಳಲ್ಲಿ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಈ ಎರಡು ಫ್ಲಾಟ್‌ಗಳ ಅಂದಾಜು ಬೆಲೆ 19.5 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಇವುಗಳ ಹೊರತಾಗಿ, ಹಾಸನ್ ಅವರು ಚೆನ್ನೈನಲ್ಲಿ ಹೊಂದಿರುವ ವಾಣಿಜ್ಯ ಮತ್ತು ವಸತಿ ಆಸ್ತಿಗಳ ಬೆಲೆ ಸುಮಾರು 92.5 ಕೋಟಿ ರೂಪಾಯಿ ಎಂದು ವರದಿಯಾಗಿದೆ.


 

68

ಕಮಲ್ ಹಾಸನ್ ಅವರು ಚೆನ್ನೈನಲ್ಲಿ ಹೊಂದಿರುವ ಬಹು ಆಸ್ತಿಗಳ ಹೊರತಾಗಿ,  ಲಂಡನ್‌ನಲ್ಲಿ ಅವರ ಹೆಸರಿನಲ್ಲಿ ಆಸ್ತಿಯನ್ನು ನೋಂದಾಯಿಸಿದ್ದಾರೆ. ವರದಿಗಳ ಪ್ರಕಾರ ಅವರ ಲಂಡನ್ ಮನೆ ಸುಮಾರು 2.5 ಕೋಟಿ ರೂ.

 

78

ಕಮಲ್ ಹಾಸನ್ ಅವರು ಸರ್ಕಾರಕ್ಕೆ ಮಾಡಿದ ಅಧಿಕೃತ ಘೋಷಣೆಯ ಪ್ರಕಾರ, ಅವರ ಎಲ್ಲಾ ಆಸ್ತಿಯನ್ನು ಒಳಗೊಂಡಂತೆ ಅವರ ನಿವ್ವಳ ಮೌಲ್ಯವು ಸರಿಸುಮಾರು 177 ಕೋಟಿ ಎಂದು ಹೇಳಲಾಗುತ್ತದೆ.

88

ಈ ನಡುವೆ ಅವರ 68 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, 'ವಿಕ್ರಮ್' ನಿರ್ಮಾಪಕರು ಚಿತ್ರದ ಯಶಸ್ಸಿನ 100 ದಿನಗಳ ಸಂಭ್ರಮಾಚರಣೆಯನ್ನು ಆಚರಿಸಲು ನಿರ್ಧರಿಸಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾದ 'ವಿಕ್ರಮ್' 2022 ರ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ನಟರಾದ ವಿಜಯ್ ಸೇತುಪತಿ ಮತ್ತು ಫಹದ್ ಫಾಜಿಲ್ ಸಹ ನಟಿಸಿದ್ದಾರೆ ಮತ್ತು ಸೂರ್ಯ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

Read more Photos on
click me!

Recommended Stories