ಜಾಕಿ ಶ್ರಾಫ್‌ ಮಗಳು ಕೃಷ್ಣಾ ಸ್ಟನ್ನಿಂಗ್‌ ಫೋಟೋ ಮತ್ತೆ ವೈರಲ್‌

First Published | Jul 27, 2020, 5:49 PM IST

ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.  ದಿನ ಕೃಷ್ಣಾ ತನ್ನ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ. ಕೆಲವೊಮ್ಮೆ ಬಾಯ್‌ಫ್ರೆಂಡ್‌ ಜೊತೆಯ ಪೋಟೋ, ಕೆಲವೊಮ್ಮೆ ಅವಳ ಸಿಂಗಲ್‌ ಪೋಟೋವಾದರೂ ಪೋಸ್ಟ್‌ ಮಾಡಿ ಫ್ಯಾನ್ಸ್ ಅನ್ನು ರಂಜಿಸುತ್ತಾಳೆ ಕೃಷ್ಣಾ. ಇತ್ತೀಚೆಗೆ, ಮತ್ತೆ ಕೆಲವು ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದು, ಒದ್ದೆಯಾದ ಕೂದಲು  ದೊಡ್ಡ ಕಿವಿಯೋಲೆಗಳನ್ನು ಧರಿಸಿರುವ ಕೃಷ್ಣಾ ಶ್ರಾಫ್ ಲುಕ್‌ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ  ಹೊಗಳಿದ್ದಾರೆ. 

ಕೃಷ್ಣಾಳ ಈ ಲುಕ್‌ಗೆ ಬೋಲ್ಡ್‌ ಆಗಿದ್ದಾರೆ ಅಭಿಮಾನಿಗಳು.
undefined
ಕೆಲವರು ಸ್ಟನಿಂಗ್‌ ಲುಕ್‌ ಬೆರಗುಗೊಳಿಸುತ್ತದೆ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಗಾರ್ಜಿಯಸ್ ಎಂದು ಹೊಗಳಿದ್ದಾರೆ.
undefined
Tap to resize

