ಮುಂಬೈ(ಜು.15) ಹಿಂದಿ ಕಿರುತೆರೆ ಕಲಾವಿದೆಯೊಬ್ಬರಿಗೆ ಕೊರೋನಾ ಕಾಣಿಸಿಕೊಂಡಿದೆ. ಈ ವಿಚಾರವನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮುಖೇನ ಹಂಚಿಕೊಂಡಿದ್ದಾರೆ. ಇಶ್ಕ್ ಬಾಜ್ ನಟಿ ಶ್ರೀನು ಪರಿಖ್ ಅವರಿಗೆ ಕೊರೋನಾ ಸೋಂಕು ಧೃಡವಾಗಿದೆ. ಇಸ್ಟಾಗ್ರಾಮ್ ಮೂಲಕ ನಟಿ ಅಭಿಮಾನಿಗಳಿಗೆ ಸುದ್ದಿ ತಿಳಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೇ ಕೊರೋನಾ ಇರುವುದು ಗೊತ್ತಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದೇನೆ. ಕೊರೋನಾ ಮಾರಿ ಅಂಟಿಕೊಂಡ ಕಾರಣಕ್ಕೆ ಕೆಲ ದಿನ ನಿಮ್ಮಿಂದ ದೂರ ಇರುತ್ತೇನೆ ಎಂದು ನಟಿ ಹೇಳಿದ್ದಾರೆ. ಕೊರೋನಾ ಸಂದರ್ಭದಲ್ಲಿ ಹೋರಾಟ ಮಾಡುತ್ತಿರುವ ಎಲ್ಲ ಕೊರೋನಾ ವಾರಿಯರ್ಸ್ ಗೆ ಧನ್ಯವಾದ ಎಂದಿದ್ದಾರೆ. ನಟಿ ಶೀಘ್ರ ಗುಣಮುಖರಾಗಿ ಹೊರಬರಲಿ ಎಂದು ಹಾರೈಕೆಗಳು ಹರಿದು ಬಂದಿವೆ. Ishqbaaaz actor Shrenu Parikh has tested positive for Covid-19. ಕಿರುತೆರೆ ನಟಿ ಶ್ರೀನು ಪರಿಖ್ ಗೆ ಕೊರೋನಾ ಪಾಸಿಟಿವ್