ಆದ್ರೆ ನಿಧಿ ಅಗರ್ವಾಲ್ ಕೂಡ ಅದೇ ಪದ ಬಳಸಿ, ನಾನು ಆ ತರಹದ ಬ್ಯಾಚ್ ಅಲ್ಲ ಅಂತ ಹೇಳಿದ್ದರಿಂದ, ಕಾಜಲ್‌ರನ್ನ ಉದ್ದೇಶಿಸಿಯೇ ಈ ಕಾಮೆಂಟ್ ಮಾಡಿದ್ದಾರೆ, ಕಾಜಲ್ ಬಗ್ಗೆ ವ್ಯಂಗ್ಯ ಮಾಡಿದ್ದಾರೆ ಅಂತ ಭಾವಿಸಿದ ಅಭಿಮಾನಿಗಳು ನಿಧಿ ಅಗರ್ವಾಲ್ ಮೇಲೆ ಕೋಪಗೊಂಡಿದ್ದಾರೆ. ಈ ವಿಷಯವನ್ನ ನಿರೂಪಕ ನಿಖಿಲ್, ನಿಧಿ ಅವರ ಗಮನಕ್ಕೆ ತಂದರು. ಇದಕ್ಕೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ತಾವು ಹೇಳಿದ್ದರ ಉದ್ದೇಶ ಏನು ಅಂತ ವಿವರಿಸಿದ್ದಾರೆ.