ತಾಯಿಯಾಗುತ್ತಿರುವ ವಿಚಾರವನ್ನು ಇಲಿಯಾನಾ ಕಳೆದ ಕೆಲವು ದಿನಗಳ ಹಿಂದೆ ಬಹಿರಂಗ ಪಡಿಸಿದ್ದರು. ಇಲಿಯಾನಾ ಎರಡು ಪೋಟೋ ಶೇರ್ ಮಾಡಿ, ಒಂದು ಫೋಟೋದಲ್ಲಿ ಅಡ್ವೆಂಚರ್ ಆರಂಭವಾಗುತ್ತಿದೆ ಎಂದು ಮಗುವಿನ ಬಟ್ಟೆ ಹಂಚಿಕೊಂಡಿದ್ದರು ಮತ್ತೊಂದು ಫೋಟೋದಲ್ಲಿ ಅಮ್ಮ ಎನ್ನುವ ಪೆಂಡೆಂಟ್ ಧರಿಸಿರುವ ಫೋಟೋ ಹಂಚಿಕೊಂಡಿದ್ದರು. ಜೊತೆಗೆ 'ನನ್ನ ಪುಟ್ಟ ಡಾರ್ಲಿಂಗ್ ಭೇಟಿಯಾಗಲು ಕಾಯಲು ಸಾಧ್ಯವಿಲ್ಲ, ಶೀಘ್ರದಲ್ಲೇ' ಎಂದು ಫೋಟೋಗೆ ಕ್ಯಾಪ್ಷನ್ ನೀಡಿದ್ದರು.