ರಾಮಾಯಣದ ಲವನಿಗೆ ಈಗ 44 ವರ್ಷ, ದೊಡ್ಡ ಕಂಪನಿಯಲ್ಲಿ ಸಿಇಓ!

First Published May 4, 2020, 6:26 PM IST

ರಾಮಾನಂದ ಸಾಗರ್‌ರವರ ಉತ್ತರ ರಾಮಾಯಣದಲ್ಲಿ ಭಗವಂತ ರಾಮನ ಮಗ ಲವನ ಪಾತ್ರ ನಿಭಾಯಿಸಿದ್ದ ನಟ ಮಯುರೇಶ್ ಕ್ಷೇತ್ರಮಾಡೆಗೀಗ 44 ವರ್ಷ. ರಾಮಾಯಣ ಚಿತ್ರೀಕರಣದ ವೇಳೆ ಮಯುರೇಶ್ ಶಾಲಲಾ ಬಾಲಕರಾಗಿದ್ದರು. ಹೀಗಿದ್ದರೂ ಅವರು ನಟನೆ ಕ್ಷೇತ್ರದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳಲಿಲ್ಲ. ಮಯುರೇಶ್ ಯೂನಿವರ್ಸಿಟಿ ಆಫ್ ಬಾಂಬೆಯಿಂದ ಸ್ಟಾಟಿಸ್ಟಿಕ್ಸ್‌ನಲ್ಲಿ ಪದವಿ ಪಡೆದ ಅವರು ಬಳಿಕ ಮಾಸ್ಟರ್ಸ್ ಆಫ್ ಇಕಾನಮಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಇದಾದ ಬಳಿಕ ಅವರು ಅಮೆರಿಕದ ನ್ಯೂಜರ್ಸಿಗೆ ತೆರಳಿದರು. ಅಲ್ಲಿ ಬಹುದೊಡ್ಡ ಕಂಪನಿಯಲ್ಲಿ ಸಿಇಓ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
 