ಕೃಷ್ಣಾ ಶ್ರಾಫ್ ಆಗಾಗ್ಗೆ ತನ್ನ ಗೆಳೆಯ ಎಬೊನ್ ಹ್ಯಾಮ್ಸ್ ಜೊತೆಯ ರೋಮ್ಯಾಂಟಿಕ್‌ ಫೋಟೋಗಳನ್ನು ಪೋಸ್ಟ್‌ ಮಾಡುತ್ತಿರುತ್ತಾಳೆ. ಕೆಲವು ತಿಂಗಳಹಿಂದೆ, ಲವ್ ಬರ್ಡ್ಸ್ ಒಟ್ಟಿಗೆ ವರ್ಕೌಟ್‌ ಮಾಡುತ್ತಿರುವುದು ಕಂಡುಬಂದಿತ್ತು.
undefined
ಸಂದರ್ಶನವೊಂದರಲ್ಲಿ, ಕೃಷ್ಣಾ ಶ್ರಾಫ್ ಗೆಳೆಯ ಎಬೊನ್ ಹೇಮ್ಸ್ ಜೊತೆ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದಳು. 'ಅವನು (ಎಬೊನ್) ತುಂಬಾ ಅಟ್ರ್ಯಾಕ್ಟೀವ್‌. ಅವನು ನನ್ನಂತೆಯೇ ಇದ್ದಾನೆ. ಸಮಯದೊಂದಿಗೆ ನಮ್ಮ ಸಂಬಂಧವು ಬಲಗೊಂಡಿದೆ. ಏಕೆಂದರೆ ಈಗ ನಾವು ಪರಸ್ಪರ ಚೆನ್ನಾಗಿ ತಿಳಿದುಕೊಳ್ಳುತ್ತಿದ್ದೇ,' ಎಂದು ಕೃಷ್ಣಾ ಹೇಳಿದ್ದಳು.
undefined
'ನಮ್ಮ ಹವ್ಯಾಸಗಳು ಕೂಡ ಬಹಳ ಹೋಲುತ್ತವೆ. ನಾವು ಪರಸ್ಪರ ಸಾಕಷ್ಟುಕಂಫರ್ಟಬಲ್‌ ಆಗಿರುತ್ತೇವೆ. ನಾವು ಆಗಾಗ್ಗೆ ಪರಸ್ಪರ ಭೇಟಿಯಾಗಲು ಇದು ಕಾರಣ,' ಎಂದು ರಿಲೆಷನ್‌ಶಿಪ್‌ ಬಗ್ಗೆ ಮತ್ತಷ್ಟು ಹೇಳಿದ ಜಾಕಿ ಪುತ್ರಿ.
undefined
ಅದೇ ಸಮಯದಲ್ಲಿ, ಎಬೊನ್ ಗೆಳತಿ ಕೃಷ್ಣಾನನ್ನು ತನ್ನ ತಾಯಿ ಎಂದು ಬಣ್ಣಿಸಿದ್ದಾನೆ. 'ಕೃಷ್ಣಾ ತನ್ನ ತಾಯಿಯಂತೆ. ನಮ್ಮ ವ್ಯಕ್ತಿತ್ವವು ತುಂಬಾ ಒಂದೇ. ಅವಳು ನನ್ನ ತಾಯಿಯಂತೆ ಕಾಣುತ್ತಾಳೆ ಮತ್ತು ನಾನು ಕೂಡ ನನ್ನ ತಂದೆಯಂತೆ ಇರಬೇಕೆಂದು ಬಯಸುತ್ತೇನೆ. ಅದಕ್ಕಾಗಿಯೇ ಕೃಷ್ಣಾ ಮತ್ತು ನನ್ನ ಸಂಬಂಧ ತುಂಬಾ ಸುಂದರವಾಗಿರುತ್ತದೆ' ಎಂಬುದು ಎಬೊನ್ ಓಪಿನಿಯನ್‌.
undefined
ಕೃಷ್ಣಾ ಶ್ರಾಫ್ ಮತ್ತು ಎಬೊನ್ ಹ್ಯಾಮ್ಸ್ ಮುಂಬೈನ ರೆಸ್ಟೋರೆಂಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದರು. ಮೊದಲಿಗೆ ಇಬ್ಬರು ಸ್ನೇಹಿತರಾದರು ಮತ್ತು ನಂತರ ಕಪಲ್‌ಗಳು ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು.
undefined
ನಾವು ಸೊಬೊ ಹೌಸ್‌ನಲ್ಲಿ ಭೇಟಿಯಾಗಿದ್ದು. ನಾನು ಅವನ ಸ್ನೇಹಿತನನ್ನು ಭೇಟಿಯಾಗಲು ಹೋಗಿದ್ದೆ. ಆ ಸ್ನೇಹಿತ ಕೂಡ ಅಲ್ಲಿಗೆ ಇಬಾನನ್ನು ಕರೆದನು ಮತ್ತು ನಾವಿಬ್ಬರೂ ತುಂಬಾ ಮಾತನಾಡಿದೆವು ಎಂದು ಎಂದು ಕೃಷ್ಣಾ ಸಂದರ್ಶನವೊಂದರಲ್ಲಿ ತಿಳಿಸಿದ್ದರು
undefined
ಅವರ ತಾಯಿ ಆಯೆಷಾ ಕೂಡ ಇಬಾನ್ ಅವರನ್ನು ಭೇಟಿಯಾಗಿದ್ದಾರೆ.
undefined
ತನ್ನ ಸಹೋದರ ಟೈಗರ್ ಶ್ರಾಫ್‌ಗಿಂತ ಭಿನ್ನವಾಗಿ, ಕೃಷ್ಣಾ ಕ್ಯಾಮೆರಾದ ಹಿಂದೆ ವೃತ್ತಿಜೀವನವನ್ನು ಆರಿಸಿಕೊಂಡಿದ್ದಾಳೆ.
undefined
ಎಂಟರ್‌ಟೈನ್ಮೆಂಟ್‌ ಸೈಟ್‌ಗೆ ನೀಡಿದ ಸಂದರ್ಶನದಲ್ಲಿ 'ಮೊದಲಿಗೆ ನಾನು ಬಾಲಿವುಡ್‌ಗೆ ಬರಬೇಕೆಂದು ಯೋಚಿಸಿದ್ದೆ. ಆದರೆ ನಂತರ ಅದಕ್ಕಿಂತ ಹೆಚ್ಚಿನದನ್ನು ಮಾಡಬಹುದೆಂದು ಭಾವಿಸಿದೆ,' ಎಂದು ಕೃಷ್ಣಾ ತನ್ನ ವೃತ್ತಿಜೀವನದ ಬಗ್ಗೆ ಹೇಳಿದ್ದರು,
undefined

Latest Videos

click me!