ಸಿನಿಮಾದಿಂದ ರಾಜಕೀಯಕ್ಕೆ ಬಂದು ಗೆದ್ದವರಾರು, ಸೋತವರಾರು?

First Published Aug 24, 2024, 11:24 AM IST

ಭಾರತದಲ್ಲಿ ಅನೇಕ ಪ್ರಮುಖ ನಟರು ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬಂದು ಸಿನಿಮಾ ಖ್ಯಾತಿಯನ್ನು ರಾಜಕೀಯಕ್ಕೆ ಬಳಸಿಕೊಂಡು ಗೆದ್ದವರಾರು, ಸೋತವರಾರು? ಎಂಬ ಮಾಹಿತಿ ಇಲ್ಲಿ ನೋಡಿ..

ವಿಜಯ್

‘ತಲಪತಿ’ ವಿಜಯ್ ಕಾಲಿವುಡ್ ಟಾಪ್ ಸ್ಟಾರ್. ನಾಯಕ ವಿಜಯ್ ತಮಿಳುಗ ವೆಟ್ರಿ ಕಳಗಮ್ ಪಕ್ಷವನ್ನು ಸ್ಥಾಪಿಸಿ, ತಮ್ಮ ರಾಜಕೀಯ ಪ್ರಯಾಣವನ್ನು ಆರಂಭಿಸಿದ್ದಾರೆ. ಇವರು 2026 ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವಿಜಯ್ ಸಿದ್ಧತೆ ನಡೆಸುತ್ತಿದ್ದಾರೆ. ಸ್ಥಾನಿಕ ಸಮಸ್ಯೆಗಳನ್ನು ಬಗೆಹರಿಸಲು, ರಾಜ್ಯ ರಾಜಕೀಯ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರಲು ತಮ್ಮ ಜನಪ್ರಿಯತೆಯನ್ನು ಬಳಸಿಕೊಳ್ಳುವ ಗುರಿಯನ್ನು ವಿಜಯ್ ಹೊಂದಿದ್ದಾರೆ. ವಿಜಯ್ ರಾಜಕೀಯ ಪ್ರಯಾಣ ಇದೀಗ ಆರಂಭವಾಗಿದೆ ಅವರು ಯಶಸ್ವಿಯಾಗುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಿದೆ..

ಸ್ಮೃತಿ ಇರಾನಿ

“ಕ್ಯೋಂಕಿ ಸಾಸ್ ಭೀ ಕಭೀ ಬಹು ಥೀ” ಧಾರಾವಾಹಿಯಲ್ಲಿ ಸ್ಮೃತಿ ಇರಾನಿ ಮಾಡಿದ ಪಾತ್ರ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಟೆಲಿವಿಷನ್ ನಿಂದ ರಾಜಕೀಯಕ್ಕೆ ಬಂದು ಅಧಿಕಾರ ನಡೆಸಿದರು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಶಾಖೆ, ಜವಳಿ ಸಚಿವರಾಗಿ ಸೇವೆ ಸಲ್ಲಿಸಿದರು. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಅವರು ಸೋತರು. ಆದರೆ ಬಿಜೆಪಿ ಪಕ್ಷದಲ್ಲಿ ಸಕ್ರಿಯ ರಾಜಕಾರಣಿಯಾಗಿ ಇದ್ದಾರೆ.

Latest Videos


ಕಮಲ್ ಹಾಸನ್

ಲೋಕನಾಯಕ ಕಮಲ್ ಹಾಸನ್ ಮಕ್ಕಲ್ ನೀಧಿ ಮಯ್ಯಂ (MNM) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ತಮಿಳುನಾಡಿನಲ್ಲಿ ತಮ್ಮ ಪಕ್ಷದ ಮೂಲಕ ಸಾಮಾಜಿಕ ನ್ಯಾಯ, ಸುಧಾರಣೆಗಳ ಬಗ್ಗೆ ಗಮನಹರಿಸಿದರು. ರಾಜಕೀಯವಾಗಿ ಕಮಲ್ ಹಾಸನ್ ವಿಫಲರಾದರು. ಅವರ ಪಕ್ಷ 2021 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಕಮಲ್ ಹಾಸನ್ ಸಹ ಸೋತರು.

