ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿರುವ ಕಿಚ್ಚ ಸುದೀಪ, ರಾಕಿಂಗ್ ಸ್ಟಾರ್ ಯಶ್, ಶಿವರಾಜ್ ಕುಮಾರ್, ದರ್ಶನ್, ದುನಿಯಾ ವಿಜಯ್, ದರ್ಶನ್ ಸೇರಿದಂತೆ ಬಹುತೇಕರು ರಿಮೇಕ್ ಸಿನಿಮಾದಲ್ಲಿ ನಾಯಕರಾಗಿದ್ದಾರೆ. ಆದರೆ, ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಅವರು ಸುಮಾರು 10 ವರ್ಷಗಳಿಗಿಂತ ಹಿಂದೆಯೇ ಕನ್ನಡ ಸಿನಿಮಾ ರಂಗಕ್ಕೆ ಬಂದಿದ್ದರೂ ಈವರೆಗೆ ರಿಮೇಕ್ ಸಿನಿಮಾದಲ್ಲಿ ನಾಯಕರಾಗಿ ಕಾಣಿಸಿಕೊಂಡಿಲ್ಲ.