ಮುಂಬೈ ಪೊಲೀಸರು ತಮ್ಮ ಟ್ವೀಟ್‌ಗಳಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಮಳೆಗಾಲಕ್ಕಿಂತ ಮುಂಚಿತವಾಗಿ ಪೊಲೀಸರಿಗೆ ರೈನ್‌ಕೋಟ್ ದಾನ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.
ಈ ಕಠಿಣ COVID-19 ಸಮಯದಲ್ಲಿ ನಿರ್ಗತಿಕರಿಗೆ ಸಹಾಯ ಮಾಡಲು ನಟಿ ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ.
ಈಗ ನಟಿ ಮತ್ತು ಅವರ YOLO ಫೌಂಡೇಶನ್ ಪೊಲೀಸ್ ಸಿಬ್ಬಂದಿಗೆ ಸಹ ಸಹಾಯ ಮಾಡುತ್ತಿದೆ.
ಇತ್ತೀಚೆಗೆ ಲಾಕ್‌ಡೌನ್ ಸಂದರ್ಭ ಹಸಿದವರಿಗೆ ಆಹಾರ ನೀಡುವ ಕೆಲಸ ಮಾಡಿದ್ದರು ನಟಿ
ಜೂನ್ ಸಮೀಪಿಸುತ್ತಿದ್ದಂತೆ, ಮುಂಬೈ ಮಳೆಗಾಲಕ್ಕೆ ಸಜ್ಜಾಗಿದೆ - ನಾವು ಕೂಡ ಎಂದು ಟ್ವೀಟಿಸಿದ್ದಾರೆ ಮುಂಬೈ ಪೊಲೀಸರು.
ನಿಮ್ಮ ಅಮೂಲ್ಯ ಕೊಡುಗೆಗಾಗಿ ಧನ್ಯವಾದಗಳು ಜಾಕ್ವೆಲಿನ್ ಫರ್ನಾಂಡಿಸ್ ಎಂದಿದ್ದಾರೆ ಪೊಲೀಸರು.
ಇದು ನಮ್ಮ ಸಿಬ್ಬಂದಿಯನ್ನು ಸಾಂಕ್ರಾಮಿಕ ಮತ್ತು ಮಳೆಗಾಲದಲ್ಲಿ ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ ಎಂದಿದ್ದಾರೆ.