ಸ್ಟ್ರೆಚಿಂಗ್ ಅಥವಾ ಏರಿಯಲ್ ಯೋಗ ಅಥವಾ ಜಿಮ್ ಮಾಡುತ್ತಿರುವ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ ಜಾಕ್ವೆಲಿನ್.
ಫಿಟ್ನೆಸ್ ಫ್ರೀಕ್ ಆಗಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್ ತಮ್ಮ ದೇಹವನ್ನು ಯಾವಾಗಲೂಫೀಟ್ ಆಗಿಡಲು ಶ್ರಮಿಸುತ್ತಾರೆ.
ಬಿಟಿಎಸ್ ಫೋಟೋ ಮತ್ತು ಯೋಗ ಸೆಷನ್ ಕ್ಲಿಪಿಂಗ್ಸ್ ಅಥವಾ ಮನೆ-ಕೆಲಸದಲ್ಲಿ ತೊಡಗಿಸಿಕೊಂಡಿರುವ ಪೋಸ್ಟ್‌ಗಳ ಮೂಲಕ ಜಾಕ್ವೆಲಿನ್ ತಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಯಾವಾಗಲೂ ಮನೋರಂಜಿಸುತ್ತಾರೆ.ಅವುಗಳಲ್ಲಿ ಕೆಲವು ಇಲ್ಲಿವೆ.
ಇತ್ತಿಚಿಗೆ ಪೋಸ್ಟ್ ಮಾಡಿರುವ ಫೋಟೋಗಳಲ್ಲಿ ಕಿಕ್ ನಟಿ, ನೀಲಿ-ಪಿಂಕ್ -ಗ್ರೇ ಬಣ್ಣದ ಹಾಲ್ಟರ್ ನೆಕ್ ಸ್ಪೋರ್ಟ್ಸ್ ಬ್ರಾ ಜೊತೆ ಗ್ರೇ ಕಲರ್‌ನ ಯೋಗ ಪ್ಯಾಂಟ್‌ನೊಂದಿಗೆ ಫೋಸ್ ನೀಡಿದ್ದಾರೆ. ಜೊತೆಗೆ ಕೂದಲನ್ನು ಬಿಗಿಯಾದ ಪೋನಿಟೇಲ್‌ನಲ್ಲಿ ಬಂಧಿಸಿದ್ದಾರೆ.
ಒಂದು ಫೋಟೋಗೆ ಯೋಗ ಗರ್ಲ್ ಫಾರ್‌ಎವರ್ ಮತ್ತು ಇನ್ನೊಂದು ಫೋಟೋಗೆ ಬ್ರಿಥ್ ಇನ್ ಬ್ರಿಥ್ ಔಟ್ ಎಂದು ಕ್ಯಾಪ್ಷನ್ ನೀಡಿದ್ದಾರೆ ನಟಿ ಜಾಕಿ.
ಟಿಪ್ಸ್ ಮತ್ತು ದಿನಚರಿಯನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ತನ್ನ ಫಿಟ್‌ನೆಸ್ ಚಾನೆಲ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಪ್ರಾರಂಭಿಸಿದ್ದಾರೆ ಇವರು.
ಕೆಲವು ದಿನಗಳ ಬಚ್ಚನ್ ಪಾಂಡೆ ಶೂಟಿಂಗ್ ಮುಗಿಸಿರುವ ಜಾಕ್ವೆಲಿನ್, ಪ್ರಸ್ತುತ ಅಕ್ಷಯ್ ಕುಮಾರ್ ಮತ್ತು ನುಶ್ರಾತ್ ಭರೂಚ್ಚಾ ಅವರೊಂದಿಗೆ ರಾಮ್ ಸೇತು ಚಿತ್ರೀಕರಣ ಪ್ರಾರಂಭಿಸಿದ್ದಾರೆ.