ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ಶ್ರೀವಲ್ಲಿ: ಮಹಾರಾಣಿ ಯೇಸುಬಾಯಿಯಾದ ರಶ್ಮಿಕಾ ಮಂದಣ್ಣ!

Published : Jan 22, 2025, 10:10 AM ISTUpdated : Jan 22, 2025, 10:11 AM IST

ಬಾಲಿವುಡ್‌ ಸಿನಿಮಾ ‘ಛಾವ’ ದಲ್ಲಿನ ರಶ್ಮಿಕಾ ಮಂದಣ್ಣ ಪಾತ್ರದ ಲುಕ್‌ ಬಿಡುಗಡೆಯಾಗಿದೆ. ಇದರಲ್ಲಿ ಅವರು ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

PREV
16
ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ಶ್ರೀವಲ್ಲಿ: ಮಹಾರಾಣಿ ಯೇಸುಬಾಯಿಯಾದ ರಶ್ಮಿಕಾ ಮಂದಣ್ಣ!

ಕಿರಿಕ್ ಬೆಡಗಿ, ಕನ್ನಡತಿ ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನ ಅನ್ನೋ ಹಾಗಾಗಿದೆ. ಸಾಲು, ಸಾಲು ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್‌ ಕೊಟ್ಟಿದ್ದಾರೆ.

26

ಬಾಲಿವುಡ್‌ ಸಿನಿಮಾ ‘ಛಾವ’ ದಲ್ಲಿನ ರಶ್ಮಿಕಾ ಮಂದಣ್ಣ ಪಾತ್ರದ ಲುಕ್‌ ಬಿಡುಗಡೆಯಾಗಿದೆ. ಇದರಲ್ಲಿ ಅವರು ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪ್ರತೀ ಯಶಸ್ವೀ ಸಾಮ್ರಾಟನ ಹಿಂದೆಯೂ ಶಕ್ತಿಶಾಲಿ ರಾಣಿ ಇರುತ್ತಾಳೆ’ ಎಂಬ ಟ್ಯಾಗ್‌ಲೈನ್‌ ಈ ಪಾತ್ರದ ಹಿರಿಮೆಯನ್ನು ವಿವರಿಸುವಂತಿದೆ.

36

ಮರಾಠ ಸಾಮ್ರಾಜ್ಯದ ಮಹಾನ್‌ ಸಾಮ್ರಾಟ ಛತ್ರಪತಿ ಸಾಂಬಾಜಿ ಮಹಾರಾಜ್‌ ಕುರಿತಾದ ಕಾದಂಬರಿ ಆಧರಿತ ಚಿತ್ರವಿದು. ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ನಾಯಕ. ಲಕ್ಷ್ಮಣ್‌ ಉಟೇಕರ್‌ ನಿರ್ದೇಶನದ ಸಿನಿಮಾವಿದು.

46

ಸಾಂಭಾಜಿ ಮಹಾರಾಜ್ ಪತ್ನಿ ಯಶುಬಾಯ್ ಮಹಾರಾಣಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ನಟಿಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದೇ ಫೆಬ್ರವರಿ 14ರಂದು ಛಾವ ಬಿಡುಗಡೆ ಆಗುತ್ತಿದೆ.

56

ಇನ್ನೂ ಅಲ್ಲು ಅರ್ಜುನ್ ಜೊತೆ ನಟಿಸಿದ ‘ಪುಷ್ಪ 2’ ಚಿತ್ರ ರಶ್ಮಿಕಾ ಮಂದಣ್ಣಗೆ ಬಿಗ್ ಸಕ್ಸಸ್ ಕೊಟ್ಟಿದೆ. 1800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಬಾಕ್ಸಾಫಿಸ್‌ನಲ್ಲಿ ಮುನ್ನುಗ್ಗುತ್ತಿದೆ.

66

ಚಿತ್ರವನ್ನ ಲಕ್ಷ್ಮಣ್ ಉತ್ತೇಕರ್ ನಿರ್ದೇಶನ ಮಾಡಿದ್ದಾರೆ. ದಿನೇಶ್ ವಿಜಯನ್ ಬಂಡವಾಳ ಹಾಕಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಕೊಟ್ಟಿದ್ದು, ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಯೇ ಅಭಿನಯಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories