ಪೂನಂ ಪಾಂಡೆ ಪ್ರೆಗ್ನೆಂಟಾ? ಏನು ಹೇಳಿದ್ದಾರೆ ನಟಿ ಗೊತ್ತಾ!

First Published | Jun 24, 2021, 11:27 AM IST

ಮಾಡೆಲ್ ಕಮ್‌ ನಟಿ  ಪೂನಂ ಪಾಂಡೆ ಈ ದಿನಗಳಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಆರು ವಾರಗಳ ಗರ್ಭಿಣಿ ಮತ್ತು ಪತಿ, ನಿರ್ದೇಶಕ ಸ್ಯಾಮ್ ಬಾಂಬೆಯೊಂದಿಗೆ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ವರದಿಯಾಗಿದೆ. ಪೂನಂ ಪ್ರೆಗ್ನೆಂಟ್‌ ಎಂಬ ವರದಿ ಸಖತ್‌ ವೈರಲ್‌ ಆಗಿದೆ. ಇದು ನಿಜನಾ? ಇಲ್ಲಿದೆ ಮಾಹಿತಿ.
 

ಈ ದಿನಗಳಲ್ಲಿ ಬಾಲಿವುಡ್ ನಟಿ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ.ನಟಿ ಮೊದಲ ಮಗುವಿನ ತಾಯಿಯಾಗಲಿದ್ದಾರೆ ಎಂಬ ರೂಮರ್‌ ಹರಿದಾಡುತ್ತಿದೆ.
ಜೂಮ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಪೂನಂ ಮಾತನಾಡಿದ್ದಾರೆ.
Tap to resize

ಆದರೆ, ಪೂನಂ ಪಾಂಡೆ ಈ ಎಲ್ಲಾ ವದಂತಿಗಳನ್ನು ನಿರಾಕರಿಸಿದ್ದಾರೆ.
ಅವರು ಪ್ರೆಗ್ನೆಂಟ್‌ ಅಲ್ಲ ಎಂದು ಆನೌನ್ಸ್‌ ಮಾಡುವಂತೆ ಮಾಧ್ಯಮಗಳಿಗೆ ವಿನಂತಿಸಿದ್ದಾರೆ.
ಪೂನಮ್ ಎಲ್ಲಾ ರೂಮರ್ಸ್‌ನ್ನು ತಳ್ಳಿ ಹಾಕಿ, ಅವರು ಗರ್ಭಿಣಿಯಾದಾಗ ಅಧಿಕೃತ ಘೋಷಣೆ ಮಾಡುವ ಮೊದಲ ವ್ಯಕ್ತಿ ನಾನೇ ಆಗಿರುತ್ತೇನೆ ಎಂದು ಹೇಳಿದ್ದಾರೆ.
ಪೂನಮ್ ಮತ್ತು ಸ್ಯಾಮ್ ಬಾಂಬೆ ಎರಡು ವರ್ಷಗಳ ಲೈವ್-ಇನ್ ಸಂಬಂಧದ ನಂತರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿವಾಹವಾದರು.
ತಮ್ಮ ಮದುವೆಯ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.ಮದುವೆಯಾದ ಒಂದು ತಿಂಗಳಲ್ಲಿ, ಪೂನಮ್ ತನ್ನ ಪತಿಯ ವಿರುದ್ಧ ಕೌಟುಂಬಿಕ ಹಿಂಸಾಚಾರದ ದೂರು ದಾಖಲಿಸಿದ್ದರು.
ನಟಿಗೆ ಪತಿ ಹೊಡೆದು ಆಕೆ ಹಲವಾರು ದಿನಗಳವರೆಗೆ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿಯಾಗಿತ್ತು.
ಎಲ್ಲಾ ಸರಿಯಾಗಿದೆ. ನಾನು ನನ್ನ ಮದುವೆಯನ್ನು ಉಳಿಸಿಕೊಂಡೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಹೇಗೆ ಇಷ್ಟು ಬೇಗ ಬಿಟ್ಟು ಕೊಡಲು ಸಾಧ್ಯ? ಸಮಸ್ಯೆಗಳು ಬರುತ್ತವೆ. ಆದರೆ ಪ್ರೀತಿಸಿದ್ದರೆ ಅವರಿಗೆ ಒಂದು ಅವಕಾಶನೀಡಬೇಕು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ,' ಎಂದು ಪ್ರಮುಖ ದಿನ ಪತ್ರಿಕೆಯೊಂದರ ಜೊತೆ ಮಾತನಾಡುತ್ತಾ ಹೇಳಿದ್ದಾರೆ ಪೂನಂ.

Latest Videos

click me!