ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಮತ್ತೆ ಸಿನಿಮಾಗಳಲ್ಲಿ ಸಕ್ರೀಯರಾಗಿದ್ದಾರೆ. ಇತ್ತೀಚಿಗಷ್ಟೆ ಐಶ್ವರ್ಯಾ ರೈ ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿತ್ತು.
ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ಐಶ್ವರ್ಯಾ ಮತ್ತೆ ಸೌತ್ ಸಿನಿಮಾರಂಗದಲ್ಲಿ ಕಾಣಿಸಿಕೊಂಡರು. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಐಶ್ವರ್ಯಾ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಪ್ರಮೋಷನ್ ಅಂತ ಬ್ಯುಸಿ ಇದ್ದ ಐಶ್ವರ್ಯಾ ಸಿನಿಮಾ ರಿಲೀಸ್ ಬಳಿಕ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಸೌತ್ ಸಿನಿ ಸ್ಟಾರ್ ಗಳ ಜೊತೆ ಐಶ್ವರ್ಯಾ ರೈ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಭಾರತದ ಖ್ಯಾತ ನಟರಾದ ರಜನಿಕಾಂತ್, ಖುಷ್ಬೂ, ತ್ರಿಷಾ ಸೇರಿದಂತೆ ಅನೇಕರು ಹಾಜರಿದ್ದರು.
ಅಂದಹಾಗೆ ಐಶ್ವರ್ಯಾ ಹಾಜರಾಗಿದ್ದು ಪೊನ್ನಿಯಿನ್ ಸೆಲ್ವನ್ ಸಕ್ಸಸ್ ಪಾರ್ಟಿಯಲ್ಲಿ. ಹೌದು ಸಿನಿಮಾ ಗೆದ್ದ ಖುಷಿಯಲ್ಲಿ ಸಿನಿಮಾತಂಡ ಇತ್ತೀಚಿಗಷ್ಟೆ ಪಾರ್ಟಿ ಆಯೋಜಿಸಿತ್ತು. ಚೆನ್ನೈನಲ್ಲಿ ನಡೆದ ಪಾರ್ಟಿಯಲ್ಲಿ ಸಿನಿಮಾ ತಂಡ ಸೇರಿದಂತೆ ಬೇರೆ ಬೇರೆ ಸ್ಟಾರ್ ಕೂಡ ಹಾಜರಿದ್ದರು.
ಬಾಲಿವುಡ್ ನಟಿ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಕೂಡ ಪಾರ್ಟಿಯಲ್ಲಿ ಹಾಜರಾಗಿದ್ದರು. ಐಶ್ವರ್ಯಾ ರೈ ಪಾರ್ಟಿಯಲ್ಲಿ ಎಲ್ಲಾ ಸೌತ್ ಸ್ಟಾರ್ ಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮಾಜಿ ವಿಶ್ವ ಸುಂದರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಂದಹಾಗೆ ಪೊನ್ನಿಯಿನ್ ಸೆಲ್ವನ್ ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಮೊದಲ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಅಭಿಮಾನಿಗಳ 2ನೇ ಭಾಗಕ್ಕಾಗಿ ಕಾಯುತ್ತಿದ್ದಾರೆ. ಸಿನಿಮಾತಂಡ ಕೂಡ ಚಿತ್ರಕ್ಕಾಗಿ ಉತ್ಸುಕರಾಗಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ. ಈ ಸಿನಿಮಾದಲ್ಲಿ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ತಮಿಳು ಸ್ಟಾರ್ ಚಿಯಾನ್ ವಿಕ್ರಮ್, ಕಾರ್ತಿ, ತ್ರಿಷಾ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಸದ್ಯ ಸಿನಿಮಾತಂಡ 2ನೇ ಭಾಗದ ತಯಾರಿಯಲ್ಲಿದೆ.