ಎಲ್ಲರಿಗೂ ಅಡಿಕ್ಟ್‌ ಆಗೋ ಹಾಗೆ ಮಾಡಿದ‌ ರೊಮ್ಯಾಂಟಿಕ್ ವೆಬ್‌ ಸಿರೀಸ್‌ ಈಗ ಯುಟ್ಯೂಬ್‌ನಲ್ಲಿ ಲಭ್ಯ!

Published : Dec 28, 2025, 01:24 PM IST

ಈಗಾಗಲೇ ಎಲ್ಲ ಭಾಷೆಯಲ್ಲಿಯೂ ವೆಬ್‌ ಸಿರೀಸ್‌ಗಳು ಪ್ರಸಾರ ಆಗುತ್ತಲಿವೆ. ನೆಟ್‌ಫ್ಲಿಕ್ಸ್‌, ಅಮೆಜಾನ್‌ನಂತಹ ಆನ್‌ನೈನ್‌ ವೇದಿಕೆಗಳು ಎಲ್ಲ ಸಿನಿಮಾ, ವೆಬ್‌ ಸಿರೀಸ್‌ಗಳನ್ನು ಖರೀದಿ ಮಾಡೋದಿಲ್ಲ. ಈಗ ಹೊಸ ವೆಬ್‌ ಸಿರೀಸ್‌ವೊಂದು ಎಲ್ಲರನ್ನು ಅಡಿಕ್ಟ್‌ ಆಗುವಂತೆ ಮಾಡಿದೆ. ಹಾಗಾದರೆ ಯಾವುದು?  

PREV
15
ಕಂಟೆಂಟ್‌ ಮೇಲೆ ನಂಬಿಕೆಯಿದೆ

ಯಾರು ವೇದಿಕೆ ಕೊಡಲಿ, ಬಿಡಲಿ, ನಮಗೇನಂತೆ ಎಂದು ಕಂಟೆಂಟ್‌ ಮೇಲೆ ನಂಬಿಕೆಯಿಟ್ಟ ತಂಡವೊಂದು ತೆಲುಗಿನಲ್ಲಿ ಹೊಸದಾಗಿ Just Married ಎಂಬ ವೆಬ್‌ ಸಿರೀಸ್‌ ರೆಡಿ ಮಾಡಿದೆ. ಬಹಳ ಕುತೂಹಲದಿಂದ ಇರುವ ಸಿರೀಸ್‌ ಇದಾಗಿದೆ.

25
ಈ ಸಿರೀಸ್ ಕಥೆ ಏನು?

ಜಸ್ಟ್‌ ಮ್ಯಾರೀಡ್‌ ಸಿರೀಸ್‌ನಲ್ಲಿ ಕುಟುಂಬದ ಒತ್ತಡಕ್ಕೆ ಮಣಿದು, ಒಂದು ಹುಡುಗ, ಹುಡುಗಿ ಮದುವೆಯಾಗುತ್ತಾರೆ. ಇವರಿಬ್ಬರು ಪರಸ್ಪರ ಅಪರಿಚಿತರು. ಮದುವೆಯ ನಂತರ ಇವರು ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ? ಸ್ನೇಹ ಹೇಗೆ ಶುರುವಾಗುವುದು? ಪ್ರೀತಿ ಹುಟ್ಟಲಿದೆಯಾ ಎಂಬ ಪ್ರಶ್ನೆ ಮೂಡುವುದು.

35
ಪ್ರೀತಿ ಹೇಗೆ ಅರಳಿತು?

ಮದುವೆಯ ನಂತರ ಈ ದಂಪತಿಗೆ ಅನೇಕ ಅಚ್ಚರಿಯ ತಿರುವುಗಳು ಕಾಯುತ್ತವೆ. ನಗು, ಜಗಳಗಳು ಮತ್ತು ತಪ್ಪುಗ್ರಹಿಕೆಗಳು... ಇವೆಲ್ಲದರ ನಡುವೆ, ಅವರ ನಡುವೆ ಪ್ರೀತಿ ಹೇಗೆ ಅರಳಿತು? ಎನ್ನುವುದು "ಜಸ್ಟ್ ಮ್ಯಾರೀಡ್" ವೆಬ್ ಸರಣಿಯ ಕಥೆ ಆಗಿದೆ.

45
12 ಎಪಿಸೋಡ್‌ ರಿಲೀಸ್‌

ಜಸ್ಟ್‌ ಮ್ಯಾರೀಡ್ ಸಿರೀಸ್‌ ರಿಲೀಸ್‌ ಆಗಿ ಒಂದು ಗಂಟೆಯಲ್ಲಿ 6-7 ಲಕ್ಷ ವೀಕ್ಷಣೆ ಕಾಣುತ್ತಿದೆ. ಅಂದಹಾಗೆ 12 ಎಪಿಸೋಡ್‌ ರಿಲೀಸ್‌ ಆಗಿದ್ದು, ಪ್ರತಿ ಎಪಿಸೋಡ್‌ 3 ಮಿಲಿಯನ್‌ಗಿಂತೂ ಹೆಚ್ಚು ವೀಕ್ಷಣೆ ಕಂಡಿದೆ.

55
ಯುಟ್ಯೂಬ್‌ನಲ್ಲಿ ಲಭ್ಯ

ಶೀತಲ್‌ ಗೌತಮನ್‌, ರಿಷಿ ನಾರಾಯಣ್‌ ನಟನೆಯ ‘ಜಸ್ಟ್‌ ಮ್ಯಾರೀಡ್’‌ ಸಿರೀಸ್‌ ನಿಜಕ್ಕೂ ವೀಕ್ಷಕರ ಗಮನಸೆಳೆದಿದೆ. ಮುಂದಿನ ಎಪಿಸೋಡ್‌ ಯಾವಾಗ ಪ್ರಸಾರ ಆಗಲಿದೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಅಂದಹಾಗೆ Sheetal Gauthaman ಯುಟ್ಯೂಬ್‌ನಲ್ಲಿ ಈ ಸಿರೀಸ್‌ ಲಭ್ಯ ಎಂದು ಹೇಳಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories