ಮಂಡಿ ಮೇಲೆ ತುಂಡು ಲಂಗ ಹಾಕಿ ಬಾರ್ಬಿ ಡಾಲ್‌ನಂತೆ ಕಂಗೊಳಿಸಿದ ಜಾಹ್ನವಿ!

First Published | Jun 4, 2024, 10:18 PM IST

ಬಾಲಿವುಡ್ ನಟಿ, ಬ್ಯೂಟಿ ಕ್ವೀನ್ ಜಾಹ್ನವಿ ಕಪೂರ್ ತುಂಡುಗೆಯಲ್ಲಿ ಕಂಗೊಳಿಸಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

ಮಿಸ್ಟರ್ ಅಂಡ್ ಮಿಸಸ್ ಮಾಹಿ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಟಿ ಜಾಹ್ನವಿ ಕಪೂರ್ ಇದೀಗ ತುಂಡುಗೆ ತೊಟ್ಟು ಮಿಂಚಿದ್ದಾರೆ. ಬಾರ್ಬಿ ಡಾಲ್‌ನಂತೆ ಕಂಗೊಳಿಸಿದ್ದಾರೆ.

ಜಾಹ್ನವಿ ಕಪೂರ್ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೈಕಿ ಇದೇ ಮೊದಲ ಬಾರಿಗೆ ಬಾಯ್‌ಫ್ರೆಂಡ್ ಶಿಖರ್ ಪಹರಿಯಾ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

Tap to resize

ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಾಹ್ನವಿ, ವೀಕೆಂಡ್ ವೈಬ್ಸ್ ಎಂದು ಫೋಟೋ ಹಂಚಿಕೊಂಡಿದ್ದಾರೆ.

ಕೆಂಪು ಹಾಗೂ ಬಿಳಿ ಬಣ್ಣದ ತುಂಡುಗೆಯಲ್ಲಿ ಜಾಹ್ನವಿ ಮತ್ತಷ್ಟು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಪ್ರಕೃತಿಯ ಸೌಂದರ್ಯವನ್ನೂ ನಾಚಸುವಂತೆ ಜಾಹ್ನವಿ ಕಂಗೊಳಿಸಿದ್ದಾರೆ.

ಇದೀಗ ಎಲ್ಲರ ಚಿತ್ತ ಜಾಹ್ನವಿ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಮೇಲೆ ಬಿದ್ದಿದೆ. ಜಾಹ್ನವಿ ಹಾಗೂ ಶಿಖರ್ ಪಹಾರಿಯಾ ಜೊತೆಯಾಗಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ.

ಮಾಧ್ಯಮಗಳ ಕಣ್ಣಿಗೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಆದರೆ ಎಲ್ಲೂ ಕೂಡ ಜಾಹ್ನವಿ ತಮ್ಮ ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಶಿಖರ್ ಕೈಹಿಡಿದು ನಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಜಾಹ್ನವಿ ಕಪೂರ್ ಬಾಯ್‌ಫ್ರೆಂಡ್ ಶಿಖರ್ ಪಹರಿಯಾಗೆ ಫುಡ್ ತಿನಿಸುತ್ತಿರುವ ವಿಡಿಯೋ ಭಾರಿ ವೈರಲ್ ಆಗಿತ್ತು. ನೆಟ್ಟಿಗರು ಮದುವೆಯಾಗಿ ಬಿಡಿ ಎಂದು ಪ್ರತಿಕ್ರಿಯಿಸಿದ್ದರು.

Image: Instagram

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಜಾಹ್ನವಿ ಖುದ್ದು ಫೋಟೋ ಹಂಚಿಕೊಂಡು ಕುತೂಹಲ ತಣಿಸಿದ್ದಾರೆ. ಇತ್ತ ಸೋಮವಾರದ ಅಂತ್ಯಕ್ಕೆ ಜಾಹ್ನವಿಯ ಮಿಸ್ಟರ್ ಅಂಡ್ ಮಿಸಸ್ ಮಾಹಿ ಚಿತ್ರ 19 ಕೋಟಿ ರೂಪಾಯಿ ಗಳಿಕೆ ಕಂಡಿದೆ.

Latest Videos

click me!