ರಜನೀಕಾಂತ್

ಸೂಪರ್ ಸ್ಟಾರ್ ರಜನೀಕಾಂತ್ 2017 ರಲ್ಲಿ ರಾಜಕೀಯಕ್ಕೆ ಬರುವುದಾಗಿ ಘೋಷಿಸಿದರು. 2021 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ತಿಳಿಸಿದರು. ಆದರೆ ರಜಿನೀಕಾಂತ್ ಶಾಶ್ವತವಾಗಿ ರಾಜಕೀಯಕ್ಕೆ ವಿದಾಯ ಹೇಳಿದರು. ಅಭಿಮಾನಿಗಳು ಪ್ರತಿಭಟನೆ ನಡೆಸಿದರೂ ನಿರ್ಧಾರ ಬದಲಾಯಿಸಲಿಲ್ಲ.

ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ 2008 ರಲ್ಲಿ ಆಂಧ್ರಪ್ರದೇಶದಲ್ಲಿ ಪ್ರಜಾ ರಾಜ್ಯಂ ಪಕ್ಷವನ್ನು ಸ್ಥಾಪಿಸಿದರು. 2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾರಾಜ್ಯಂ ಪಕ್ಷ ಹೆಚ್ಚಿನ ಪ್ರಭಾವ ಬೀರಲಿಲ್ಲ. ಹಾಗಾಗಿ ಚಿರಂಜೀವಿ ಪಿಆರ್ ಪಿ ಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ರಾಜಕೀಯದಿಂದ ದೂರ ಉಳಿದಿದ್ದಾರೆ.

ಭಾರತೀಯ ಸಿನಿಮಾದಲ್ಲಿ ನಟ, ನಿರ್ದೇಶಕ, ನಿರ್ಮಾಪಕನಾಗಿ ಕೆಲಸ ಮಾಡಿ ನಂತರ ರಾಜಕೀಯಕ್ಕೆ ಕಾಲಿಟ್ಟ ಪವನ್ ಕಲ್ಯಾಣ್ ಅವರು ಜನಸೇನಾ ಪಕ್ಷ ಕಟ್ಟಿ ಸಂಘಟನೆ ಮಾಡಿ ಕಳೆದ ಆಂಧ್ರಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈಗ ಆಂಧ್ರಪ್ರದೇಶ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಮಾಡತ್ತಿದ್ದಾರೆ.

ನಟಿ ಕಂಗನಾ ರಣಾವತ್ ಕೂಡ ಭಾರತೀಯ ಸಿನಿಮಾದಲ್ಲಿ ಅದರಲ್ಲಿಯೂ ಬಾಲಿವುಡ್‌ನಲ್ಲಿ ಒಂದು ಅವಧಿಯಲ್ಲಿ ಬೇಡಿಕೆ ನಟಿಯಾಗಿದ್ದರು. ಅವರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಲೋಕಸಭಾ ಸಂಸದರಾಗಿ ಆಯ್ಕೆ ಆಗಿದ್ದಾರೆ.

ಕರ್ನಾಟಕದಲ್ಲಿ ಮಂಡ್ಯದ ಗಂಡು ಅಂಬರೀಶ್, ನಟಿ ಸುಮಲತಾ ಅಂಬರೀಶ್, ನಟಿ ರಮ್ಯಾ, ನವರಸ ನಾಯಕ ಜಗ್ಗೇಶ್, ಉಮಾಶ್ರೀ ಸೇರಿದಂತೆ ಹಲವರು ರಾಜಕೀಯಕ್ಕೆ ಪ್ರವೇಶ ಮಾಡಿದ್ದು, ಹಲವು ಸೋಲು ಗೆಲುವುಗಳನ್ನು ಕಂಡಿದ್ದಾರೆ. ಹಾಲಿ ನಟ ಜಗ್ಗೇಶ್ ರಾಜ್ಯಸಭಾ ಸದಸ್ಯರಾಗಿದ್ದಾರೆ. ಉಮಾಶ್ರೀ ವಿಧಾನ ಪರಿಷತ್ ಸದಸ್ಯೆಯಾಗಿದ್ದಾರೆ.

click me!