ಕೊನೆಯ ಆಯ್ಕೆಯೊಂದಿದೆ, ಪೊಲೀಸರಿಗೆ ಶರಣಾಗುವ ಮುನ್ನ ಸುಳಿವು ನೀಡಿದ್ದ ಹಾಸ್ಯನಟ

Published : Feb 10, 2026, 06:23 PM IST

ಕೊನೆಯ ಆಯ್ಕೆಯೊಂದಿದೆ, ಪೊಲೀಸರಿಗೆ ಶರಣಾಗುವ ಮುನ್ನ ಸುಳಿವು ನೀಡಿದ್ದ ಹಾಸ್ಯನಟ, ಎಲ್ಲರನ್ನು ನಗಿಸುವ ರಾಜ್‌ಪಾಲ್ ಇದೀಗ ಕಣ್ಣೀರಿನಲ್ಲೇ ದಿನ ದೂಡುವಂತಾಗಿದೆ. ಸಾಲದ ಸುಳಿಗೆ ಸಿಲುಕಿದ ನಟ ತಿಹಾರ್ ಜೈಲಿಗೆ ಶರಣಾಗುವುದು ಬಿಟ್ಟರೆ ಬೇರೆ ದಾರಿ ಇರ್ಲಿಲ್ಲ ಎಂದಿದ್ದಾರೆ.

PREV
16
ಸಾಲದ ಸುಳಿಯಲ್ಲಿ ಹಾಸ್ಯ ನಟ

ಸಾಲದ ಸುಳಿಗೆ ಸಿಲುಕಿರುವ ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್ ಸಂಕಷ್ಟ ಹೆಚ್ಚಾಗಿದೆ. ಆಸ್ತಿಗಳನ್ನು ಬ್ಯಾಂಕ್ ಜಪ್ತಿ ಮಾಡಿದರೆ, ಇತ್ತ ಸಿನಿಮಾಗಳೂ ಇಲ್ಲದೆ ಕಂಗಾಲಾಗಿದ್ದಾರೆ. ಸಾಲ, ಸಾಲದ ಮೇಲಿನ ಬಡ್ಡಿ ಎಲ್ಲವೂ ದುಪ್ಪಟ್ಟಾಗಿದೆ. ಇದರ ನಡುವೆ ಚೆಕ್ ಬೌನ್ಸ್ ಪ್ರಕರಣ ರಾಜ್‌ಪಾಲ್‌ ಯಾದವ್ ನಗುವನ್ನೇ ಕಸಿದುಕೊಂಡಿದೆ. ಈ ಪ್ರಕರಣದಿಂದ ರಾಜ್‌ಪಾಲ್ ಯಾದವ್ ಬೇರೆ ಯಾವ ದಾರಿಯೂ ಕಾಣದೆ ತಿಹಾರ್ ಜೈಲಿಗೆ ಶರಣಾಗಿದ್ದಾರೆ. ಈ ದಾರಿ ಬಿಟ್ಟರೆ ಬೇರೆ ಯಾವ ಮಾರ್ಗವೂ ಉಳಿದಿಲ್ಲ ಎಂದಿದ್ದರು.

26
9 ಕೋಟಿ ರೂಪಾಯಿ ಚೆಕ್ ಬೌನ್ಸ್ ಕೇಸ್

ರಾಜ್‌ಪಾಲ್ ಯಾದವ್ 2010ರಲ್ಲಿ 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಉದ್ಯಮಿಯಿಂದ ಸಾಲ ಪಡೆದು ಸಿನಿಮಾ ನಿರ್ದೇಶನ ಮಾಡಿದ್ದರು. ಆದರೆ ಸಿನಿಮಾ ಯಶಸ್ಸು ಕಾಣಸಲಿಲ್ಲ. ಇತ್ತ ರಾಜ್‌ಪಾಲ್ ಯಾದವ್‌ಗೆ ಇತರ ಸಿನಿಮಾ ಅವಕಾಶಗಳೂ ಸಿಗಲಿಲ್ಲ. ಪರಿಣಾಮ ಈ ಸಾಲ ಬಡ್ಡಿ ಸೇರಿ 9 ಕೋಟಿ ರೂಪಾಯಿ ಆಗಿದೆ. ಮರುಪಾವತಿಗೆ ಹಲವು ಗಡುವು ನೀಡಿದರೂ ಪಾವತಿಸಲು ಸಾಧ್ಯವಾಗಲಿಲ್ಲ. ನ್ಯಾಯಾಲಯದಲ್ಲಿ ಹೆಚ್ಚುವರಿ ಸಮಯ ಕೇಳಿದರೂ ಮರುಪಾವತಿ ಸಾಧ್ಯವಾಗಿರಲಿಲ್ಲ.

