ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ, ಸಿದ್ಧಾರ್ಥ್ ಮಲ್ಹೋತ್ರಾ ಅವರ 'ಶೇರ್‌ಶಾಹ್' ತಂಡಕ್ಕೆ ಮೆಚ್ಚುಗೆಯ ಪತ್ರವನ್ನು ಬರೆದಿದ್ದಾರೆ. 'ನೈಜ ಯುದ್ಧದ ಸನ್ನಿವೇಶಗಳನ್ನು ಚಿತ್ರಿಸುವಲ್ಲಿ ಅವರ ನಿಜವಾದ ಪ್ರಯತ್ನಕ್ಕಾಗಿ' ಪ್ರಶಂಸಿಸಿದ್ದಾರೆ.
28
'ನೈಜ ಯುದ್ಧದ ಸನ್ನಿವೇಶಗಳನ್ನು ಚಿತ್ರಿಸುವಲ್ಲಿ ಅವರ ನಿಜವಾದ ಪ್ರಯತ್ನಕ್ಕಾಗಿ ಚಿತ್ರತಂಡಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಶೇರ್ ಶಾ ಸಿನಿಮಾ 1999 ರಲ್ಲಿ ಕಾರ್ಗಿಲ್ ಯುದ್ಧದ ಕುರಿತ ಸಿನಿಮಾ
38
ಕಾರ್ಗಿಲ್ ಸಮಯದಲ್ಲಿ ಪಾಕಿಸ್ತಾನದ ಕಪಿಮುಷ್ಠಿಯಿಂದ ಭಾರತೀಯ ಪ್ರದೇಶಗಳನ್ನು ವಶಪಡಿಸಿಕೊಳ್ಳುವಾಗ ರಾಷ್ಟ್ರ ಸೇವೆಯಲ್ಲಿ ತನ್ನ ಪ್ರಾಣವನ್ನೇ ಅರ್ಪಿಸಿದ ವಿಕ್ರಮ್ ಬಾತ್ರಾ ಕಥೆಯನ್ನು ಹೇಳುತ್ತದೆ.
48
ನಿರ್ಮಾಪಕ ಶಬ್ಬೀರ್ ಬಾಕ್ಸ್ ವಾಲಾ ಅವರು ಹಂಚಿಕೊಂಡ ಪತ್ರದಲ್ಲಿ ಸೇನಾ ಮುಖ್ಯಸ್ಥರು ಸಿನಿಮಾ ಕುರಿತು ತಮ್ಮ ಮೆಚ್ಚುಗೆ ತಿಳಿಸಿದ್ದನ್ನು ಕಾಣಬಹುದು.
58
ಕಾರ್ಗಿಲ್ ಯುದ್ಧದ ನೈಜ ಯುದ್ಧದ ಸನ್ನಿವೇಶಗಳನ್ನು ಮತ್ತು ಭಾರತೀಯ ಸೇನೆಯ ಎಸ್ಪೈರಿಟ್-ಡಿ-ಕಾರ್ಪ್ಸ್ ಅನ್ನು ಚಿತ್ರಿಸಲು ಇಡೀ ಸಿಬ್ಬಂದಿ ಮಾಡಿದ ನಿಜವಾದ ಪ್ರಯತ್ನವನ್ನು ನಾನು ಪ್ರಶಂಸಿಸುತ್ತೇನೆ. ಹಿಂದಿನ ಇತರ ಯುದ್ಧ ಸಿನಿಮಾಗಳು ನಮ್ಮೆಲ್ಲರನ್ನೂ ಪ್ರೇರೇಪಿಸುತ್ತದೆ ಎಂದಿದ್ದಾರೆ.
68
ವಿಷ್ಣು ವರ್ಧನ್ ನಿರ್ದೇಶನದ 'ಶೇರ್ಶಾ' ಚಿತ್ರದಲ್ಲಿ ನಟರಾದ ಕೈರಾ ಅಡ್ವಾಣಿ, ಶಿವ ಪಂಡಿತ್ ಮತ್ತು ಸಾಹಿಲ್ ವೈದ್ ಮುಂತಾದವರು ನಟಿಸಿದ್ದಾರೆ.
78
ಪರಮ ವೀರ ಚಕ್ರ ಪ್ರಶಸ್ತಿ ಪಡೆದ ವಿಕ್ರಮ್ ಬಾತ್ರಾ ಪಾತ್ರದಲ್ಲಿ ಸಿದ್ಧಾರ್ಥ್ ನಟಿಸಿದ್ದು ಮರ್‌ಜಾವಾ ನಟನ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
88
ಬಾಲಿವುಡ್ ತಾರೆಯರಾದ ಶಾರುಖ್ ಖಾನ್, ಆಲಿಯಾ ಭಟ್, ರಣವೀರ್ ಸಿಂಗ್, ವಿಕ್ಕಿ ಕೌಶಲ್ ಮತ್ತು ಸೌತ್ ಸ್ಟಾರ್ ಕಮಲ್ ಹಾಸನ್ ಸೇರಿದಂತೆ ಕರಣ್ ಜೋಹರ್ ನಿರ್ಮಿಸಿರುವ 'ಶೇರ್ಶಾ' ಚಿತ್ರದ ಬಗ್ಗೆ ಬಹಳಷ್ಟು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