Janhvi, Khushi ಸಹೋದರಿಯರ ಹಾಟ್‌ ಲುಕ್‌ ಫೋಟೋ ವೈರಲ್

First Published | Mar 20, 2022, 6:35 PM IST

ಸೂಪರ್‌ ಸ್ಟಾರ್‌ ಶ್ರೀದೇವಿ (Sridevi) ಅವರ ಹಿರಿಯ ಪುತ್ರಿ ಜಾಹ್ನವಿ ಕಪೂರ್ (Janhvi Kapoor) ಬಾಲಿವುಡ್‌ನಲ್ಲಿ ತಮ್ಮ ಗುರುತನ್ನು ಸ್ಥಾಪಿಸಿಕೊಂಡಿದ್ದಾರೆ. ಇದೀಗ ಅವರ ಸಹೋದರಿ ಖುಷಿ ಕಪೂರ್ (Khushi Kapoor) ಸರದಿ. ಅವರು ಕೂಡ ನಟನೆಯಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಚಿತ್ರರಂಗಕ್ಕೆ ಕಾಲಿಡುವ ಮೊದಲೇ, ಖುಷಿ ಕಪೂರ್ ಜಾನ್ವಿಯಂತೇ ಫ್ಯಾಶನ್ ಸೆನ್ಸ್‌ಗೆ ಸಾಕಷ್ಟು ಹೆಸರುವಾಸಿಯಾಗಿದ್ದಾರೆ.  

ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ನಡುವೆ ಉತ್ತಮ ಬಾಂಡಿಗ್‌ ಇದೆ. ಇತ್ತೀಚೆಗೆ ಜಾಹ್ನವಿ ಇನ್ಸ್ಟಾಗ್ರಾಮ್‌ಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು  ಇದರಲ್ಲಿ ಇಬ್ಬರೂ ಸಹೋದರಿಯರು ಪರಸ್ಪರ ಪ್ರೀತಿಯನ್ನು ಸುರಿಸುತ್ತಿದ್ದಾರೆ. 

ಜಾನ್ವಿ ಮತ್ತು ಖುಷಿ ಕಪೂರ್ ಪರಸ್ಪರ ತುಂಬಾ ಹತ್ತಿರವಾಗಿದ್ದಾರೆ. ಜಾನ್ವಿ ಖುಷಿಯನ್ನು ಮಗುವಿನಂತೆ ಪ್ರೀತಿಸುತ್ತಾರೆ. ಪ್ರತಿದಿನ ಆಕೆ  ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ತನ್ನ ತಂಗಿಯ ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.

Tap to resize

Janhvi Kapoor and Khushi Kapoor looking hot in bodycon dress

ಇತ್ತೀಚೆಗೆ, ಜಾನ್ವಿ ಮತ್ತು ಖುಷಿ ಕಪೂರ್ ಇಬ್ಬರು ತುಂಬಾ ಸುಂದರವಾದ ಡ್ರೆಸ್‌ನಲ್ಲಿ ಪೋಸ್‌ ನೀಡಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಟೋದಲ್ಲಿ ಖುಷಿ ಕೂಡ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ತಂಗಿಯರಿಬ್ಬರ ಪ್ರೀತಿ ನೋಡಿ ಜನ ಕಮೆಂಟ್ ಮಾಡಿದ್ದು ಕೂಡ ಕಂಡು ಬಂತು.

ಜಾನ್ವಿ ಕಪೂರ್ ಇತ್ತೀಚೆಗೆ ಗ್ಲಾಸಿನಿಂದ ಡಿಸೈನ್‌ ಮಾಡಿರುವ ಡೀಪ್ ನೆಕ್‌ಲೈನ್‌ನ ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚುತ್ತಿದ್ದರು. ಈ ಬಾಡಿಕಾನ್ ಡ್ರೆಸ್‌ನಲ್ಲಿ ಅವರ ಫಿಗರ್‌ ಮತ್ಸ್ಯಕನ್ಯೆಯಂತೆ ಕಾಣುತ್ತದೆ.

ಜಾನ್ವಿ ಕಪೂರ್ ಅವರ ಈ ಬೋಲ್ಡ್‌ ಆಂಡ್‌ ಸೆಕ್ಸಿ ಲುಕ್‌ಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. ನಟಿ ತನ್ನ ಲುಕ್‌ ಅನ್ನು ಪೂರ್ಣಗೊಳಿಸಲು, ತುಂಬಾ ಕಡಿಮೆ ಆಭರಣಗಳನ್ನು ಧರಿಸಿದ್ದರು. ಇದರೊಂದಿಗೆ ನ್ಯೂಡ್‌ ಕಲರ್‌ ಲಿಪ್‌ಸ್ಟಿಕ್‌, ಸ್ಮೋಕಿ ಐಯಸ್‌, ಮಸ್ಕರಾ ಮತ್ತು ಪಿಂಕ್‌ ಚಿಕ್ಸ್‌ನೊಂದಿಗೆ ಕಾಣಿಸಿಕೊಂಡರು. 

ಕೂದಲನ್ನು ಮಧ್ಯಭಾಗದಲ್ಲಿ ಪಾರ್ಟ್‌ ಮಾಡಿ ಕರ್ಲ್‌ ಮಾಡಿ ಕಟ್ಟದೆ ಹಾಗೇ ಬಿಟ್ಟಿದ್ದಾರೆ ಮತ್ತು ಜಾನ್ವಿ ಈ ಉಡುಪಿನೊಂದಿಗೆ ಮ್ಯಾಚಿಂಗ್ ಸ್ಟ್ರಾಪಿ ಹೈ ಹೀಲ್ಸ್ ಧರಿಸಿದ್ದರು. ಅವರ  ಫೋಟೋಗಳಿಗೆ ಅಭಿಮಾನಿಗಳು ಸಖತ್‌ ಲೈಕ್‌ ಮಾಡಿದ್ದಾರೆ.

ಇನ್ನೂ ಜಾನ್ವಿ ಅವರ ಕೆಲಸದ  ಬಗ್ಗೆ  ಹೇಳುವುದಾದರೆ, ಅವರು ಶೀಘ್ರದಲ್ಲೇ ಕರಣ್ ಜೋಹರ್ ಅವರ 'ದೋಸ್ತಾನಾ 2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು 'ಗುಡ್ ಲಕ್ ಜೆರ್ರಿ' ಮತ್ತು 'ಮಿಸ್ಟರ್ ಅಂಡ್ ಮಿಸಸ್ ಮಹಿ' ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!