ಮೋದಿ ಟೀಕಿಸೋ ಕಿಶೋರ್ ಸೇರಿ ಈ ನಟರು ಕೃಷಿಯಲ್ಲೂ ಎತ್ತಿದ ಕೈ, ಉಳುವಾ ನಟರ ನೋಡಿಲ್ಲಿ!

First Published May 9, 2024, 7:19 PM IST

ಜನಪ್ರಿಯ ಸೆಲೆಬ್ರಿಟಿಗಳು ಕೇವಲ ನಟನೆಯನ್ನೆ ತಮ್ಮ ಉದ್ಯೋಗ ಮಾಡಿಕೊಂಡಿದ್ದಾರೆ, ಅವರಿಗೆ ಅದು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ನೀವು ಅಂದ್ಕೊಂಡ್ರೆ ಅದು ಸುಳ್ಳು. ಯಾಕಂದ್ರೆ ಭಾರತದ ಕೆಲವು ಜನಪ್ರಿಯ ನಟರು ರೈತರು ಕೂಡ ಹೌದು. 
 

ಭಾರತದ ಬೆನ್ನೆಲುಬು ಅಂದ್ರೆ ರೈತರು (farmers). ಅವರನ್ನು ನಮ್ಮ ಹೀರೋಗಳು ಅಂತಾನೆ ಹೇಳಬಹುದು. ಯಾಕಂದ್ರೆ ಅವರು ಬೆಳೆಯದೇ ಇದ್ರೆ ನಾವು ಹೊಟ್ಟೆ ತುಂಬ ತಿನ್ನೋದಕ್ಕೆ ಸಾಧ್ಯವೇ ಇಲ್ಲ.  ಆದರೆ ನಾವು ಹೀರೋ ಅಂದುಕೊಂಡಿರೋದು ಸಿನಿಮಾ ತಾರೆಯರನ್ನು. ಆದರೆ ನಿಮಗೊಂದು ವಿಷ್ಯ ಗೊತ್ತಾ? ಭಾರತದ ಕೆಲವು ಜನಪ್ರಿಯ ಸಿನಿಮಾ ತಾರೆಯರು ರೈತ ಕುಟುಂಬದಿಂದ ಬಂದವರೂ ಇದ್ದಾರೆ, ಇನ್ನೂ ಕೆಲವರು ತಮ್ಮ ಬಿಡುವಿನ ಸಮಯದಲ್ಲಿ ಹೊಲ ಗದ್ದೆ, ತೋಟಗಳಲ್ಲಿ ದುಡಿಯುವ ಮೂಲಕ ಕಳೆದು ಹೋಗುತ್ತಾರೆ. ಅಂತಹ ನಟರು ಯಾರ್ಯಾರಿದ್ದಾರೆ ನೋಡೋಣ. 
 

ಕಿಶೋರ್  (Kishore)
ಕನ್ನಡ, ತಮಿಳು ಸಿನಿಮಾಗಳಲ್ಲಿ ಮಿಂಚುತ್ತಿರುವ ಕಿಶೋರ್ ಸಹ ಬೆಂಗಳೂರಿನ ಹೊರವಲಯದಲ್ಲಿ 12 ಎಕರೆ ಜಮೀನು ಖರೀದಿಸಿ, ಅಲ್ಲಿ ಆರ್ಗಾನಿಕ್ ಫಾರ್ಮಿಂಗ್ ಮಾಡುತ್ತಿದ್ದಾರೆ. ಅಲ್ಲಿಯೇ ಒಂದು ಪುಟ್ಟ ಮನೆಯನ್ನು ಮಾಡಿದ್ದು, ತಮ್ಮ ಪತ್ನಿ ಮತ್ತು ಮಕ್ಕಳ ಜೊತೆ ನಟ ಹೆಚ್ಚಾಗಿ ಇಲ್ಲಿ ಕೆಲಸ ಮಾಡುತ್ತಿರುತ್ತಾರೆ. 

ಆರ್. ಮಾಧವನ್ (R Madhavan)
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ನಟ ಆರ್ ಮಾಧವನ್ ತಮಿಳುನಾಡಿನಲ್ಲಿನ ಒಂದು ಬಂಜರು ಭೂಮಿಯಲ್ಲಿ ತೆಂಗಿನ ಮರಗಳನ್ನು ಬೆಳೆದರು. ಅಷ್ಟೇ ಅಲ್ಲ, ತಮ್ಮ ಸಹೋದರನ ಜೊತೆ ಸೇರಿ ಹಸಿರು ಸಿರಿ, ಮತ್ತು ಪಕ್ಷಿ ಸ್ನೇಹಿ ಪರಿಸರವನ್ನು ನಿರ್ಮಿಸಿದ್ದರು. 