36
ಶರಣಾಗುವ ಮುನ್ನ ಕೊನೆಯ ಆಯ್ಕೆ ಹೇಳಿದ್ದ ರಾಜ್‌ಪಾಲ್

ದೆಹಲಿ ಹೈಕೋರ್ಟ್ ರಾಜ್‌ಪಾಲ್ ಮನವಿಯನ್ನು ವಿಚಾರಣೆ ನಡೆಸಿ ಫೆಬ್ರವರಿ ನಾಲ್ಕರ ಒಳಗೆ ಸಾಲ ಮರುಪಾವತಿಸಲು ಸೂಚಿಸಿತ್ತು. ಆದರೆ ಫೆಬ್ರವರಿ ನಾಲ್ಕರಂದು ಮತ್ತೆ ಹೈಕೋರ್ಟ್‌ಗೆ ಮತ್ತಷ್ಟು ಸಮಯ ನೀಡುವಂತೆ ಮನವಿ ಮಾಡಿದ್ದರು. ಆದರೆ ಹೈಕೋರ್ಟ್ ಈ ಮನವಿ ತಿರಸ್ಕರಿಸಿತ್ತು. ಕಾನೂನು ಎಲ್ಲರಿಗೂ ಒಂದೇ ಎಂದಿತ್ತ. ಇದೇ ವೇಳೆ ರಾಜ್‌ಪಾಲ್ ಮಾಧ್ಯಮದ ಮುಂದೆ ಮಾತನಾಡಿದ್ದರು. ನನ್ನ ಬಳಿ ಶರಮಾಗುವುದು ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದಿದ್ದರು.

46
ಮೈ ತುಂಬ ಸಾಲ ಇದೆ, ನೆರವು ಯಾರಲ್ಲಿ ಕೇಳಲಿ

ತುಂಬಾ ಸಾಲ ಇದೆ. ಕೆಲಸ ಇಲ್ಲ. ಸಾಲದ ಸುಳಿಯಲ್ಲಿರುವ ನನಗೆ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಬಾಲಿವುಡ್‌ನಲ್ಲಿ ಎಲ್ಲರೂ ವೈಯುಕ್ತಿಕ. ನೆರವು ನೀಡುವ ಗೆಳೆಯರು ಇಲ್ಲ. ಕೆಲಸವೇ ಸಿಗುತ್ತಿಲ್ಲ, ಇನ್ನು ನೆರವು ಹೇಗೆ. ನನ್ನ ಬಳಿ ಕೊನೆಯ ಆಯ್ಕೆ ಒಂದು ಉಳಿದಿದೆ. ಅದು ಪೊಲೀಸರಿಗೆ ಶರಣವಾಗುವುದು. ಇದನ್ನು ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಕಣ್ಣೀರಿಡುತ್ತಲೇ ಹೇಳಿದ್ದರು.

56
ತಿಹಾರ್ ಜೈಲಿನಲ್ಲಿ ರಾಜ್‌ಪಾಲ್ ಯಾದವ್

ರಾಜ್‌ಪಾಲ್ ಯಾದವ್ ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣ ಪೊಲೀಸರು ಅರೆಸ್ಟ್ ಮಾಡುವ ಮೊದಲೇ ತಿಹಾರ್ ಜೈಲಿಗೆ ಶರಣಾಗಿದ್ದಾರೆ. ಸದ್ಯ ರಾಜ್‌ಪಾಲ್ ಯಾದವ್ ತಿಹಾರ್ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ರಾಜ್‌ಪಾಲ್ ಬ್ಯಾಂಕ್ ಸಾಲ ಮರುಪಾವತಿಸದ ಕಾರಣ ಮುಂಬೈನ ಶಹಜಾನಪುರದಲ್ಲಿದ್ದ ಮನೆ ಸೇರಿದಂತೆ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಮಾಡಲಾಗಿತ್ತು.

66
ಬೀದಿಗೆ ಬಿದ್ದ ರಾಜ್‌ಪಾಲ್ ಕುಟುಂಬ

ಸಾಲದ ಮೇಲೆ ಸಾಲ ಮತ್ತೊಂದೆಡೆ ಬಾಲಿವುಡ್‌ನಿಂದ ಸಿನಿಮಾ ಕೆಲಸಗಳು ಇಲ್ಲ. ಯಾವುದೇ ಸಿನಿಮಾದಲ್ಲಿ ರಾಜ್‌ಪಾಲ್‌ಗೆ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ಸಾಲ ಮರುಪಾವತಿಗಿಂತ ಜೀವನ ನಿರ್ವಹಣೆ ಕಷ್ಟವಾಗಿತ್ತು. ಮನೆ, ಆಸ್ತಿಗಳು ಮುಟ್ಟುಗೋಲಾಗಿದೆ. ಹೀಗಾಗಿ ರಾಜ್‌ಪಾಲ್ ಹಾಗೂ ಕುಟುಂಬ ಬೀದಿಗೆ ಬಿದ್ದಿದೆ.

ಬೀದಿಗೆ ಬಿದ್ದ ರಾಜ್‌ಪಾಲ್ ಕುಟುಂಬ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories