ಜಾಹ್ನವಿ ಕಪೂರ್-ಸಾರಾ ಅಲಿ ಖಾನ್ ಹೇಗಿದ್ರು ನೋಡಿ ಈ ಬಾಲಿವುಡ್‌ ಸ್ಟಾರ್‌ಕಿಡ್ಸ್‌!

First Published | Jul 4, 2023, 5:32 PM IST

ಸಾರಾ ಅಲಿ ಖಾನ್ ಮತ್ತು ಸುಹಾನಾ ಖಾನ್ ಸೇರಿದಂತೆ ಅನೇಕ ಸ್ಟಾರ್ ಕಿಡ್‌ಗಳ ನೋಟದಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದೆ. ಅವರು ಮೊದಲು ಇದ್ದ ಫೋಟೋ ನೋಡಿದರೆ ನಿಜವಾಗಲೂ ಈಗ ಅವರನ್ನು ಗುರುತಿಸುವುದು ಕಷ್ಟ. ಹೇಗಿದ್ದವರು ಈಗ ಹೇಗಾಗಿದ್ದಾರೆ ನೋಡಿ.

ಜಾನ್ವಿ ಕಪೂರ್:
ಜಾನ್ವಿ ಕಪೂರ್ ಲುಕ್ ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅವರ ಹಿಂದಿನ ಫೋಟೋಗಳನ್ನು ನೋಡಿದರೆ, ಅವರನ್ನು ಗುರುತಿಸುವುದು ಕಷ್ಟ. ಧಡಕ್ ಚಿತ್ರದ ಮೂಲಕ ಜಾನ್ವಿ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಸಾರಾ ಅಲಿ ಖಾನ್‌:
ಒಂದು ಕಾಲದಲ್ಲಿ ಸಾರಾ ಅಲಿ ಖಾನ್ ಅವರ ತೂಕ 96 ಕೆಜಿಗಿಂತ ಹೆಚ್ಚಿತ್ತು. ಸಿನಿಮಾ ಪ್ರವೇಶಿಸುವ ಮೊದಲು ಅವರು ಸಾಕಷ್ಟು ತೂಕ ಹೆಚ್ಚಿಸಿಕೊಂಡಿದ್ದರು. ಹಿಂದಿನ ಫೋಟೋಗಳಲ್ಲಿ ಅವರನ್ನು ಗುರುತಿಸುವುದು ಕಷ್ಟ. ಸಾರಾ ಅವರು ಕೇದಾರನಾಥ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು

Tap to resize

ಸುಹಾನಾ ಖಾನ್:
ಸುಹಾನಾ ಖಾನ್ ಲುಕ್ ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮೊದಲು ಸಿಂಪಲ್ ಆಗಿ ಕಾಣುತ್ತಿದ್ದ ಸುಹಾನಾ ಈಗ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ದಿ ಆರ್ಚೀಸ್ ಚಿತ್ರದ ಮೂಲಕ ಸುಹಾನಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಖುಷಿ ಕಪೂರ್:
ನಟಿ ಶ್ರೀದೇವಿ ಕಿರಿಯ ಮಗಳು ಖುಷಿ ಕಪೂರ್ ಲುಕ್‌ನಲ್ಲಿ ಸಹ ಸಾಕಷ್ಟು ಬದಲಾವಣೆಯಾಗಿದೆ. ಹಿಂದಿನ ಫೋಟೋಗಳಲ್ಲಿ ಅವರನ್ನು ಗುರುತಿಸುವುದು ಕಷ್ಟ, ಆದರೆ ಈಗ ಅವಳು ತುಂಬಾ ಹಾಟ್‌ ಆಗಿದ್ದಾರೆ. ದಿ ಆರ್ಚೀಸ್ ಚಿತ್ರದ ಮೂಲಕ ಖುಷಿ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಅನನ್ಯಾ ಪಾಂಡೆ:
ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಅನನ್ಯಾ ಪಾಂಡೆ  ಲುಕ್‌ನಲ್ಲಿಯೂ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಈಗ ಅನನ್ಯಾ ತುಂಬಾ ಮಾದಕವಾಗಿ ಕಾಣುತ್ತಿದ್ದಾರೆ.

ನೈಸಾ ದೇವಗನ್:
ಸಿಂಪಲ್ ಆಗಿ, ಸರಳವಾಗಿ ಕಾಣುತ್ತಿದ್ದ ನೈಸಾ ದೇವಗನ್ ಈಗ ತುಂಬಾ ಹಾಟ್ ಮತ್ತು ಗ್ಲಾಮರಸ್ ಆಗಿ ಅವರ ಸಂಪೂರ್ಣ ರೂಪ ಬದಲಾಗಿದೆ. ನ್ಯಾಸಾ ಇನ್ನೂ ತನ್ನ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ ಮತ್ತು ಪ್ರಸ್ತುತ ಚಲನಚಿತ್ರಗಳಿಗೆ ಪ್ರವೇಶಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ.

ಆಲಿಯಾ ಭಟ್:
ಆಲಿಯಾ ಭಟ್ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಆ ಸಮಯದಲ್ಲಿ ಅವರ ನೋಟವು ವಿಭಿನ್ನವಾಗಿತ್ತು. ಆದರೆ ಈಗ ಅವರು ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ.

ಪಾಲಕ್ ತಿವಾರಿ:
ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಪಾಲಕ್ ತಿವಾರಿ ಕಿ ಈಗ ಮೊದಲಿಗಿಂತ ಹೆಚ್ಚು ಬೋಲ್ಡ್‌ ಮತ್ತು ಹಾಟ್‌ ಆಗಿ ಬದಲಾಗಿದ್ದಾರೆ.

ಶಾನಯಾ ಕಪೂರ್:
ಅನಿಲ್‌ ಕಪೂರ್‌ ಸಹೋದರನ ಮಗಳು ಶನಯಾ ಕಪೂರ್ ಕೂಡ ತನ್ನ ಲುಕ್‌ನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ಮೊದಲಿಗಿಂತ ಹೆಚ್ಚು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವರದಿಗಳ ಪ್ರಕಾ  ಶನಯಾ ಬೇಡದಕ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಲಿದ್ದಾರೆ.

Latest Videos

click me!