ರಾಮ್‌ ಚರಣ್‌ ಬರ್ತಡೇ ಪಾರ್ಟಿಯಲ್ಲಿ ಮಿಂಚಿದ ಕಾಜೋಲ್‌ ಅಗರ್ವಾಲ್‌

First Published | Mar 30, 2023, 5:08 PM IST

ದಕ್ಷಿಣದ  ಸೂಪರ್ ಸ್ಟಾರ್ ರಾಮ್ ಚರಣ್  (Ram charan ತೇಜ ಮಾರ್ಚ್ 27 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಅವರು ಗ್ರ್ಯಾಂಡ್ ಪಾರ್ಟಿಯನ್ನು ನೀಡಿದರು, ಇದರಲ್ಲಿ ಕಾಜಲ್ ಅಗರ್ವಾಲ್ ಮತ್ತು ನಾಗಾರ್ಜುನ ಕುಟುಂಬವನ್ನು ಸೇರಿ ಅನೇಕ ತಾರೆಯರು ಆಗಮಿಸಿದರು. 

ಕಾಜೋಲ್‌ ಮತ್ತು ರಾಮ್‌ ಚರಣ್‌ ಅವರು ಜೊತೆಯಾಗಿ ನಟಿಸಿದ ಮಗಧೀರ ಸಿನಿಮಾ ಸೂಪರ್‌ ಹಿಟ್‌ ಎಂದು ಪರಿಗಣಿಸಲಾಗಿದೆ. ಪಾರ್ಟಿಯಲ್ಲಿ, ಕಾಜಲ್ ಅಗರ್ವಾಲ್ ಪಿಂಕ್ ಕಲರ್ ಫ್ರಾಕ್ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.  ಅವರ ಪತಿ ಗೌತಮ್ ಕಿಚ್ಲು ಜೊತೆ ಪೋಸ್‌ ನೀಡಿದ್ದು ಹೀಗೆ

ರಾಮ್ ಚರಣ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಸೌತ್ ಸ್ಟಾರ್ ನಾಗಾರ್ಜುನ ತಮ್ಮ ಫ್ಯಾಮಿಲಿ ಜೊತೆ ಆಗಮಿಸಿದ್ದರು. ನಾಗಾರ್ಜುನ ಅವರ ಇಬ್ಬರು ಮಕ್ಕಳಾದ ನಾಗ ಚೈತನ್ಯ ಮತ್ತು ಅಖಿಲ್ ಅಕ್ಕಿನೇನಿ ಜೊತೆಗಿದ್ದರು. ಪತ್ನಿ ಅಮಲಾ ಕೂಡ ಕಾಣಿಸಿಕೊಂಡಿದ್ದಾರೆ.

Tap to resize

ಸೌತ್‌ನ ನಟ ವಿಜಯ್ ದೇವರಕೊಂಡ ಕೂಡ ರಾಮ್ ಚರಣ್ ತೇಜಾ ಅವರ ಪಾರ್ಟಿಗೆ ಆಗಮಿಸಿದರು. ಅದೇ ಸಮಯದಲ್ಲಿ, RRR ನಿರ್ದೇಶಕ ಎಸ್ಎಸ್ ರಾಜಮೌಳಿ ಹೀಗೆ ಕಾಣಿಸಿಕೊಂಡರು.

ತೆಲುಗು ನಟ ಹಾಗೂ ನಿರ್ಮಾಪಕ  ಡ್ಯಾಶಿಂಗ್‌  ರಾಣಾ ದಗ್ಗುಬಾಟಿ ಅವರು ರಾಮ್‌ ಚರಣ್‌ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಕ್ಯಾಶುವಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಆರ್ ಆರ್‌ ಆರ್‌ ಸಿನಿಮಾದ ನಾಟು-ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಪಡೆದ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಕೂಡ ರಾಮಚರಣ್ ಪಾರ್ಟಿಗೆ ಆಗಮಿಸಿದ್ದರು.  

ಸೌತ್‌ನ ಹ್ಯಾಂಡ್‌ಸಮ್‌  ನಟ ವಿಜಯ್ ದೇವರಕೊಂಡ  ಫುಲ್‌ ಬಿಳಿಯ ಔಟ್‌ಫಿಟ್‌ನಲ್ಲಿ  ರಾಮ್ ಚರಣ್ ತೇಜಾ ಅವರ ಪಾರ್ಟಿಗೆ ಆಗಮಿಸಿದರು.

Ram Charan Upasana

ಪಾರ್ಟಿಯಲ್ಲಿ ರಾಮಚರಣ್ ತೇಜಾ ಕಪ್ಪು ಡ್ರೆಸ್‌ನಲ್ಲಿ ಕಾಣಿಸಿಕೊಂಡರೆ, ಅವರ ಪತ್ನಿ ಉಪಾಸನಾ ಕಾಮಿನೇನಿ ನೀಲಿ ಬಣ್ಣದ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದರು.

Latest Videos

click me!