ಯೋಗಿ ಆದಿತ್ಯನಾಥ್ ಪಾದ ಮುಟ್ಟಿ ನಮಸ್ಕರಿಸಿದ ಸೂಪರ್‌ಸ್ಟಾರ್ ರಜನಿಕಾಂತ್!

Published : Aug 19, 2023, 08:12 PM ISTUpdated : Aug 19, 2023, 10:08 PM IST

ಜೈಲರ್ ಚಿತ್ರದ ಯಶಸ್ಸಿನಲ್ಲಿರುವ ಸೂಪರ್ ಸ್ಟಾರ್ ರಜನಿಕಾಂತ್ ದಿಢೀರ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾಗಿದ್ದಾರೆ. ಖುದ್ದು ಸಿಎಂ ಯೋಗಿ ತಮ್ಮ ನಿವಾಸದಿಂದ ಹೊರಬಂದು ರಜನಿಕಾಂತ್‌ಗೆ ಸ್ವಾಗತ ಕೋರಿದ್ದಾರೆ.   

PREV
16
ಯೋಗಿ ಆದಿತ್ಯನಾಥ್ ಪಾದ ಮುಟ್ಟಿ ನಮಸ್ಕರಿಸಿದ ಸೂಪರ್‌ಸ್ಟಾರ್ ರಜನಿಕಾಂತ್!

ಜೈಲರ್ ಚಿತ್ರ ಸೂಪರ್ ಸಕ್ಸಸ್ ಕಂಡಿದೆ. 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಜೈಲರ್ ಯಶಸ್ಸಿನ ಬೆನ್ನಲ್ಲೇ ರಜನಿಕಾಂತ್ ಹಿಮಾಲಯ ಪ್ರವಾಸ ಮಾಡಿ ಮರಳಿದ್ದರು. ಇದೀಗ ರಜನಿಕಾಂತ್ ದಿಢೀರ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾಗಿದ್ದಾರೆ.
 

26

ಇನೋವಾ ಕಾರಿನ ಮೂಲಕ ಆಗಮಿಸಿದ ರಜನಿಕಾಂತ್ ಸ್ವಾಗತಿಸಲು ಯೋಗಿ ಆದಿತ್ಯನಾಥ್ ತಮ್ಮ ನಿವಾಸದಿಂದ ಹೊರಬಂದಿದ್ದಾರೆ. ಯೋಗಿ ಆದಿತ್ಯನಾಥ್ ರಜನಿಕಾಂತ್‌ಗೆ ಹೂಗುಚ್ಚ ನೀಡಿ ಸ್ವಾಗತ ನೀಡಿದರು.

36

ಯೋಗಿ ಆದಿತ್ಯನಾಥ್ ಪಾದ ಮುಟ್ಟಿ ನಮಸ್ಕರಿಸಿದ ರಜನಿಕಾಂತ್‌ರನ್ನು ಯೋಗಿ ಆದಿತ್ಯನಾಥ್  ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಬಳಿಕ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.

46

ರಜನಿಕಾಂತ್‌ಗೆ 2 ಉಡುಗೊರೆಯನ್ನು ಯೋಗಿ ನೀಡಿದ್ದಾರೆ. ಈ ಉಡುಗೊರೆಗಳ ಮಹತ್ವನ್ನು ಯೋಗಿ ಆದಿತ್ಯನಾಥ್ ಖುದ್ದು ರಜನಿಕಾಂತ್‌ಗೆ ವಿವರಿಸಿದ್ದಾರೆ. ಯೋಗಿ ಆದಿತ್ಯನಾಥ್ ಜೊತೆ ರಜನಿಕಾಂತ್ ಹಾಗೂ ರಜನಿ ಪತ್ನಿ ಫೋಟೋ ತೆಗೆಸಿಕೊಂಡಿದ್ದಾರೆ. 
 

56

ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಉತ್ತರ ಪ್ರದೇಶ ಸಂಪುಟ ಸಚಿವರಿಗೆ ಜೈಲರ್ ಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಸಿಎಂ ಜೊತೆ ಚಿತ್ರ ವೀಕ್ಷಿಸುವುದಾಗಿ ರಜನಿಕಾಂತ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
 

66

ಯೋಗಿ ಆದಿತ್ಯನಾಥ್ ಭೇಟಿಗೂ ಮೊದಲು ರಜನಿಕಾಂತ್ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಭೇಟಿಯಾಗಿದ್ದಾರೆ. ರಾಜ್ಯಪಾಲೆ ಭೇಟಿಯಾದ ರಜನಿಕಾಂತ್ ಮಹತ್ವದ ಮಾತುಕತೆ ನಡೆಸಿದ್ದಾರೆ.

Read more Photos on
click me!

Recommended Stories