ತಾಯಿ ನಿಧನವಾಗಿ 3 ವರ್ಷಗಳ ನಂತರ ಹೊಸ ಕಾರು ಖರೀಸಿದ ಜಾನ್ವಿ!

First Published | Dec 26, 2020, 3:44 PM IST

ಬಾಲಿವುಡ್‌ ದಿವಾ ದಿವಗಂತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ ನಿಧಾನವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆಯೂರುತ್ತಿದ್ದಾರೆ. ಧಡಕ್‌ ಸಿನಿಮಾದ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಜಾನ್ವಿ, ಫೇಮಸ್‌ ಸ್ಟಾರ್‌ ಕಿಡ್‌. ಕೆಲವು ದಿನಗಳ ಹಿಂದೆ ಈ ನಟಿ ರೇಂಜ್‌ರೋವರ್‌ ಕಾರು ಖರೀಸಿದ್ದಾರೆ. ಈ ಮೂಲಕ ಜಾನ್ವಿ  ತಾಯಿಯನ್ನು ಕಳೆದುಕೊಂಡ ಮೂರು ವರ್ಷಗಳ ನಂತರ ಮತ್ತೆ ಹೊಸ ಕಾರೊಂದನ್ನು ಪರ್ಚೇಸ್‌ ಮಾಡಿದ್ದಾರೆ. 

ಸಾಕಷ್ಟು ಫ್ಯಾನ್‌ ಫಾಲೋವರ್ಸ್‌ ಗಳಿಸಿರುವ ಧಡಕ್‌ ಗರ್ಲ್‌ ಜಾನ್ವಿ ನಿಧಾನವಾಗಿ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಛಾಪುಮೂಡಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಹೊಸ ಲಕ್ಷ್ಯುರಿಯಸ್‌ ಕಾರೊಂದು ಜಾನ್ವಿ ಗ್ಯಾರೇಜ್‌ ಸೇರಿದೆ.
Tap to resize

ರೇಂಜ್‌ರೋವರ್‌ ಸ್ಪೋರ್ಟ್‌ HSE ಮಾಡೆಲ್‌ನ ಗ್ರೇ ಬಣ್ಣದ ಕಾರನ್ನು ಪರ್ಚೇಸ್‌ ಮಾಡಿದ್ದಾರೆ ನಟಿ.
ರೇಂಜ್‌ರೋವರ್‌ ಸ್ಪೋರ್ಟ್‌ನ 10 ಮಾಡೆಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಜಾಹ್ನವಿ ಬಳಿ ಈಗಾಗಲೇ ಹಲವು ಕಾರುಗಳಿವೆ.
5 ಜನರ ಸಾಮರ್ಥ್ಯ ಹೊಂದಿರುವ ಈ ಕಾರು 2993 ಸಿಸಿ ಪವರ್‌ಫುಲ್‌ ಎಂಜಿನ್ ಹೊಂದಿದೆ. ಇದರ ಮೈಲೇಜ್ 9.26 ರಿಂದ 14.1 ಕಿಮೀ ಲೀ. ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವರ್ಶನ್‌ಗಳಲ್ಲೂ ಲಭ್ಯವಿದೆ.
ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಕಾರಿನ ಡೀಸೆಲ್ ಆವೃತ್ತಿಯು 1.08 - 1.72 ಕೋಟಿಯಿಂದ ಪ್ರಾರಂಭವಾದರೆ, ಪೆಟ್ರೋಲ್ ಕಾರಿನ ಬೆಲೆ 88.24 ಲಕ್ಷದಿಂದ 1.01 ಕೋಟಿ.
ಈ ಹಿಂದೆ ಅವರುಮರ್ಸಿಡಿಸ್ ಮೇಬ್ಯಾಕ್ ಕಾರನ್ನು ಸಹ ಹೊಂದಿದ್ದಾರೆ. ಈ ಕಾರು ಅವರಿಗೆ ಅಚ್ಚುಮೆಚ್ಚು. ಏಕೆಂದರೆ ಜಾನ್ವಿ ಮತ್ತು ಶ್ರೀದೇವಿಯ ಇಬ್ಬರೂಒಂದೇ ನೋಂದಣಿ ಸಂಖ್ಯೆಯನ್ನು ಹೊಂದಿದ್ದಾರೆ. ಮಗಳ ಕಾರಿನ ನಂಬರ್‌ MH 02 FG 7666. ಅದೇ ಸಮಯದಲ್ಲಿ ಶ್ರೀದೇವಿಯವರ ವಾಹನ ಸಂಖ್ಯೆ MH 02 DZ 7666 ಆಗಿತ್ತು.
ಈ ಬಾರಿ ಜಾನ್ವಿಖರೀದಿಸಿದ ಕಾರು ನಂಬರ್ 8811.

Latest Videos

click me!