ದೇವರಕೊಂಡ ಜೊತೆ ಬರ್ತ್‌ಡೇ ಆಚರಿಸಿದ್ರಾ ರಶ್ಮಿಕಾ ಮಂದಣ್ಣ? ಇಬ್ಬರ ಬೀಚ್ ಫೋಟೋ ವೈರಲ್

Published : Apr 06, 2025, 07:57 PM ISTUpdated : Apr 06, 2025, 08:01 PM IST

ರಶ್ಮಿಕಾ ಮಂದಣ್ಣ 29ನೇ ವರ್ಷದ ಹುಟ್ಟುಹಬ್ಬ ಓಮನ್‌ನಲ್ಲಿ ಆಚರಿಸಿದ್ದಾರೆ. ಯಾರ ಜೊತೆಗೆ ಅನ್ನು ಕುತೂಹಲಕ್ಕೆ ಕೆಲ ಫೋಟೋಗಳು ಉತ್ತರ ನೀಡುತ್ತಿದೆ. ವಿಜಯ್ ದೇವರಕೊಂಡ ಜೊತೆ ಹುಟ್ಟು ಹಬ್ಬ ಆಚರಿಸಿದ್ರಾ ರಶ್ಮಿಕಾ ಮಂದಣ್ಣ? ಇಬ್ಬರ ಬೀಚ್ ಫೋಟೋದಲ್ಲಿರುವ ಸಾಮ್ಯತೆ ಏನು?

PREV
17
ದೇವರಕೊಂಡ ಜೊತೆ ಬರ್ತ್‌ಡೇ ಆಚರಿಸಿದ್ರಾ ರಶ್ಮಿಕಾ ಮಂದಣ್ಣ? ಇಬ್ಬರ ಬೀಚ್ ಫೋಟೋ ವೈರಲ್

ರಶ್ಮಿಕಾ ಮಂದಣ್ಣ ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನು ಓಮನ್‌ ಪ್ರಸಿದ್ಧ ಬೀಚ್ ರೆಸಾರ್ಟ್‌ನಲ್ಲಿ ಆಚರಿಸಿದ್ದಾರೆ. ಹುಟ್ಟು ಹಬ್ಬದ ದಿನ ಕೆಲ ಫೋಟೋಗಳನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದರು. ಈ ವೇಳೆ ರಶ್ಮಿಕಾ ಮಂದಣ್ಣ ಯಾರ ಜೊತೆಗೆ ಹುಟ್ಟು ಹಬ್ಬ ಆಚರಿಸಿದ್ದಾರೆ ಅನ್ನೋ ಪ್ರಶ್ನೆಗಳು, ಕುತೂಹಲ ಎದ್ದಿತ್ತು. ಇದೀಗ ಪೋಸ್ಟ್ ಆಗಿರುವ ಕೆಲ ಫೋಟೋಗಳು ಈ ಕುತೂಹಲಕ್ಕೆ ಉತ್ತರ ನೀಡುತ್ತಿದೆ. 

27

ರಶ್ಮಿಕಾ ಮಂದಣ್ಣ ಓಮನ್ ಬೀಚ್ ರೆಸಾರ್ಟ್‌ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದರು. ಎಪ್ರಿಲ್ 5 ರಂದು ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಎಪ್ರಿಲ್ 6 ರಂದು ಇದೇ ಬೀಚ್‌ನ ಕೆಲ ಫೋಟೋಗಳನ್ನು ಹಂಚಿಕೊಂಡು ಕೆಲ ಸುಳಿವು ನೀಡಿದ್ದರು. ಇಂದಿನ ಡಿಯರ್ ಡೈರಿ ತೋರಿಸುವುದಾಗಿ ರಶ್ಮಿಕಾ ಹೇಳಿದ್ದರು. 

37

ರಶ್ಮಿಕಾ ಮಂದಣ್ಣ ಬೀಚ್‌ನ ಮರಳಿನಲ್ಲಿ ಕುಳಿತಿರುವ ಫೋಟೋಗಳು ಇದಾಗಿತ್ತು. ಈ ಫೋಟೋ ಪೋಸ್ಟ್ ಆದ ಬಳಿಕ ಇದೀಗ ನಟ ವಿಜಯ್ ದೇವರಕೊಂಡ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಬೀಚ್‌ನ ಮರಳಿನಲ್ಲಿ ನಡೆಯುತ್ತಿರುವ, ಕುದುರೆ ಸವಾರಿ ಮಾಡುತ್ತಿರುವ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

47

ರಶ್ಮಿಕಾ ಮಂದಣ್ಣ ತಮ್ಮ ಹುಟ್ಟು ಹಬ್ಬವನ್ನು ವಿಜಯ್ ದೇವರಕೊಂಡ ಜೊತೆಗೆ ಆಚರಿಸಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಕಾರಣ ಇಬ್ಬರ ಫೋಟೋಗಳಲ್ಲಿ ಕೆಲ ಸಾಮತ್ಯತಗಳಿವೆ. ಇಬ್ಬರು ವೈಟ್ ಸ್ಯಾಂಡ್ ಬೀಚ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರ ಹಿಂದಿರುವ ಬೀಚ್ ಸ್ಯಾಂಡ್ ಒಂದೇ ರೀತಿ ಇದೆ. 

57

ಇನ್ನು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಫೋಟೋಗಳಲ್ಲಿ ಬ್ಯಾಕ್‌ಡ್ರಾಪ್‌ನಲ್ಲಿ ಕೆಂಪು ಬಾವುಟ ಒಂದು ಹಾರಾಡುತ್ತಿದೆ. ಇಬ್ಬರ ಫೋಟೋಗಳ ಬ್ಯಾಗ್ರೌಂಡ್ ಒಂದೇ ರೀತಿ ಇದೆ. ಕೆಲ ಮರಗಳು ಸೇರಿದಂತೆ ಬಹುತೇಕ ಚಿತ್ರಣದಲ್ಲಿ ಸಾಮ್ಯತೆ ಇದೆ. ಹೀಗಾಗಿಯೇ ಹಲವರು ಇದು ರಶ್ಮಿಕಾ ಮಂದಣ್ಣ ಬರ್ತ್‌ಡೇ ಸೆಲೆಬ್ರೆಷನ್ ಎಂದು ದೇವರಕೊಂಡ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. 

67

ಇಬ್ಬರು ಓಮನ್ ಬೀಚ್ ರೆಸಾರ್ಟ್‌ನಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಜೊತೆಗೆ ಸತತ ಶೂಟಿಂಗ್‌ನಿಂದ ಬ್ರೇಕ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಫೋಟೋಗಳಲ್ಲಿ ಸಾಮ್ಯತೆ ಇದೆ ನಿಜ. ಆದರೆ ಈ ಕುರಿತು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಯಾವುದೇ ಹೇಳಿಕೆ ಅಥವಾ ಸೂಚನೆ ನೀಡಿಲ್ಲ.

77

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ರೂಮರ್ ಭಾರಿ ಸುದ್ದಿಯಾಗಿದೆ. ಆದರೆ ಈ ಜೋಡಿ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಹಲವು ಬಾರಿ ವಿದೇಶಿ ಟ್ರಿಪ್‌ಗಳಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೊತೆಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೀಗ ರಶ್ಮಿಕಾ ಹುಟ್ಟುಹಬ್ಬ ಆಚರಣೆಯಲ್ಲೂ ಜೊತೆಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

Read more Photos on
click me!

Recommended Stories