ಇನ್ನು ಮಯುರೇಶ್ ಕಾರ್ಪೋರೇಟ್ ಕ್ಷೇತ್ರದ ಪ್ರಖ್ಯಾತ ಲೇಖಕರೂ ಹೌದು. ಅವರು ಇಬ್ಬರು ವಿದೇಶೀ ಲೇಖಕರೊಂದಿಗೆ ಸೇರಿ ಸ್ಪೈಟ್ ಆಂಡ್ ಡೆವಲಪ್ಮೆಂಟ್ ಹೆಸರಿನ ಪುಸ್ತಕವನ್ನೂ ಬರೆದಿದ್ದಾರೆ.
undefined
ದೂರದರ್ಶನದಲ್ಲಿ ಮರು ಪ್ರಸಾರವಾಗುತ್ತಿರುವ ರಾಮಾಯಣದ ಪ್ರಸಿದ್ಧಿ ಕಂಡು ದರ್ಶಕರ ಮನದಲ್ಲಿ ರಾಮಾಯಣದ ಪಾತ್ರಧಾರಿಗಳ ಕುರಿತು ತಿಳಿದುಕೊಳ್ಳುವ ಕುತೂಹಲ ದರ್ಶಕರಲ್ಲಿ ಮೂಡಿದೆ. ಹೀಗಿರುವಾಗ ರಾಮಾಯಣದ ಲವ ಅಂದರೆ ಮಯುರೇಶ್ ಕ್ಷೇತ್ರಮಾಡೆ ಕುರಿತು ಒಂದಷ್ಟು ಮಾಹಿತಿ.
undefined
ಮಯುರೇಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಳೆದ ಕೆಲ ಸಮಯದಿಂದ ಕೆಲ ವಿಚಾರಗಳು ಹೃದಯ ಮುಟ್ಟಿವೆ. ನಾನು ಐದು ವರ್ಷ ಪ್ರಾಯದಲ್ಲಿ ನಟನೆ ಆರಂಭಿಸಿದ್ದೆ. ಅಂದು ನನ್ನ ಹೆತ್ತವರಿಗೆ ನಾನು ಉತ್ತರ ರಾಮಾಯಣದಲ್ಲಿ ಲವನ ಪಾತ್ರ ನಿಭಾಯಿಸಲು ಆಯ್ಕೆಯಾಗಿದ್ದೇನೆಂಬ ಸುದ್ದಿ ಸಿಕ್ಕ ದಿನ, ಏಪ್ರಿಲ್ 1989ರ ಆ ಒಂದು ದಿನ ಇಂದಿಗೂ ನೆನಪಿದೆ ಎಂದು ಬರೆದಿದ್ದಾರೆ.
undefined
ಮಯುರೇಶ್ ಅನ್ವಯ ಇಂದಿನಿಂದ ಮೂವತ್ತೊಂದು ವರ್ಷದ ಹಿಂದೆ, ಅಂದು ನಾನು ಹನ್ನೆರಡು ವರ್ಷದವನಾಗಿದ್ದೆ. ಅಂದಿನ ದಿನಗಳ ನೆನಪೇ ರೋಮಾಂಚನ ಹುಟ್ಟಿಸುತ್ತದೆ. ಆದರೆ ಇದಾದ ಬಳಿಕ ನಾನು ನಟನೆಯ ಕ್ಷೇತ್ರವನ್ನು ಬಿಟ್ಟೆ, ಹಾಗೂ 1999 ರಲ್ಲಿ ಅಮೆರಿಕಗೆ ತೆರಳಿದೆ ಎಂದಿದ್ದಾರೆ.
undefined
ಇಷ್ಟೆಲ್ಲಾ ಆದರೂ ಇಂದಿಗೂ ನಾನು ಉತ್ತರ ರಾಮಾಯಣದಲ್ಲಿ ನಾನು ನಿಭಾಯಿಸಿದ್ದ ಲವನ ಪಾತ್ರ ಇಂದಿಗೂ ಮರೆತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕಳೆದೊಂದು ವಾರದಲ್ಲಿ ನನಗೆ ಬಂದ ಸಂದೇಶಗಳು ಹಳೆ ನೆನಪುಗಳನ್ನು ಮತ್ತೆ ಮರುಕಳಿಸಿದೆ.
undefined
ನನ್ನನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿದ ರಾಮಾನಂದ ಸಾಗರ್ ಹಾಗೂ ಇಡೀ ತಂಡಕ್ಕೆ ಋಣಿಯಾಗಿದ್ದೇನೆ. ಆದರೀಗ ನಾನು ಓರ್ವ ವೃತ್ತಿಪರ ನಟನಲ್ಲ. ಆದರೆ ಲವನ ಪಾತ್ರದಲ್ಲಿ ನನಗೆ ಸಿಕ್ಕ ಅನುಭವ ಬ್ಯುಸಿನೆಸ್ ಲೀಡರ್ ಆಗಿ ನಾನು ಕಂಡ ಅಭಿವೃದ್ಧಿಗೆ ಸಕಾರಾತ್ಮಕ ಕೊಡುಗೆ ನೀಡಿದೆ.
undefined
ಎಲ್ಲಾ ದರ್ಶಕರ ಸಂದೇಶಗಳಿಗೆ ಧನ್ಯವಾದಗಳು. ಇದರೊಂದಿಗೆ ನನ್ನ ಹೆತ್ತವರಿಗೆ ಹಾಗೂ ಮಿತ್ರರಿಗೂ ಧನ್ಯವಾದಗಳು. ಅವರು ಯಾರು ಕೂಡಾ ಬಾಲ ನಟನೆಂಬ ಅಹಂಕಾರ ತಲೆಗೆ ಹತ್ತಲು ಬಿಡಲಿಲ್ಲ.
undefined
ಇನ್ನು ಮಯುರೇಶ್‌ಗೆ ಸಿನಿ ಜಗತ್ತಿನ ಹಲವಾರು ಆಫರ್‌ಗಳು ಬಂದಿದ್ದವು. ಆದರೆ ಅವರು ನಟನೆ ಮಾಡಲು ನಿರಾಕರಿಸಿದರು. ಅವರನ್ನು ಟಿವಿಯಲ್ಲಿ ನೋಡುವ ಭಾಗ್ಯ ಲವನ ಪಾತ್ರಕ್ಕಷ್ಟೇ ಸೀಮಿತವಾಯ್ತು.
undefined
click me!