ಪಂಕಜ್ ತ್ರಿಪಾಟಿ (Pankaj Tripathi)
ಸಿನಿಮಾಕ್ಕೆ ಬರೋದಕ್ಕೂ ಮುನ್ನ ನಟ ಪಂಕಜ್ ತ್ರಿಪಾಟಿ ರೈತನಾಗಿ ಕೆಲಸ ಮಾಡುತ್ತಿದ್ದರು. ಬಿಹಾರದಲ್ಲಿ ತ್ರಿಪಾಟಿ ಹೊಲ ಗದ್ದೆ ಹೊಂದಿದ್ದಾರೆ, ಅಲ್ಲದೇ ಇದೀಗ ಮುಂಬೈನಲ್ಲೂ ಜಾಗ ತೆಗೆದುಕೊಂಡಿದ್ದು, ಅಲ್ಲಿ ಅವರು ಮಾವಿನಹಣ್ಣು,  ಹಲಸಿನಹಣ್ಣು, ಸಪೋಟ, ಪಪ್ಪಾಯಿ, ಅರಶಿನ, ಲಿಂಬೆಹಣ್ಣು, ಕರಿಮೆಣಸುಗಳನ್ನು ಬೆಳೆಯುತ್ತಾರೆ. 
 

ನವಾಜುದ್ದೀನ್ ಸಿದ್ಧೀಕ್ (Nawazuddin Siddiqui )
ಪ್ರತಿಭಾನ್ವಿತ ನಟ ನವಾಜುದ್ದೀನ್ ಸಿದ್ದೀಕ್ ರೈತರ ಕುಟುಂಬದಿಂದ ಬಂದವರು. ಇವರ ಅಜ್ಜನ ಕಾಲದಿಂದಲೂ ಹೊಲದಲ್ಲಿಯೇ ದುಡಿದಿದ್ದರು. ಯಾವಾಗೆಲ್ಲಾ ನವಾಜುದ್ದೀನ್ ತಮ್ಮ ಗ್ರಾಮವಾದ ಉತ್ತರಪ್ರದೇಶದ ಬುಧಾನಕ್ಕೆ ಭೇಟಿ ಕೋಡ್ತಾರೋ, ಅವಾಗ ಮಿಸ್ ಮಾಡದೇ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಾರೆ. 

ಸಲ್ಮಾನ್ ಖಾನ್ (Salman Khan)
ಬಾಲಿವುಡ್ ನ ಜನಪ್ರಿಯ ನಟ ಸಲ್ಮಾನ್ ಖಾನ್ ಪನ್ವೇಲ್ ನಲ್ಲಿ ದೊಡ್ಡದಾದ ಫಾರ್ಮ್ ಹೌಸ್ ಹೊಂದಿದ್ದಾರೆ. ಅಲ್ಲಿ ಅವರು ಹೆಚ್ಚಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಮೂಲಕ ಪ್ರಕೃತಿಯ ಜೊತೆ ಕಳೆದು ಹೋಗುತ್ತಾರೆ ಅಥವಾ ಅಲ್ಲಿ ಕುದುರೆಗಳೊಂದಿಗೆ ಸಮಯ ಕಳೆಯುತ್ತಾರೆ. 

ಧರ್ಮೇಂದ್ರ (Dharmendra)
ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ರೈತನ ಮಗ. ಅದೆಷ್ಟೇ ದೊಡ್ಡ ನಟನಾದರೂ ಇಂದಿಗೂ ಅವರು ಅದನ್ನ ಮರೆತಿಲ್ಲ. ಹಾಗಾಗಿಯೇ ಧರ್ಮೇಂದ್ರ ಹೆಚ್ಚಿನ ಸಮಯವನ್ನು ತಮ್ಮ ಫಾರ್ಮ್ ಹೌಸ್ ನಲ್ಲಿಯೇ ಕಳೆಯುತ್ತಾರೆ. ಅದರಲ್ಲೂ ಆರ್ಗಾನಿಕ್ ಫಾರ್ಮಿಂಗ್ ಕಡೆಗೆ ಹೆಚ್ಚು ಮಹತ್ವ ನೀಡುತ್ತಾರೆ. 

ಪ್ರಕಾಶ್ ರೈ (Prakash Rai)
ಲೈಫ್ ಆಫ್ ಪ್ರಕಾಶಂ ಎನ್ನುವ ಸಾವಯವ ಕೃಷಿ ಮಾಡುವ ಜಾಗವನ್ನು ಪ್ರಕಾಶ್ ರೈ ನಡೆಸುತ್ತಿದ್ದಾರೆ. ಇದು ಹೈದರಾಬಾದ್ ನ ಸಂಶದಾಬಾದ್ ನಲ್ಲಿದೆ. ಇಲ್ಲಿ ಬೆಳೆಯುವ ಪ್ರತಿಯೊಂದು ಬೆಳೆಯು ಕೆಮಿಕಲ್ ಫ್ರೀ ಆಗಿದೆ. ಪ್ರಕೃತಿ ಜೊತೆ ಬೆರೆಯಲು ಇಷ್ಟಪಡುವವರು ಇಲ್ಲಿ ಬರಬಹುದು. 

click me!